Home Mangalorean News Kannada News ಜಾತ್ಯತೀತ ತತ್ವದ ಪರ ಮತದಾರರ ಓಲವು :ಸುಶೀಲ್ ನೊರೊನ್ಹ

ಜಾತ್ಯತೀತ ತತ್ವದ ಪರ ಮತದಾರರ ಓಲವು :ಸುಶೀಲ್ ನೊರೊನ್ಹ

Spread the love

ಜಾತ್ಯತೀತ ತತ್ವದ ಪರ ಮತದಾರರ ಓಲವು :ಸುಶೀಲ್ ನೊರೊನ್ಹ

ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಲಭಿಸಿದ ಹಿನ್ನೆಲೆಯಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಾತ್ಯತೀತ ಜನತದಳದ ಕಚೇರಿಯ ಮುಂದೆ ಸಿಹಿ ತಿಂಡಿ ವಿತರಿಸಿ ಸಂಭ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಮಾತನಾಡಿ ಗೆದ್ದೆ-ಗೆಲ್ಲುವೆವು ಸಮಿಶ್ರ ಸರಕಾರವನ್ನು ಉರುಳಿಸಿವೆವು ಎಂದು ಬೀಗುತಿದ್ದ ಬಿಜೆಪಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇನ್ನು ಮುಂದೆ ಇವರ ಆಟ ನಡೆಯುವುದಿಲ್ಲ ಎಂದು ಹೇಳಿದರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಮಾತನಾಡಿ ಈ ಉಪಚುನಾವಣೆಯಲ್ಲಿ ಕರ್ನಾಟಕದ ಜನತೆ ಸಂಪೂರ್ಣವಾಗಿ ಜಾತ್ಯತೀತ ತತ್ವದ ಪರ ಓಲವನ್ನು ವ್ಯಕ್ತ ಪಡಿಸಿದ್ದು ಜಾತಿ,ಧರ್ಮ ದೇವರ ಹೆಸರಿನಲ್ಲಿ ಮತ ಕೇಳುವ ಪಕ್ಷವನ್ನು ತಿರಸ್ಕರಿಸಿದ್ದಾರೆ. ಇನ್ನು ಮುಂದೆ ಬಿಜೆಪಿ ಅಪರೇಶನ್ ಕಮಲ ಆಟವನ್ನು ನಿಲ್ಲಿಸಿ ಜವಬ್ದಾರಿಯುತ ವಿರೋಧ ಪಕ್ಷದ ಕೆಲಸವನ್ನು ರಾಜ್ಯದಲ್ಲಿ ಮಾಡಲೆಂದು ಹೇಳಿದರು.

ಸಂಭ್ರಮಾಚರಣೆಯಲ್ಲಿ ಕೊರ್ಪೊರೇಟರ್ ರಮೀಜ ಬಾನು, ಪಕ್ಷದ ನಾಯಕರಾದ ರಾಂ ಗಣೇಶ್, ಗೋಪಾಲಕ್ರಷ್ಣ ಅತ್ತಾವರ,ರತ್ನಾಕರ ಸುವರ್ಣ,ಸುಮತಿ ಹೆಗ್ಡೆ, ಲತೀಫ್ ವಳಚಿಲ್, ಚುಡಾಮಣಿ, ಪ್ರಕಾಶ್ ಗೋಮ್ಸ್, ನಾಸಿರ್,ಮಧುಸುದನ್ ಗೌಡ, ಶಾಲಿನಿ,ಮುನೀರ್ ಮುಕ್ಕಚೇರಿ,ಎನ್.ಪಿ.ಪುಷ್ಪರಾಜನ್, ಸಾಲಿ ಮರವೂರು,ವಿನ್ಸೆಂಟ್ ಡಿಸೋಜ, ಮೊಹಮ್ಮದ್, ಮೊಹಿನಿ, ಕವಿತಾ, ಫ್ರಾನ್ಸಿಸ್, ಲತೀಫ್ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version