ಜಾನುವಾರು ಸಾಗಾಟದ ದಾಖಲೆ ಇದ್ದರೂ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಕ್ರಮ ಜರುಗಿಸಲು ಮುಹಮ್ಮದ್ ಹನೀಫ್ ಆಗ್ರಹ

Spread the love

ಜಾನುವಾರು ಸಾಗಾಟದ ದಾಖಲೆ ಇದ್ದರೂ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ದ ಕ್ರಮ ಜರುಗಿಸಲು ಮುಹಮ್ಮದ್ ಹನೀಫ್ ಆಗ್ರಹ

ಮಂಗಳೂರು : ಸೂಕ್ತ ದಾಖಲೆ ಪತ್ರಗಳೊಂದಿಗೆ ಜಾನುವಾರು ಸಾಗಾಟ ನಡೆಸುತ್ತಿದ್ದ ನನ್ನ ಮೇಲೆ ಉರ್ವಾ ಪೊಲೀಸ್ ಠಾಣೆ ಬಳಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಬೇಕು ಎಂದು ಜಾನುವಾರು ವ್ಯಾಪಾರಿ, ಜೋಕಟ್ಟೆಯ ಮುಹಮ್ಮದ್ ಹನೀಫ್ ಗುಡ್ಡೆಮನೆ ಒತ್ತಾಯಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ತಾಲೂಕು ವ್ಯಾಪ್ತಿಯ ಜೋಕಟ್ಟೆ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಹನೀಫ್ ಎಂಬ ನಾನು ಪಶುಸಂಗೋಪನೆ ಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ವ್ಯಾಪಾರದ ನಿಮಿತ್ತ ನಾನು ರಾಜ್ಯದ ವಿವಿಧ ಕಡೆಗಳಿಂದ ಜಾನುವಾರುಗಳನ್ನು ಖರೀದಿಸಿ ತರುತ್ತಿರುತ್ತೇನೆ. ಅದರಂತೆ, ಮೊನ್ನೆ ಅಂದರೆ ಜೂನ್ 13 ರಂದು ರಾಣೆಬೆನ್ನೂರಿನಿಂದ 10 ಎಮ್ಮೆಗಳನ್ನು ಖರೀದಿ ಮಾಡಿಕೊಂಡು ಬಂದಿದ್ದು, ಅವುಗಳ ಆರೋಗ್ಯ ಮತ್ತು ಅವುಗಳ ಪ್ರಾಯದ ಕುರಿತು ಸ್ಥಳೀಯ ಸರಕಾರಿ ಪಶುವೈದ್ಯರಿಂದ ದೃಢೀಕರಣ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತೇನೆ. ಅಧಿಕೃತ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಂತರವೇ ನಾನು ಈ ಜಾನುವಾರುಗಳನ್ನು ಊರಿಗೆ ಸಾಗಿಸಿದ್ದೆ.

ನಾನು ಖರೀದಿಸಿದ 10 ಎಮ್ಮೆಗಳು ಪೈಕಿ 4 ಎಮ್ಮೆಗಳನ್ನು ನನ್ನ ಅಣ್ಣನ ವಾಹನವಾದ ಅಶೋಕ್ ಲೈಲ್ಯಾಂಡ್ ದೋಸ್(ಪಿಕಪ್) ವಾಹನದಲ್ಲಿ ದಿನಾಂಕ 14-06-2020 ರಂದು ಮಂಗಳೂರು ನಗರದ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದೆ. ಈ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು 5:30ರ ಹೊತ್ತಿಗೆ ನಗರದ ಉರ್ವ ಪೊಲೀಸ್ ಠಾಣೆಯ ಸುಮಾರು 200 ಮೀಟರ್ ಅಂತರದಲ್ಲಿ ಸುಮಾರು 10-15 ಜನರ ಗುಂಪು ಎರಡು ವಾಹನಗಳಲ್ಲಿ ಬಂದು ಏಕಾಏಕಿ ನನ್ನ ವಾಹನವನ್ನು ಅಡ್ಡಗಟ್ಟಿದರು.

ನಂತರ ನನ್ನನ್ನು ವಾಹನದಿಂದ ಹೊರಕ್ಕೆಳೆದು ಅವಾಚ್ಯ ಶಬ್ದಗಳಿಂದ ಬೈದು, ಧರ್ಮ ನಿಂದನೆ ಮಾಡಿ ಕೈಯಿಂದ ಮತ್ತು ಹಲ್ಲೆಟ್ ನಿಂದ ತಲೆಗೆ, ಕಿವಿ ಭಾಗಕ್ಕೆ, ಬೆನ್ನಿಗೆ ಮತ್ತು ಕಾಲಿಗೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಅಲ್ಲದೇ, ಕಾಲಿನಿಂದ ತುಳಿದಿರುತ್ತಾರೆ.

ಅವರ ಪೈಕಿ ಮೂವರಲ್ಲಿ ಓರ್ವ ಕೈಯಲ್ಲಿ ತಲವಾರು, ಇನ್ನೋರ್ವ ಕೈಯಲ್ಲಿ ಕಬ್ಬಿಣದ ರಾಡ್, ಮತ್ತೋರ್ವನ ಕೈಯ್ಯಲ್ಲಿ ಮರದ ಸೊಂಟೆ ಇತ್ತು. ಈ ಮೂವರು ನನ್ನನ್ನು ಕೊಲ್ಲುವ ಉದ್ದೇಶದಿಂದ ತಮ್ಮಲ್ಲಿದ್ದ ಹತ್ತಾರು ಗಳಿಂದ ನನ್ನ ಕಡೆಗೆ ಬೀಸಿ ದಾಳಿ ನಡೆಸಿರುತ್ತಾರೆ. ನಾನು ಅವರ ದಾಳಿಯಿಂದ ತಪ್ಪಿಸಿಕೊಂಡಿದ್ದು, ಒಂದು ವೇಳೆ ಅವರು ಬೀಸಿದ ಹತ್ಯಾರುಗಳ ಏಟು ನನಗೆ ಬಿದ್ದಿದ್ದರೆ ನನ್ನ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು. ಅಲ್ಲದೇ ಅವರು ನನ್ನ ವಾಹನವನ್ನು ಸಂಪೂರ್ಣವಾಗಿ ಜಖಂಗೊಳಿಸಿ ರುತ್ತಾರೆ. ಜೊತೆಗೆ ನನ್ನ ಜೇಬಿನಲ್ಲಿದ್ದ ವ್ಯಾಪಾರ ರೂ.7800 ಹಣವನ್ನು ದೋಚಿ ಬರುತ್ತಾರೆ. ಮೇಲೆ ಹೇಳಿರುವ ಆರೋಪಿಗಳು ನನ್ನನ್ನು ವಾಹನಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುತ್ತಾರೆ. ಈ ಹಲ್ಲೆಯಿಂದ ನನಗೆ ತಲೆಯ ಭಾಗಕ್ಕೆ, ಕಿವಿ ಭಾಗಕ್ಕೆ ಮತ್ತು ಕಾಲಿಗೆ ಗಾಯವಾಗಿದ್ದು, ಈ ಬಗ್ಗೆ ನಾನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ.

ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಉರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ, ಈ ವೇಳೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗುತ್ತಾರೆ. ನಂತರ ಪೊಲೀಸರು ನನ್ನನ್ನು ಮತ್ತು ವಾಹನವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಪೊಲೀಸರು ನನ್ನೊಂದಿಗೆ ಯಾವುದೇ ಹೇಳಿಕೆಯನ್ನು ಪಡೆದಿರುವುದಿಲ್ಲ, ಬದಲಾಗಿ ಪೊಲೀಸರು ಸ್ವತಃ ಹೇಳಿಕೆಗೆ ನನ್ನಿಂದ ಸಹಿಯನ್ನು ಪಡೆದುಕೊಂಡಿರುತ್ತಾರೆ. ಮಾತ್ರವಲ್ಲದೆ, ಜಾನುವಾರು ಸಾಗಾಟ ಕ್ಕೆ ಸಂಬಂಧಿಸಿದ ೩ | ದಾಖಲೆಗಳಿದ್ದರೂ, ನನ್ನ ಮೇಲೆ ಗೋ ಕಳ್ಳತನ ಜಾಮೀನು ರಹಿತ ಸುಳ್ಳು ಪ್ರಕರಣವನ್ನು ದಾಖಲಿಸಿ ನ್ಯಾಯಾಧೀಶರು , ಮುಂದೆ ಹಾಜರುಪಡಿಸಿ ರುತ್ತಾರೆ. ನಂತರ ಸಿಕ್ಕಿದ ಮಾಹಿತಿಯ ಪ್ರಕಾರ, ನನ್ನ ಮೇಲೆ 10-15 ರಷ್ಟು ಮಂದಿ ಹಲ್ಲೆ ನಡೆಸಿದ್ದರೂ ಕೇವಲ 6 ಮಂದಿಯ ಮೇಲೆ ಮಾತ್ರ ದುರ್ಬಲ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿರುವುದಾಗಿ ತಿಳಿದು ಬಂದಿರುತ್ತದೆ. ಈ ಕಾರಣದಿಂದ ದಿನಾಂಕ 17062020 ರಂದು ನಾನುಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿರುತ್ತೇನೆ, ಆದುದರಿಂದ ಅವಾಚ್ಯ ಶಬ್ದಗಳಿಂದ ಬೈದು, ಮಾರಣಾಂತಿಕ ಹಲ್ಲೆ ನಡೆಸಿ, ಲೂಟಿ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂಬುದು ಆಗ್ರಹಿಸಿದ್ದಾರೆ.


Spread the love