ಜಿಪಂ ಸಿಬಂದಿಗೆ ಕೊರೊನಾ ಪಾಸಿಟಿವ್ –ಸ್ಯಾನಿಟೈಜ್ ಮಾಡುವ ಪ್ರಯುಕ್ತ ಮಂಗಳವಾರ ಜಿಪಂ ಕಚೇರಿ ಬಂದ್

Spread the love

ಜಿಪಂ ಸಿಬಂದಿಗೆ ಕೊರೊನಾ ಪಾಸಿಟಿವ್ –ಸ್ಯಾನಿಟೈಜ್ ಮಾಡುವ ಪ್ರಯುಕ್ತ ಮಂಗಳವಾರ ಜಿಪಂ ಕಚೇರಿ ಬಂದ್

ಉಡುಪಿ: ಜಿಲ್ಲಾ ಪಂಚಾಯತ್ ನ ಹೊರಗುತ್ತಿಗೆ ನೌಕರ ಒಬ್ಬರಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಜಿಪಂ ಕಚೇರಿಯನ್ನು ಸ್ಯಾನಿಟೈಜ್ ಮಾಡುವ ಸಲುವಾಗಿ ಮಂಗಳವಾರ ಮುಚ್ಚಲಾಗುವುದು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ಜಿಪಂ ಹೊರಗುತ್ತಿಗೆ ನೌಕರನೋರ್ವನಿಗೆ ಸೋಮವಾರ ಕೋರೊನಾ ಪಾಸಿಟಿವ್ ದೃಢವಾಗಿದ್ದು ಈ ಹಿನ್ನಲೆಯಲ್ಲಿ ನಾಳೆ ಜಿಲ್ಲಾ ಪಂಚಾಯತ್ ಕಚೇರಿಯನ್ನು ಮುಚ್ಚಲಾಗುವುದು ಆದ್ದರಿಂದ ಸಿಇಓ ಸಹಿತ ಎಲ್ಲಾ ಸಿಬ್ಬಂದಿಗಳು ಮಂಗಳವಾರ ಕಚೇರಿಗೆ ಬರುವುದಿಲ್ಲ; ಜಿ.ಪಂ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ಬಳಿಕ ಮತ್ತೆ ಕಾರ್ಯಾಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಮೇ 19ಕ್ಕೆ ಕೊನೆಯಬಾರಿ ಕಚೇರಿಗೆ ಬಂದಿದ್ದು, ಕಚೇರಿಗೆ ಬಂದಾಗ ಆತನಲ್ಲಿ ಶೀತ ಮತ್ತು ಕೆಮ್ಮಿನ ಲಕ್ಷಣಗಳಿತ್ತು ಸೋಂಕಿನ ಲಕ್ಷಣಗಳಿದ್ದ ಕಾರಣ ಆತನ ಗಂಟಲ ಸ್ವಾಬ್ ತೆಗೆಯಲು ಕಳುಹಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕಳೆದ ಐದು ದಿನಗಳಲ್ಲಿ ಅನೇಕ ಬಾರಿ ಜಿಪಂ ಕಚೇರಿ ಸ್ಯಾನಟೈಸ್ ಮಾಡಲಾಗಿದೆ. ಮಂಗಳವಾರ ಮತ್ತೊಮ್ಮೆ ಜಿಪಂ ಕಚೇರಿ ಸ್ಯಾನಿಟೈಸರ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.


Spread the love