ಜಿಲ್ಲಾ ಕಾಂಗ್ರೆಸಿನಿಂದ ರಾಜೀವ್ ಗಾಂಧಿ, ಅರಸು ಜನ್ಮದಿನಾಚರಣೆ
ಉಡುಪಿ: ಮಾಜಿ ಪ್ರಧಾನಿ ದಿ|ರಾಜೀವ್ ಗಾಂಧಿಯವರು ಯುವಕ ಯುವತಿಯರಿಗೆ 18 ವರ್ಷಕ್ಕೆ ಮತದಾನದ ಹಕ್ಕು, ಉಳುವವನೆ ಹೊಲದೊಡೆಯ ಕಾನೂನಿನ ಮೂಲಕ ರಾಜ್ಯದ ಲಕ್ಷಾಂತರ ಮಂದಿಗೆ ಭೂಒಡೆತನ, ಬಡವರಿಗೆ 3,5 ಸೆಂಟ್ಸ್ ಜಾಗ ನೀಡುವದರ ಮೂಲಕ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಅಲ್ಲದೆ ಕಂಪ್ಯೂಟರ್ ಯುಗವನ್ನು ಪ್ರಾರಂಭಿಸಿ ಮಾಹಿತಿ ತಂತ್ರಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ದಿ|ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ|ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್ ಮಾತನಾಡಿ ಸಂವಿಧಾನದ 73-74ರ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆಯ ವಿಕೇಂದ್ರಿಕರಣವನ್ನು ರಾಜೀವ್ ಗಾಂಧಿ ಮಾಡಿದ್ದರು ಅಲ್ಲದೆ ಅರಸು ಅವರು ಬಡವರಿಗಾಗಿ ಹಲವು ಜನಪರ ಕಾರ್ಯಕ್ರಮವನ್ನು ನೀಡಿದ್ದರು ಎಂದರು
ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಯತೀಶ್ ಕರ್ಕೇರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ, ಅಲೆವೂರು ಹರೀಶ್ ಕಿಣಿ, ಕೇಶವ ಎಂ ಕೋಟ್ಯಾನ್, ಅಶೋಕ್ ಕುಮಾರ್ ಕೊಡವೂರು, ಪಿ. ಅಮೃತ್ ಶೆಣೈ, ಕೀರ್ತಿ ಶಟ್ಟಿ, ಜ್ಯೋತಿ ಹೆಬ್ಭಾರ್, ಜತಿನ್, ಚರಣ್, ರಾಘವೇಂದ್ರ, ಜನಾರ್ಧನ ಭಂಡಾರ್ಕರ್, ಯುವ ಕಾಂಗ್ರೆಸ್ ಉಡುಪಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸದಾಶಿವ, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.