Home Mangalorean News Kannada News ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿಲು ಬಿಜೆಪಿಯಿಂದ ಜಿಲ್ಲಾಧಿಕಾರಿ ಭೇಟಿ

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿಲು ಬಿಜೆಪಿಯಿಂದ ಜಿಲ್ಲಾಧಿಕಾರಿ ಭೇಟಿ

Spread the love

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿಲು ಬಿಜೆಪಿಯಿಂದ ಜಿಲ್ಲಾಧಿಕಾರಿ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಸಲು ಜಿಲ್ಲಾ ಬಿಜೆಪಿ ನಿಯೋಗವು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದರು.

bjp-dc-apeel

ಕೊಳವೆ ಬಾವಿ ಕೊರೆಯುವುದನ್ನು ನಿಷೇದಿಸಿ ಹೊರಪಡಿಸಿರುವ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ತುಂಬೆ ವೆಂಡೆಡ್ ಡ್ಯಾಂನಿಂದ ಸಂತ್ರಸ್ತರಾಗುವ ರೈತರಿಗೆ ಕೇಂದ್ರ ಸರಕಾರದ ಜಲ ಆಯೋಗದ ನೀತಿಯಂತೆ ಪರಿಹಾರವನ್ನು ನೀಡಬೇಕು. ಅಡಿಕೆಗೆ ಕೇಂದ್ರ ಸರಕಾರ ರೂ.160 ಕೋಟಿ ಬೆಂಬಲ ಬೆಲೆ ಘೋಷಿಸಿದ್ದು ರಾಜ್ಯ ಸರಕಾರ ತನ್ನ ಪಾಲಿನ ಶೇ.50 ಪಾಲನ್ನು ಬಿಡುಗಡೆಗೊಳಿಸಬೇಕು. ಮುಂತಾದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿಯನ್ನು ಅರ್ಪಿಸಲಾಯಿತು.

ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಕಿಶೋರ್ ರೈ, ಕ್ಯಾ.ಬೃಜೇಶ್ ಚೌಟ, ಸುದರ್ಶನ್ ಎಂ, ಪ್ರಮುಖರಾದ ರಾಜೇಶ್ ನಾೈಕ್ ಉಳಿಪ್ಪಾಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜೀವ ಭಂಡಾರಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಾಣಜಾಲು, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಸುರೇಶ್ ಆಳ್ವ ಈ ಸಂಧರ್ಭ ಉಪಸ್ಥಿತರಿದ್ದರು.


Spread the love

Exit mobile version