ಜೀವನದಿ ನೇತ್ರಾವತಿ ಉಳಿಸಲು ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಬಿಜೆಪಿ ಬೆಂಬಲ
ಮಂಗಳೂರು: ಬಿರು ಬೇಸಿಗೆಯಿಂದಾಗಿಯೇ ಕಳೆದ ಬಾರಿ ನೇತ್ರಾವತಿ ನದಿ, ತುಂಬೆ ಡ್ಯಾಂ ಬತ್ತಿ ಹೋಗಿರುವುದರಿಂದಾಗಿ ಮಂಗಳೂರಿನ ಹಲವು ಆಸ್ಪತ್ರೆಗಳನ್ನು, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆ ಹಾಗೂ ಹಾಸ್ಟೇಲ್ಗಳನ್ನು ವಾರಗಟ್ಟಲೆ ಮುಚ್ಚಿದ್ದು ಹಸಿ ಹಸಿಯಾಗಿ ನಮ್ಮ ಕಣ್ಣ ಮುಂದೆಯೇ ಇರುವಾಗ, ನೇತ್ರಾವತಿ ನದಿಯನ್ನು ತಿರುಗಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಮಂಗಳೂರು ಸಂಪೂರ್ಣ ಸ್ತಬ್ದವಾಗುವುದರಲ್ಲಿ ಸಂದೇಹ ಉಳಿದಿಲ್ಲ. ರೋಗಿಗಳು, ಜನಸಾಮಾನ್ಯರು, ವಿದ್ಯಾರ್ಥಿಗಳು ಕಂಗಲಾಗುವ ಮುನ್ನ ಸರಕಾರ ಎಚ್ಚೆತ್ತುಕೊಂಡು ಯೋಜನೆಯನ್ನು ನಿಲ್ಲಿಸಬೇಕು.
ದಿನಾಂಕ 10,11,12 ರಂದು ಜರುಗುವ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಮಂಗಳೂರು, ಸುರತ್ಕಲ್, ಮೂಡಬಿದ್ರೆ ಮಂಡಲದ ವೈದ್ಯರುಗಳು ಜಿಲ್ಲಾ / ಮಂಡಲ ಪ್ರಕೋಷ್ಠದ ನಾಯಕರುಗಳಾದ ಡಾ|| ರಾಘವೇಂದ್ರ ಭಟ್, ಡಾ|| ಹರೀಶ್ ಶೆಟ್ಟಿ, ಡಾ|| ಸುಕೇಶ್ ಕೊಟ್ಟಾರಿ, ಡಾ|| ನಿಶಾಂಕ ಶೆಟ್ಟಿಗಾರ್, ಡಾ|| ಅಶ್ವಿನಿ ಉದ್ಯಾವರ್, ಡಾ|| ರಾಘವೇಂದ್ರ, ಡಾ|| ಬಾಲಕೃಷ್ಣ ಮುಂತಾದವರ ನಾಯಕತ್ವದಲ್ಲಿ ರಥಯಾತ್ರೆಯಲ್ಲಿ ಭಾಗವಹಿಸಲಿದ್ದು ನೂರಾರು ಸಂಖ್ಯೆಯಲ್ಲಿ ಜಿಲ್ಲೆಯಾದ್ಯಂತ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವವರು ಈ ರಥ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ಘೋಷಿಸಲಿದ್ದಾರೆ ಎಂದು ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ಡಾ|| ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿರುತ್ತಾರೆ.