ಜುಗಾರಿ ಅಡ್ಡೆಗೆ ಪೊಲೀಸರ ದಾಳಿ – 14 ಮಂದಿ ವಶಕ್ಕೆ
ಮಂಗಳೂರು: ಹಣವನ್ನು ಪಣವಾಗಿಟ್ಟುಕೊಂಡು ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 14 ಮಂದಿಯನ್ನು ಸಿಸಿಬಿ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತರನ್ನು 1) ರಾಜೇಶ್ 2) ಲಕ್ಷ್ಮಣ 3) ಅಶೋಕ್ ಶೆಟ್ಟಿ 4) ಆಶೀರ್ವಾದ್ 5) ಅಶೋಕ್ 6) ಸಂತೋಷ್ 1) ಜಯರಾಜ್ 8) ಸುಧೀರ್ 9) ಸುನಿಲ್ ಕರ್ಕೇರಾ 10) ದಾಸ್ ಪ್ರಕಾಶ್ 11) ಜಾಮೂನ್ 12) ಹರೀಶ್ ಶೆಟ್ಟಿ 13) ಪ್ರವೀಣ್ 14) ಅಬ್ದುಲ್ ನಾಸೀರ್ ಎಂದು ಗುರುತಿಸಲಾಗಿದೆ
ಶನಿವಾರ ರಾತ್ರಿ ರಾತ್ರಿ ತೋಕೂರು ಗ್ರಾಮದ ಪಕ್ಷಿಕೆರೆ ಮುಂಭಾಗದ ರಸ್ತೆಯಲ್ಲಿ ಮೌಂಟ್ ವಿಲ್ಲಾ ಎಂಬ ಮನೆಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ವನ್ನು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಲ್ಕಿ ಪೊಲೀಸರು ಹಾಗೂ ಸಿ.ಸಿ.ಬಿ ಘಟಕದ ಪೊಲೀಸರು ಜೂಜಾಟ ಅಡ್ಡೆಗೆ ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಜೂಜಾಟಕ್ಕೆ ಬಳಸಿದ ರೂ 63,815 ನಗದು ಹಣ , 16 ಮೊಬೈಲ್ ಫೋನ್, 07 ಮೋಟಾರ್ ಸೈಕಲ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಪೊಲೀಸ್ ಆಯುಕ್ತರಾದ ವಿಕಾಶ್ ಕುಮಾರ್ ವಿಕಾಶ್ ಐಪಿಎಸ್, ಅರುಣಾಂಶುಗಿರಿ ಪೊಲೀಸ್ ಉಪ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ವಿನಯ್ ಎ ಗಾಂವ್‌ರ್ (ಅಪರಾಧ ಮತ್ತು ಸಂಚಾರ) ಕೋದಂಡರಾಮ ಪ್ರಭಾರ ಸಹಾಯಕ ಪೊಲೀಸ್ ಆಯುಕ್ತರು ಬೆಂಗಳೂರು ಉತ್ತರ ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶಿವ ಪ್ರಕಾಶ್ , , ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಜಯರಾಮ .ಡಿ ಗೌಡ , ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷರಾದ ಕಬಳಿ ರಾಜ, ಮೂಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ದೇಜಪ್ಪ , ಸಿಸಿಬಿ ಠಾಣೆ ಘಟಕದ ಸಿಬ್ಬಂದಿಗಳು ಹಾಗೂ ಮುಲ್ಕಿ ಪೊಲೀಸ್ ಸಿಬ್ಬಂದಿಗಳು ಸದ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.