ಜುಗಾರಿ ಕೇಂದ್ರಕ್ಕೆ ಪೋಲಿಸರ ಧಾಳಿ- 8 ಮಂದಿ ಬಂಧನ

Spread the love

ಜುಗಾರಿ ಕೇಂದ್ರಕ್ಕೆ ಪೋಲಿಸರ ಧಾಳಿ- 8 ಮಂದಿ ಬಂಧನ

ಮಂಗಳೂರು: ಜುಗಾರಿಯಲ್ಲಿ ನಿರತರಾದ 8 ಮಂದಿಯನ್ನು ಬಂಧಿಸಿ ರೂ 6.06 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡ ಘಟನೆ ಪುಂಜಾಲಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 26ರಂದು ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯಲ್ಲಿರುವ ಆಲ್ಬರ್ಟ್ ಡಿಸೊಜಾ ಎಂಬವರಿಗೆ ಸೇರಿದ ಕಟ್ಟಡದ ಕೆಳ ಅಂತಸ್ತಿನ ಕೋಣೆಯಲ್ಲಿ ಜನರು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟೆಲೆಗಳಿಂದ ಜುಗಾರಿ ಆಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಡಿ ಸಿ ಐ ಬಿ ನೀರಿಕ್ಷಕರಾದ ಸುನೀಲ್ ನಾಯಕ ಹಾಗೂ ಅವರ ಸಿಬ್ಬಂದಿಯವರು ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ಸತೀಶ್ ಸಿ ಹಾಗೂ ಅವರ ಸಿಬ್ಬಂದಿಗಳು ಪಂಚರ ಸಮಕ್ಷಮ ಸ್ಥಳಕ್ಕೆ ದಾಳಿ ಮಾಡಿ ಉಳಾಯಿ – ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ 8 ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ್ದ 18130 ರೂಪಾಯಿ ನಗದು ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ಸೆಟ್ ಗಳು -11.ಬೆಲೆ 23200 ರೂಪಾಯಿ. 52 ಇಸ್ಪೀಟ್ ಎಲೆಗಳು ,ಮತ್ತು ಆಡಲು ಉಪಯೋಗಿಸಿದ ಪ್ಲಾಸ್ಟಿಕ್ ಚೇರ್ ಗಳು16 ಬೆಲೆ 3200 ರೂಪಾಯಿ . ಮತ್ತು ಆಡಲು ಉಪಯೋಗಿಸಿದ ವೃತ್ತಾಕಾರದ ಮರದ ಟೇಬಲ್ ಗಳು-2 ಬೆಲೆ-2000 ರೂಪಾಯಿ ಮತ್ತು ಆಡಲು ಉಪಯೋಗಿಸಿದ ಕೆ ಎ 19 ಎಮ್ ಎಚ್ 0971ನೇ ಸ್ವಿಪ್ಟ್ ಕಾರು ಬೆಲೆ 500000.ಕೆ ಎ 21 ಎಸ್ 2155 ನೇ ಆಕ್ಟಿವಾ ಹೋಂಡಾ ಸ್ಕೂಟರ್-1 ಬೆಲೆ 30000. ಕೆಎ 25ಇಬಿ 9229ನೇ ಮೋಟಾರು ಸೈಕಲ್ ಬೆಲೆ 30000 ಒಟ್ಟು ಮೌಲ್ಯ 6,06,530 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love