Spread the love
ಜುಗಾರಿ ನಿರತರಾದ ಆರು ಮಂದಿಯ ಬಂಧನ
ಮಂಗಳೂರು: ಹಣವನ್ನು ಪಣಕ್ಕಿಟ್ಟು ಜುಗಾರಿಯಲ್ಲಿ ನಿರತರಾದ ಆರು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುನಿಲ, ನಾರಾಯಣ ಪೂಜಾರಿ, ಬದ್ದುದ್ದಿನ್,ಭರತ್ ರಾಜ್,ಲಕ್ಷಿಶ, ಅಶೋಕ ಎಂದು ಗುರುತಿಸಲಾಗಿದೆ.
ಗುರುವಾರದಂದು ಆರೋಪಿಗಳನ್ನು ಬಂಟ್ಟಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಜುಗಾರಿ ಆಟಕ್ಕೆ ಬಳಸಿದ ಇಸ್ಪಿಟು ಎಲೆಗಳು,10,500 ರೂ ದೊರಕಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ಪ್ರಕರಣ ದಾಖಲಾಗಿರುತ್ತದೆ.
Spread the love