ಜುಲೈ 16 ರಂದು ಗ್ರಹಣದ ರಾತ್ರಿ ಪಿಲಿಕುಳದಲ್ಲಿ ಆಕಾಶ ವೀಕ್ಷಣೆ
ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜುಲೈ 16 ರಂದು ರಾತ್ರಿ ಸಂಭವಿಸುವ ಚಂದ್ರ ಗ್ರಹಣ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಗುರು ಮತ್ತು ಶನಿ ಗ್ರಹಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಬಹುದು.
ಈ ಸಮಯದಲ್ಲಿ ಗ್ರಹಣಗಳ ಬಗ್ಗೆ, ನಕ್ಷತ್ರ ಸಮೂಹಗಳ ಬಗ್ಗೆ ವಿವರಣೆ ನೀಡಲಾಗುವುದು. ಗ್ರಹಣವು ರಾತ್ರಿ 1.31 ಗಂಟೆಗೆ ಆರಂಭವಾಗಿ ಬೆಳಿಗ್ಗೆ 4.29 ಗಂಟೆಯ ವರೆಗೆ ಇರುವುದು. ಆಕಾಶ ವೀಕ್ಷಣಾ ಕಾರ್ಯಕ್ರಮವು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನಡೆಯಲಿದ್ದು ಸಾರ್ವಜನಿಕರು ಮತ್ತು ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ. ವಿ. ರಾವ್ ಇವರ ಪ್ರಕಟಣೆ ತಿಳಿಸಿದೆ.