ಜುಲೈ 2ರ ಪ್ರತಿಜ್ಞಾ ಕಾರ್ಯಕ್ರಮದ ಯಶಸ್ಸಿಗೆ ಡಿಜಿಟಲ್ ಯೂಥ್ ಮಹತ್ತರ ಪಾತ್ರ ವಹಿಸಿ- ಹರೀಶ್ ಕಿಣಿ
ಬೆಳ್ತಂಗಡಿ: ಜುಲೈ 2ರಂದು ನಡೆಯಲಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಹಾಗೂ ಮೂವರು ಕಾರ್ಯಾಧ್ಯಕ್ಷ ರ ಕಾಂಗ್ರೆಸ್ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮ “ಪ್ರತಿಜ್ಞಾ” ಯಶಸ್ವಿಯಾಗಲು ಈಗಲೇ ಗ್ರಾಮ ಮಟ್ಟದಲ್ಲಿ ನೇಮಕ ಆಗಿರುವ “ಡಿಜಿಟಲ್ ಯೂಥ್”ನ ಯುವ ಕಾಂಗ್ರೆಸ್ ಕಾರ್ಯಕರ್ತರು ಮಹತ್ತರವಾದ ಪಾತ್ರ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೆಪಿಸಿಸಿ ಸಂಯೋಜಕರಾಗಿ ಬೆಳ್ತಂಗಡಿ (ನಗರ) ಬ್ಲಾಕ್ ಕಾಂಗ್ರೆಸ್ ಸಮಿತಿ ಜವಾಬ್ದಾರಿ ವಹಿಸಿರುವ ಹರೀಶ್ ಕಿಣಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರ ಮಾತಾಡಿ ಮತ್ತೊಮ್ಮೆ ದೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ದೀಕ್ಷೆ ತೊಟ್ಟ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರನ್ನು ಎಲ್ಲಾ ಅಭಿಪ್ರಾಯ ಬೇಧ ಮರೆತು ಮುಖಂಡರು , ಕಾರ್ಯಕರ್ತರು ಬೆಂಬಲಿಸಿ ಕಾರ್ಯೋನ್ಮುಖ ರಾಗಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಗೌಡ, ಕೆಪಿಸಿಸಿ ಸಂಯೋಜಕ ಕೃಷ್ಣಮೂರ್ತಿ ಕಾರ್ಕಳ, ಜಿ. ಪಂ. ಸದಸ್ಯ ಸಾಹುಲ್ ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಪಿಎಂಸಿ ಅಧ್ಯಕ್ಷ ಕೇಶವ್ ಗೌಡ, ತಾ.ಪಂ. ಅಧ್ಯಕ್ಷೆ , ಸಾಮಾಜಿಕ ಜಾಲತಾಣದ ಮುಖಂಡರು ಉಪ್ಥಿತರಿದ್ದರು.