ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016
ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇಂದು ಉರ್ವ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು
ವಿವೇಕ್ ಆಲ್ವ ಮ್ಯಾನೆಜಿಂಗ್ ಟ್ರಸ್ಠಿ, (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ), ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 8 ವರ್ಷದ ಹಿಂದೆ, 38 ಕಂಪನಿಗಳೊಂದಿಗೆ ಆರಂಭವಾಗಿರುವ ಆಳ್ವಾಸ್ ಪ್ರಗತಿಯಲ್ಲಿ ಕಳೆದ ವರ್ಷ 272 ಕಂಪನಿಗಳು ಭಾಗವಹಿಸಿದ್ದವು. 18000 ಸಾವಿರ ಉದ್ಯೋಗಾಕಾಂಕ್ಷಿಗಳಲ್ಲಿ 5,525 ಜನರಿಗೆ ಉದ್ಯೋಗ ದೊರಕಿದೆ. 2015-16ರ ಶೈಕ್ಷಣಿಕ ವರ್ಷದಲ್ಲಿ 106 ಕಂಪನಿಗಳು ಈಗಾಗಲೇ 1043 ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಯ್ಕೆ ಮಾಡಿವೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ವಾರ್ಷಿಕವಾಗಿ ಉತ್ಕøಷ್ಠ ಮಟ್ಟದಲ್ಲಿ ಆಯೋಜಿಸಿದ್ದು, ಈ ಬಾರಿ ಜುಲೈ 2 ಮತ್ತು 3 ರಂದು ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ನಡೆಯಲಿದೆ.
ಗ್ರಾಮೀಣ ಭಾಗದ ಯುವಜನತೆಗೆ ಸೂಕ್ತ ಉದ್ಯೋಗವಕಾಶವನ್ನು ಒದಗಿಸುವ ಉದ್ದೇಶದೊಂದಿಗೆ ಆಳ್ವಾಸ್ ಪ್ರಗತಿ ಆರಂಭಗೊಂಡು, ಇಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಪಕ್ವ ವೇದಿಕೆಯನ್ನು ನಿರ್ಮಿಸುವಲ್ಲಿ ಮತ್ತು ಕಂಪನಿಗಳಿಗೂ ಸೂಕ್ತ ಅಭ್ಯರ್ಥಿಗಳನ್ನು ಒದಗಿಸುವಲ್ಲಿ ಫಲಪ್ರದವಾಗಿದೆ.
ಕಂಪನಿಗಳ ಆತಿಥ್ಯ ಹಾಗೂ ವ್ಯವಸ್ಥೆಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಹಿಸುತ್ತದೆ. ಈ ಉದ್ಯೋಗ ಮೇಳ ಆಳ್ವಾಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ದೇಶದೆಲ್ಲಡೆಯ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಇದು ಉದ್ಯೋಗ ಪಡೆಯುವ ಮುಕ್ತ ವೇದಿಕೆಯಾಗಿದೆ.
ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ಉದ್ಘಾಟನೆಯನ್ನು ಎನ್.ಎಮ್.ಸಿ ಮತ್ತು ಯು.ಎ.ಇ ಎಕ್ಸ್ಚೆಂಜ್ನ ಸಿ.ಇ.ಓ, ಡಾ.ಬಿ.ಆರ್,ಶೆಟ್ಟಿ ಜುಲೈ 2 ರಂದು ನೆರವೇರಿಸಲಿದ್ದಾರೆ.
ಆಳ್ವಾಸ್ ಪ್ರಗತಿ 2016 ರಲ್ಲಿ 400ಕ್ಕೂ ಅಧಿಕ ಕಂಪನಿಗಳು ಈ ಬಾರಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ 150 ಕಂಪನಿಗಳು ನೋಂದಾಯಿಸಿವೆ.
ಆಳ್ವಾಸ್ ಪ್ರಗತಿ 2015 ರಲ್ಲಿ ಭಾಗವಹಿಸಿರುವ ಪ್ರಮುಖ ಕಂಪನಿಗಳೆಂದರೆ, ಒರಾಕಲ್,ಅರ್ನ್ಸ್ಟ್ ಎಂಡ್ ಯಂಗ್, ಐ.ಬಿ.ಎಮ್, ಟಿ.ಸಿ.ಎಸ್, ಆಮೆಜಾನ್,ಬಯೋಕಾನ್, ಆದಾನಿ ಗ್ರೂಪ್ ,ಟೆಕ್ ಮಹೇಂದ್ರ, ಗೋದ್ರೆಜ್, ಟೈಟಾನ್, ಐ.ಟಿ.ಸಿ, ತಾಜ್ ಗ್ರೂಪ್ ,ಐ.ಸಿ.ಐ.ಸಿ.ಐ ಬ್ಯಾಂಕ್, ವಿಪ್ರೋ,ಟಿ.ವಿ.ಎಸ್, ಆಲ್ಕಾಗ್ರೂ,ಎಂಪಸಿಸ್,ಸ್ಟಾಂಡರ್ಡ್ ಚಾಟರ್ಡ್ ಬ್ಯಾಂಕ್,ಆಕ್ಸಿಸ್ ಬ್ಯಾಂಕ್,ಎಮ್.ಆರ್.ಜಿ,ಕಿರ್ಲೊಸ್ಕರ್ ಎಲೆಕ್ಟ್ರಿಕ್,ಐಡಿಯಾ ಇತ್ಯಾದಿ.
ಆಳ್ವಾಸ್ ಪ್ರಗತಿ ಉದ್ಯೋಗ ಮೇಳದ ಮುಖ್ಯ ಉದ್ದೇಶ:
ದ.ಕ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವುದು ಈ ಉದ್ಯೋಗ ಮೇಳದ ಮುಖ್ಯ ಉದ್ದೇಶವಾಗಿದೆ. ಈ ಗ್ರಾಮೀಣ ಪ್ರದೇಶದ ಯುವಕರು ಉದ್ಯೋಗ ಅವಕಾಶಗಳು ಮತ್ತು ಉದ್ಯೋಗ ಮೇಳದ ಮಾಹಿತಿಗಳಿಂದ ವಂಚಿತರಾಗಿರುತ್ತಾರೆ.
ಈ ಬಾರಿಯ ಉದ್ಯೋಗ ಮೇಳದಲ್ಲಿ ಎಲ್ಲ ವಿಭಾಗದ ಕಂಪನಿಗಳು ಭಾಗವಹಿಸಲಿದ್ದು ಅವುಗಳಲ್ಲಿ ಮುಖ್ಯವಾಗಿ, ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಐಟಿಇಎಸ್, ಬಿಎಪ್ಎಸ್ಐ, ಮಾರಾಟ ಮತ್ತು ರಿಟೇಲ್, ಫಾರ್ಮಾ, ಆತಿಥ್ಯ, ಹೆಲ್ತ್ ಕೇರ್, ಶಿಕ್ಷಣ, ಎನ್.ಜಿ.ಓ, ಮತ್ತು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಿದೆ.
ಆಳ್ವಾಸ್ ಪ್ರಗತಿ 2016 ಉದ್ಯೋಗ ಮೇಳದ ವಿಶೇಷತೆಗಳು:
- ಎಲ್ಲ ವಿಭಾಗದ ಪದವೀಧರರಿಗೆ ಟೆಲಿಕಾಂ, ಐಟಿ, ಸೇಲ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳು.
- ಹೋಟೆಲ್ ಮ್ಯಾನೆಂಜ್ಮೆಂಟ್ ಪದವೀಧರರಿಗೆ ಪ್ರೀಮಿಯರ್ ಮತ್ತು ಸ್ಟಾರ್ ಹೋಟೆಲ್ಗಳಲ್ಲಿ ವಿಫುಲ ಉದ್ಯೋಗಾವಕಾಶಗಳು.
- ನರ್ಸಿಂಗ್ ಪದವೀಧರರಿಗೆ ಭಾರತದ ಹೆಸರಾಂತ ಆಸ್ಪತ್ರೆಗಳಲ್ಲಿ ಮತ್ತು ಗಲ್ಫ್ ದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು
- ಮೆಡಿಕಲ್ ಲ್ಯಾಬೋರೆಟರಿ ಟೆಕ್ನಿಶಿಯನ್ ವಿದ್ಯಾರ್ಹತೆ ಹೊಂದಿದವರಿಗೆ ವಿಪುಲ ಉದ್ಯೋಗಾವಕಾಶಗಳು.
- ಐ.ಟಿ.ಐ ಮತ್ತು ಡಿಪ್ಲೊಮಾ ಪದವಿಧರರಿಗೆ ಮ್ಯಾನುಫಾಕ್ಚರಿಂಗ್ ಮತ್ತು ಆಟೋಮೋಬೈಲ್ ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶ.
ಆಳ್ವಾಸ್ ಪ್ರಗತಿ -2016 ರ ಪ್ರಮುಖಾ0ಶಗಳು:
1) ಕ0ಪೆನಿ ಮತ್ತು ಉದ್ಯೋಗಾಕಾ0ಕ್ಷಿಗಳಿಗೆ ಉಚಿತ ನೊ0ದಣೆ ವ್ಯವಸ್ಧೆ ಏರ್ಪಡಿಸಿದ್ದು. ಆಸಕ್ತರು ತಿತಿತಿ.ಚಿಟvಚಿsಠಿಡಿಚಿgಚಿಣi.ಛಿom ನಲ್ಲಿ ನೊ0ದಾಯಿಸಬಹುದು.
2)ಅ0ಡ್ರಾೈಡ್ ಮತ್ತು ಐಓಸ್ ಮೊಬೈಲ್ ಹೊ0ದಿರುವವರು, ತಮ್ಮ ಸ್ಮಾರ್ಟ್ ಫೋನ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿ ಮಾಹಿತಿಯನ್ನು ಪಡೆದು ನೊ0ದಾಯಿಸಬಹುದು.
ಅ0ಡ್ರಾೈಡ್ ಹೊಂದಿರುವವರು-ಗೂಗಲ್ ಆಪ್ ಸ್ಟೋರ್ನಲ್ಲಿ ಮತ್ತು ಐಓಎಸ್ ಹೊಂದಿರುವವರು ಆ್ಯಪ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದು.
3) ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಸ್ಥಾಪಿಸಿದ್ದು ಜುಲೈ 2 ಮತ್ತು 3 ರಂದು ನುರಿತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ನಿಮಿಷ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿಯನ್ನು ಒದಗಿಸಿ ಮಾರ್ಗದರ್ಶನ ನೀಡಲಿದ್ದಾರೆ.
4) ದೂರದಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ವಸತಿ ವ್ಯವಸ್ಧೆಯನ್ನು ಒದಗಿಸಲಾಗುವುದು.
5) ಐ.ಟಿ.ಐ ಅಭ್ಯರ್ಥಿಗಳಿಗೆ ತಮ್ಮ ತಮ್ಮ ಐ.ಟಿ.ಐ ಕೇಂದ್ರಗಳಿಂದ ಬಸ್ಸಿನ ವ್ಯವಸ್ಧೆಯನ್ನು ಏರ್ಪಡಿಸಲಾಗಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನವುಗಳನ್ನು ತಪ್ಪದೆ ತರಬೇಕು:
1) 5-10 ಇತ್ತೀಚಿನ ಭಾವ ಚಿತ್ರ (ಪಾಸ್ ಪೋರ್ಟ್ ಸೈಜ್)
2) ಎಲ್ಲ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ (ಜೆರಾಕ್ಸ್ ಪ್ರತಿ)
3) ಸ್ವ ವಿವರವಿರುವ ಬಯೋಡೆಟಾ
4) ಆನ್ಲೈನ್ ನೋಂದಣಿ ಸಂಖ್ಯೆ
ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು ಜುಲೈ 2 ಮತ್ತು 3 ರಂದು ಬೆಳಿಗ್ಗೆ 8.30 ಕ್ಕೆ ಹಾಜರಿರಬೇಕು. ಯಾವುದೇ ಪ್ರಶ್ನೆಗಳಿದ್ದರೆ ಉದ್ಯೋಗಾಕಾಂಕ್ಷಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು 9611686148/8494934852/08258262716.
ಶ್ರೀಮತಿ ಜಯಶ್ರೀ ಸುಧಾಕರ್, ಉದ್ಯೋಗ ಮುಖ್ಯಸ್ಥರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಶ್ರೀ ರವೀಂದ್ರ ಶೆಣೈ, ಉದ್ಯೋಗ ಪ್ರಮುಖರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಶ್ರೀ ಸುಶಾಂತ್ ಅನಿಲ್ ಲೋಬೊ, ಉದ್ಯೋಗ ಪ್ರಮುಖರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದೇವಿಶ್ರೀ, ಮಾಧ್ಯಮ ಸಂಯೋಜಕರು,ಆಳ್ವಾಸ್ ಪ್ರಗತಿ 2016 ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ಧರು.