ಜು 24 ರಂದು ಸಚಿವ ಬೇಗ್ ರಿಂದ ಮನಪಾ ವಿವಿಧ ಕಾಮಾಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆ
ಮಂಗಳೂರು: ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು ರೂ 4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜುಲೈ 24ರಂದು ಶಿಲನ್ಯಾಸ ಹಾಗೂ ಒಂದು ಕೋಟಿ ವೆಚ್ಚದ ಕಾಮಾಗಾರಿಯ ಉದ್ಘಾಟನೆಯನ್ನು ಸಚಿವ ರೋಷನ್ ಬೇಗ್ ಅವರು ನಡೆಸಲಿದ್ದಾರೆ ಎಂದು ಮನಾಪ ಮೇಯರ್ ಹರಿನಾಥ್ ಹೇಳಿದರು.
ಮನಾಪ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಂದರು -ಕಸಬಾ ಬಜಾರಿನಲ್ಲಿ ನಿರ್ಗತಿಕ, ರಾತ್ರಿ ವಸತಿ ರಹಿತ ನಾಗರಿಕರಿಗೆ ಸ್ನೇಹಿ ವಸತಿ ವ್ಯವಸ್ಥೆಯ ನೆಲ ಅಂತಸ್ತು ಕಟ್ಟಡವನ್ನು 99.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಉದ್ಗಾಟನೆ ಅಂದು ನಡೆಯಲಿದೆ. ರೂ 99.85 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನದ ಭೋಜನ ಗೃಹ ನಿರ್ಮಾಣ, ರೂ 50 ಲಕ್ಷ ವೆಚ್ಚದ ಅಳಕೆ ಮಾರುಕಟ್ಟೆಯ ಮೊದಲ ಹಂತದ ನಿರ್ಮಾಣ, ರೂ 1 ಕೋಟಿ ವೆಚ್ಚದ ಕಾವೂರು ಪ್ರದೇಶದ ಮಾರುಕಟ್ಟೆಯ ಮೊದಲ ಹಂತ ನಿರ್ಮಾಣ, ಹಾಗೂ ರೂ 1.5 ಕೋಟಿ ವೆಚ್ಚದ ಕಾವೂರು ಜಂಕ್ಷನ್ ಅಭಿವೃದ್ಧಿಗೆ ಸಚಿವ ಬೇಗ್ ಅವರು ಶಿಲನ್ಯಾಸ ನೆರವೇರಿಸಲಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯುಟಿ ಖಾದರ್, ಶಾಸಕರಾದ ಜೆ ಆರ್ ಲೋಬೊ, ಮೋಯ್ದಿನ್ ಬಾವಾ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ;’ಸೋಜಾ, ಜಿಲ್ಲಾಧಿಕಾರಿ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್, ಮಾಜಿ ಮೇಯರ್ ಜಸಿಂತಾ ಆಲ್ಫ್ರೇಡ್, ಲ್ಯಾನ್ಸ್ ಲೋಟ್ ಪಿಂಟೊ, ಶಶಿಧರ್ ಹೆಗ್ಡೆ, ಅಪ್ಪಿ ಇನ್ನಿತರರು ಉಪಸ್ಥಿತರಿದ್ದರು.