Home Mangalorean News Kannada News ಜು. 27-28: ಉಡುಪಿಯಲ್ಲಿ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟ

ಜು. 27-28: ಉಡುಪಿಯಲ್ಲಿ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟ

Spread the love

ಜು. 27-28: ಉಡುಪಿಯಲ್ಲಿ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟ

ಉಡುಪಿ: ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮಲ್ಪೆ ಇವರ ವತಿಯಿಂದ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಪಂದ್ಯಾಟ ಉಡುಪಿ ಅಜ್ಜರಕಾಡು ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಜುಲೈ 27-28 ರಂದು ನಡೆಯಲಿದೆ ಎಂದು ಕ್ಲಬ್ ನ ಸದಸ್ಯ ಪ್ರದೀಪ್ ಶೆಟ್ಟಿ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರಾವಳಿ ಕರ್ನಾಟಕದಲ್ಲಿ ಇಂತಹ ದೊಡ್ಡ ಮಟ್ಟದ ಬ್ಯಾಂಡ್ಮಿಂಟನ್ ಲೀಗ್ ಆಯೋಜಿಸಲಾಗಿದ್ದು ಕರಾವಳಿ ಕರ್ನಾಟಕದ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟವನ್ನು ಸಜ್ಜುಗೊಳಿಸಲಾಗಿದೆ. ಪಂದ್ಯಾಟದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರ್ಯಾಂಕಿಂಗ್ ಆಟಗಾರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಜಿಲ್ಲೆಗಳ ಬ್ಯಾಂಡ್ಮಿಂಟನ್ ಆಟಗಾರರು ಭಾಗವಹಿಸಲಿದ್ದಾರೆ.

ಪಂದ್ಯಾಟಕ್ಕೆ ಈಗಾಗಲೇ 300 ಕ್ಕೂ ಅಧಿಕ ಮಂದಿ ಆಟಗಾರರು ನೋಂದಾಯಿಸಿದ್ದು ಬಿಡ್ಡಿಂಗ್ ಮೂಲಕ 180 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಪಂದ್ಯಾಟದಲ್ಲಿ 10 ತಂಡಗಳಿದ್ದು ಪ್ರತಿ ತಂಡದಲ್ಲಿ 18 ಆಟಗಾರರನ್ನು ಹೊಂದಲಾಗಿದೆ. ಪಂದ್ಯಾಟದಲ್ಲಿ ಗೆದ್ದವರಿಗೆ ಒಟ್ಟು ರೂ 4 ಲಕ್ಷ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತಿದೆ.

ವಿಭಾಗಗಳು: 1. ಪುರಷರ ಒಪನ್ ಡಬಲ್ಸ್, 2. ಪುರುಷರ ಡಬಲ್ಸ್ 30+ ವಯೋಮಿತಿ, 3. ಒಪನ್ ಮಿಕ್ಸಡ್ ಡಬಲ್ಸ್, 4. ಪುರುಷರ ಡಬಲ್ಸ್ 40+ವಯೋಮಿತಿ, 5. ಮಹಿಳೆಯರ ಡಬಲ್ಸ್ 40+ ವಯೋಮಿತಿ

ಭಾಗವಹಿಸುವ ತಂಡಗಳು:
1. ನ್ಯಾಶನಲ್ ಶ್ಮ್ಯಾಶರ್ಸ್ ತೀರ್ಥಹಳ್ಳಿ
2. ಪ್ರಸಾದ್ಮತ್ ವಾರಿಯರ್ಸ್
3. ಈವ್ನಿಂಗ್ ಶಟಲ್ ಫ್ರೆಂಡ್ಸ್ ಅಜ್ಜರಕಾಡು
4. ಮಟ್ಟು ವಾರಿಯರ್ಸ್
5. ರೆಟ್ರೋ ಶ್ಮ್ಯಾಶರ್ಸ್ ಕಾರ್ಕಳ
6. ಬಿಗ್ ಬೀಟರ್ಸ್ ಅಂಬಲಪಾಡಿ
7. ಡೇರಿಂಗ್ ಜಾಗ್ವರ್ಸ್
8. ರೋಶನ್ ಶ್ಮ್ಯಾಶರ್ಸ್ ಕುಂದಾಪುರ
9. ಮಾಲ್ಸಿ ಕೋಸ್ಟಲ್ ಶ್ಮ್ಯಾಶರ್ಸ್
10. ಗ್ಯಾಲಕ್ಸಿ ಸ್ಪೋರ್ಟ್ಸ್

ಕಾರ್ಯಕ್ರಮದ ಉದ್ಘಾಟನೆ ಜುಲೈ 27 ರಂದು ಶನಿವಾರ ಬೆಳಿಗ್ಗೆ ಜರುಗಲಿದ್ದು, ಸಮಾರೋಪ ಸಮಾರಂಭ ಜುಲೈ 28 ರಂದು ಸಂಜೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮೊಗವೀರ ಸಮಾಜದ ಮುಂದಾಳು ನಾಡೋಜ ಡಾ. ಜಿ ಶಂಕರ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಹಿತಿ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೇಶವ ಕೋಟ್ಯಾನ್, ಅಭಿಜಿತ್ ಕೋಟ್ಯಾನ್, ಶಾಲಿನಿ ಶೆಟ್ಟಿ, ಪುನಿತ್, ರಾಹುಲ್ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version