ಜು.31 ರವರೆಗೆ ತಣ್ಣೀರುಬಾವಿ ಟ್ರೀ ಪಾರ್ಕ್ ಸಾರ್ವಜನಿಕರಿಗೆ ನಿರ್ಬಂಧ
ಮಂಗಳೂರು : ಜಿಲ್ಲೆಯಲ್ಲಿ ಹರಡುತ್ತಿರುವ ಕೊರೋನಾ ವೈರಸ್-19ರ ಪ್ರಸರಣವನ್ನು ತಡೆಯುವ ಮುಂಜಾಗೃತಾ ದೃಷ್ಟಿಯಿಂದ ತಣ್ಣೀರುಬಾವಿ ಟ್ರೀಪಾರ್ಕಿನ ನಿರ್ವಹಣಾ ಸಮಿತಿಯ ನಿರ್ಧಾರದಂತೆ ತಣ್ಣೀರುಬಾವಿ ಸಸ್ಯೋದ್ಯಾನವನ್ನು ಜುಲೈ 31 ರವರೆಗೆ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧಿಸಲಾಗಿರುತ್ತದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.