ಜೂನ್ 1 ರಿಂದ ದಕ ಮತ್ತು ಉಡುಪಿ ಜಿಲ್ಲೆಗಳಲ್ಲಿ 15% ದರ ಏರಿಕೆಯೊಂದಿಗೆ ಖಾಸಗಿ ಬಸ್ ಸಂಚಾರ ಆರಂಭ
ಉಡುಪಿ: ಜೂನ್ 1 ಸೋಮವಾರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಲ್ಲಾಳ್ ಹೇಳಿದ್ದಾರೆ.
ಅವರು ಶನಿವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಮತ್ತು ಮಂಗಳೂರುಗಳಲ್ಲಿ ಒಟ್ಟು 415 ಸಿಟಿ ಬಸ್- 2500 ಸರ್ವೀಸ್ ಬಸ್ಸುಗಳಿದ್ದು ಇವುಗಳ ಪೈಕಿ ಶೇ. 25- ಶೇ- 50 ರಷ್ಟು ಬಸ್ ಓಡಿಸಲು ನಿರ್ಧಾರ ಮಾಡಲಾಗಿದ್ದು ಮುಂದೆ ಜನರ ಬೇಡಿಕೆಗಳಿಗೆ ಅನುಸಾರ ಬಸ್ ಸಂಚಾರ ಹೆಚ್ಚಿಸಲಾಗುವುದು.4
2013ರಿಂದ ಬಸ್ಸಿನ ಟಿಕೇಟ್ ದರ್ ಹೆಚ್ಚಿಸಲು ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ ಇತ್ತೀಚೆಗೆ ಕೋವಿಡ್ ಸಮಸ್ಯೆಯ ಬಳಿಕ ಇತ್ತೀಚೆಗೆ ರಾಜ್ಯ ಸರಕಾರ ಶೇ15ರಷ್ಟು ಏರಿಕೆಗೆ ಅವಕಾಶ ನೀಡಿದ್ದು ಅದರಂತೆ ಬಸ್ ದರ ಶೇ.15 ರಷ್ಟು ಏರಿಕೆಗೆ ನಿರ್ಧಾರ ಮಾಡಲಾಗಿದೆ. ನಾವು ಸರಕಾರಕ್ಕೆ ಶೇ.50 ರಷ್ಟು ಏರಿಕೆಗೆ ಬೇಡಿಕೆ ಇರಿಸಿದ್ದು, ಸರ್ಕಾರ ಶೇ.15 ಏರಿಕೆಗೆ ಸಮ್ಮತಿಸಿದೆ. ಕೋವಿಡ್ ಸಮಸ್ಯೆಯ ಕಾರಣಕ್ಕಾಗಿ ರಾಜ್ಯ ಸರ್ಕಾರ ಎರಡು ತಿಂಗಳ ತೆರಿಗೆ ವಿನಾಯಿತಿ ನೀಡಿದೆ ಆದರೆ ಬಸ್ ಮಾಲಕರಿಂದ ಮೂರು ತಿಂಗಳ ವಿನಾಯಿತಿ ಗೆ ಬೇಡಿಕೆ ಇರಿಸಲಾಗಿದೆ ಎಂದರು.
ಬಸ್ಸಿನಲ್ಲಿ ಸರಕಾರ ಮತ್ತು ಜಿಲ್ಲಾಡಳಿತದ ನಿಯಮಾವಳಿಯಂತೆ ಸಾಮಾಜಿ ಅಂತರ ಕಾಯ್ದುಕೊಳ್ಳುವುದರೊಂದಿಗೆ ಶೇ.50 ಪ್ರಯಾಣಿಕರು, ಸ್ಯಾನಿಟೂಸೇಶನ್, ಮಾಸ್ಕ್ ನೊಂದಿಗೆ ಪ್ರಯಾಣ ಮಾಡುವುದು ಕಡ್ಡಾಯವಾಗಿದೆ.
ಉಡುಪಿ ಸಿಟಿ ಬಸ್ ಗಳಲ್ಲಿ ಹಣದ ವಹಿವಾಟು ತಪ್ಪಿಸಲು ಚಲೋ ಟ್ರಾವೆಲ್ ಕಾರ್ಡ್ ಬಳಕೆ ಮಾಡಲಾಗುವುದು. ಬಸ್ಸುಗಳಲ್ಲಿ ಯಾವುದೇ ರೀತಿಯ ವಿದ್ಯಾರ್ಥಿ ಹಾಗೂ ದಿನನಿತ್ಯದ ರಿಯಾಯತಿ ಟಿಕೇಟ್ ಪಾಸ್ ಇರುವುದಿಲ್ಲ ಎಂದು ಅವರು ತಿಳಿಸಿದರು.
ಪರಿಷ್ಕೃತ ದರ ಈ ರೀತಿ ಇದೆ
ಉಡುಪಿ – ಮಂಗಳೂರು – ರೂ.67 (ಹಳೆ ದರ)- ರೂ. 80 (ಹೊಸ ದರ)
ಮಂಗಳೂರು-ಉಡುಪಿ-ಮಣಿಪಾಲ – ರೂ.68 (ಹಳೆ ದರ) -ರೂ. 85(ಹೊಸ ದರ)
ಕಾರ್ಕಳ – ಪಡುಬಿದ್ರೆ- ಮಂಗಳೂರು – ರೂ.55 (ಹಳೆ ದರ)-ರೂ. 65 (ಹೊಸ ದರ)
ಕುಂದಾಪುರ – ಮಂಗಳೂರು – ರೂ.100(ಹಳೆ ದರ) -ರೂ. 120 (ಹೊಸ ದರ)
ಕುಂದಾಪುರ –ಉಡುಪಿ – ರೂ55 (ಹಳೆ ದರ) -ರೂ. 55 (ಹೊಸ ದರ)
ಕಾರ್ಕಳ- ಮೂಡಬಿದ್ರೆ – ಮಂಗಳೂರು – ರೂ52 (ಹಳೆ ದರ) – ರೂ. 62 (ಹೊಸ ದರ)
ಉಡುಪಿ-ಹಿರಿಯಡ್ಕ-ಕಾರ್ಕಳ – ರೂ40 (ಹಳೆ ದರ) -ರೂ. 45 (ಹೊಸ ದರ)
ಸುದ್ದಿಗೋಷ್ಠಿಯಲ್ಲಿ ದಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಚಾತ್ರ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.