Home Mangalorean News Kannada News ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ

Spread the love

ಮ0ಗಳೂರು, : ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2016 ನ್ನು ಜೂನ್ 21ರಂದು ಬೆಳಿಗ್ಗೆ 8 ಗಂಟೆಗೆ ಆಫೀಸರ್ಸ್ ಕ್ಲಬ್, ಹ್ಯಾಟ್‍ಹಿಲ್, ಲಾಲ್ ಬಾಗ್ ಇಲ್ಲಿ ನಡೆಯಲಿದೆ.

ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳ ಒತ್ತಡದಿಂದಾಗಿ ಅನೇಕ ರೀತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬರುತ್ತಿದೆ. ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಯೋಗ ಪದ್ಧತಿಯನ್ನು ತಮ್ಮ ನಿತ್ಯ ಜೀವನ ಶೈಲಿಯಲ್ಲಿ ಅಳವಡಿಸುವುದರಿಂದ ಇಂದ್ರಿಯ ಹಾಗೂ ಮನಸ್ಸುಗಳ ಪ್ರಸನ್ನತೆ ಮೂಡುತ್ತದೆ. ಈ ಮೂಲಕ ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಅತ್ಯುತ್ತಮ ವಿಧಾನವೆನಿಸಿದೆ.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಅಂದು ಬೆಳಿಗ್ಗೆ 8.00 ಗಂಟೆಗೆ ಹಾಜರಾಗಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್ ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
Original R.Pai
8 years ago

Here is something for all those yoga-opposing individuals and communities who refuse to acknowledge their own hatred and disrespect towards sanaathana bhaaratha. As I have repeatedly pointed out, this hatred was taught over centuries by their foreign masters.

“Invade India and outlaw yoga” says Theodore shoebat, a proud religious man from USA!!
https://www.youtube.com/watch?v=-mj8ZTF3QBA

wpDiscuz
Exit mobile version