ಜೂನ್ 24; ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮ ಕಲ್ಯಾಣಪುರದ ಮಿಲಾಗ್ರಿಸ್ ಟ್ರೈ ಸೆಂಟಿನರಿ ಸಭಾಂಗಣದಲ್ಲಿ “ಸಮಾಜಮುಖಿ ಕೆಥೊಲಿಕ್ ಸಭಾ” ಎಂಬ ಧ್ಯೇಯ ವಾಕ್ಯದೊಂದಿಗೆ ಜೂನ್ 24ರ ಬೆಳಿಗ್ಗೆ 10.30ಕ್ಕೆ ಜರುಗಲಿದೆ.
ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಉದ್ಘಾಟಿಸಲಿದ್ದು, ಪ್ರಮುಖ ಭಾಷಣಕಾರರಾಗಿ ಮಾಜಿ ಕೇಂದ್ರಿಯ ಅಧ್ಯಕ್ಷ ಎಲ್ ರೊಯ್ ಕಿರಣ್ ಕ್ರಾಸ್ತಾ ಅವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನೆಹರು ಯುವಕೇಂದ್ರ ಉಡುಪಿ ಇದರ ಮುಖ್ಯ ಸಮನ್ವಯಾಧೀಕಾರಿ ವಿಲ್ ಫ್ರೆಡ್ ಡಿಸೋಜಾ, ಎಐಸಿಯು ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ, ರಾಜ್ಯಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಕೆಥೊಲಿಕ್ ಸಭಾ ಮಂಗಳೂರು ಇದರ ನಿರ್ಗಮನ ಅಧ್ಯಕ್ಷ ಅನಿಲ್ ಲೋಬೊ ಆಗಮಿಸಲಿದ್ದಾರೆ. ಇವರೊಂದಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕಲ್ಯಾಣಪುರ ವಲಯ ಧರ್ಮಗುರು ವಂ ಲಾರೆನ್ಸ್ ಡಿ’ಸೋಜಾ, ಕೆಥೊಲಿಕ್ ಸಭಾ ಮಂಗಳೂರು ಇದರ ನೂತನ ಅಧ್ಯಕ್ಷ ರೊಲ್ಫಿ ಡಿಕೋಸ್ತಾ, ಕಾರ್ಯದರ್ಶಿ ಸೆಲೆಸ್ತಿನ್ ಡಿಸೋಜಾ, ಉಡುಪಿ ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ ಗೌರವ ಉಪಸ್ಥಿತಿಯಲ್ಲಿರಲಿದ್ದಾರೆ.
ಕಾರ್ಯಕ್ರದಲ್ಲಿ ಅಲ್ಫೋನ್ಸ್ ಡಿಸೋಜಾ ಬ್ರಹ್ಮಾವರ ಇವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ಹಿಮಾಚಲ ಪ್ರದೇಶ ರಾಜ್ಯ ಸರಕಾರದ ಅಂಚೆ ಚೀಟಿ ಗೌರವಕ್ಕೆ ಪಾತ್ರರಾದ ಸಿಸ್ಟರ್ ಜೆಸಿಂತಾ ನೊರೊನ್ಹಾ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮರ್ವಿನ್ ಡಿಸೋಜಾ, ಸಂದೇಶ ಪ್ರಶಸ್ತಿ ಪುರಸ್ಕೃತ ವಿಲ್ಸನ್ ಒಲಿವೇರಾ, ರಾಷ್ಟ್ರೀಯ ಶ್ರೇಷ್ಠ ಅಂಗನವಾಡಿ ಪ್ರಶಸ್ತಿ ಪುರಸ್ಕೃತ ಡೆಲ್ಫಿನ್ ಡಿಸೋಜಾ ಇವರನ್ನು ಸಹ ಸನ್ಮಾನಿಸಲಾಗುವುದು ಎಂದು ನಿರ್ಗಮನ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮತ್ತು ನೂತನ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.