Home Mangalorean News Kannada News ಜೂನ್ 30 : ಕಲಾಕುಲ್ ವತಿಯಿಂದ ಎರಡು ನಾಟಕಗಳ ಕಲಾಕುಲೋತ್ಸವ್

ಜೂನ್ 30 : ಕಲಾಕುಲ್ ವತಿಯಿಂದ ಎರಡು ನಾಟಕಗಳ ಕಲಾಕುಲೋತ್ಸವ್

Spread the love

ಜೂನ್ 30 : ಕಲಾಕುಲ್ ವತಿಯಿಂದ ಎರಡು ನಾಟಕಗಳ ಕಲಾಕುಲೋತ್ಸವ್

ಮಾಂಡ್ ಸೊಭಾಣ್ ನಾಟಕ ರೆಪರ್ಟರಿ ಕಲಾಕುಲ್ ವತಿಯಿಂದ ಎರಡು ನಾಟಕಗಳ `ಕಲಾಕುಲೋತ್ಸವ್ 2024’ ಇದೇ ಜೂನ್ 30 ರಂದು ನಡೆಯಲಿದೆ. ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಕಾರದಲ್ಲಿ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಸಂಜೆ 5 ಗಂಟೆಯಿಂದ `ಐಸಿಯು’ ಮತ್ತು `ಸಾತ್ವೊ ಉಪಾದೆಸ್’ ಎಂಬ ಎರಡು ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕಗಳಿಗೆ ಉಚಿತ ಪ್ರವೇಶವಿರಲಿದೆ.

ಈ ಎರಡೂ ನಾಟಕಗಳನ್ನು ಅರುಣ್ ರಾಜ್ ರೊಡ್ರಿಗಸ್ ಬರೆದು ನಿರ್ದೇಶಿಸಿದ್ದಾರೆ. ವೆನಿಶಾ ಸಲ್ಡಾನ್ಹಾ, ವಿನ್ಸನ್ ಮತಾಯಸ್, ವರ್ಷಿತಾ ಫ್ಲೊರಾ, ಡಾರ್ವಿನ್ ಆಲ್ವಾರಿಸ್, ಜೊಯ್ಸನ್ ಡಿಸೋಜ, ಸಂದೀಪ್ ಮಸ್ಕರೇನ್ಹಸ್, ಸವಿತಾ ಸಲ್ಡಾನ್ಹಾ, ಜೀವನ್ ಸಿದ್ದಿ ನಟಿಸಿದ್ದು, ಏಂಜಲ್ಸ್ ಪಡೀಲ್ ಧ್ವನಿ ವ್ಯವಸ್ಥೆ, ವಿಕಾಸ್ ಕಲಾಕುಲ್ ಬೆಳಕಿನ ವಿನ್ಯಾಸ, ಆನ್ಸ್ಟಿನ್ ಮಚಾದೊ ಬೆಳಕು ನಿರ್ವಹಣೆ, ಸಂದೀಪ್ ಕಲಾಕುಲ್ ವೇದಿಕೆ ವಿನ್ಯಾಸ ಮಾಡಿದ್ದು ವಿನ್ಸನ್ ಹಾಗೂ ಸ್ಯಾಂಡಿ ಸಂಗೀತ ನೀಡಿದ್ದಾರೆ.


Spread the love

Exit mobile version