Home Mangalorean News Kannada News ಜೂನ್ 4-5: ಸಿಇಟಿ ಪರೀಕ್ಷೆ ಬರೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಸಾಲಮೇಳ

ಜೂನ್ 4-5: ಸಿಇಟಿ ಪರೀಕ್ಷೆ ಬರೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಸಾಲಮೇಳ

Spread the love

ಜೂನ್ 4-5:  ಸಿಇಟಿ ಪರೀಕ್ಷೆ ಬರೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಸಾಲಮೇಳ

ಉಡುಪಿ : 2018-19ನೇ ಸಾಲಿನ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಶೇಕಡಾ 2%ರ ಬಡ್ಡಿದರದಲ್ಲಿ ಅರಿವು ಸಾಲಗಳನ್ನು ವಿತರಿಸುವ ಸಲುವಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಕಾರ್ಯಾಲಯ, 3ನೇ ಮಹಡಿ, ಮದರ್ ಆಫ್ ಸ್ಯಾರೋಸ್ ಚರ್ಚ್ ಉಡುಪಿ ಇಲ್ಲಿ ಜೂನ್ 4 ಮತ್ತು 5 ರಂದು ಬೆಳಿಗ್ಗೆ ಸಮಯ 10.00 ರಿಂದ ಕಾರ್ಯಕ್ರಮವನ್ನು ಆಯೋಜಿಸಿದೆ.

ಕರ್ನಾಟಕ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ, ಬುದ್ಧ) ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹಿಂದುಳಿದ ಸಮುದಾಯದ ಪ್ರವರ್ಗ-1ಕ್ಕೆ ಸೇರಿದ (ದಾಸರಿ, ದಾಸರು, ದಾಸ್, ಜೋಗಿ, ಕೊಠಾರಿ, ಕುಡುಬಿ, ನಾಯರಿ/ನಾೈರಿ, ಗೊಲ್ಲ, ಬೋವಿ) ಪ್ರವರ್ಗ-2ಎಗೆ ಸೇರಿದ(ದೋಬಿ, ಮಡಿವಾಳ, ದೇವಾಡಿಗ, ಸೇರೆಗಾರ, ಸೇರ್ವೆಗಾರ, ಸಪಲಿಗ, ಈಡಿಗ, ಬಿಲ್ಲವ, ಕುಂಬಾರ, ಕುಲಾಲ, ಪರಿಯಾಳ, ಕ್ಷೌರಿಕ, ಮಹಾಲೆ, ಚಪ್ಪೇಗಾರ್, ಕುರುಬ, ರಾಜಪುರಿ, ಪದ್ಮಶಾಲಿ, ಗಾಣಿಗ, ಕೋಟೆಗಾರ, ರಾಮಕ್ಷತ್ರಿಯ, ಕೋಟೆಕ್ಷತ್ರಿಯ, ಸ್ಥಾನಿಕ) ಪ್ರವರ್ಗ-3ಎ (ಒಕ್ಕಲಿಗ, ಗೌಡ, ಹೆಗ್ಗಡೆ) ಪ್ರವರ್ಗ-3ಬಿ (ವೀರಶೈವ ಲಿಂಗಾಯಿತ, ಬಂಟ್ಸ್) ಸಮುದಾಯಕ್ಕೆ ಸೇರಿದ 2018-19ನೇ ಸಾಲಿನ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಶೇಕಡಾ 2%ರ ಬಡ್ಡಿದರದಲ್ಲಿ ಅರಿವು ಸಾಲಗಳನ್ನು ವಿತರಿಸುವ ಸಲುವಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಕಾರ್ಯಾಲಯ, 3ನೇ ಮಹಡಿ, ಮದರ್ ಆಫ್ ಸ್ಯಾರೋಸ್ ಚರ್ಚ್ ಉಡುಪಿ ಇಲ್ಲಿ ಜೂನ್ 4 ಮತ್ತು 5 ರಂದು ಬೆಳಿಗ್ಗೆ ಸಮಯ 10.00 ರಿಂದ ಕಾರ್ಯಕ್ರಮವನ್ನು ಆಯೋಜಿಸಿದೆ.

ವಿದ್ಯಾರ್ಥಿಗಳು , ಆದಾಯ ಮತ್ತು ಜಾತಿ ಪ್ರಮಾಣ ಪತ್ರ, (Income & Caste Certificate), ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ – 4 ( Passport size photos Students & Parents – 4), ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್( Ration Card and Aadhaar card),ಸಿಇಟಿ/ನೀಟ್ ಪ್ರವೇಶ ಪತ್ರದ ಪ್ರತಿ (CET/NEET Admission ticket), 10ನೇ ತರಗತಿ ಅಂಕಪಟ್ಟಿ ಪ್ರತಿ, (SSLC Mark card Xerox copy) ದಾಖಲಾತಿಗಳೊಂದಿಗೆ ಆಗಮಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ) ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version