ಜೂನ್ 8 ರಿಂದ ಉಡುಪಿ ಜಿಲ್ಲೆಯಲ್ಲಿ ದೇವಾಲಯಗಳು ಒಪನ್ – ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟಣೆ

Spread the love

ಜೂನ್ 8 ರಿಂದ ಉಡುಪಿ ಜಿಲ್ಲೆಯಲ್ಲಿ ದೇವಾಲಯಗಳು ಒಪನ್ – ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟಣೆ

ಉಡುಪಿ: ಕೇಂದ್ರ ಸರ್ಕಾರದ ಆದೇಶದಂತೆ’ ಉಡುಪಿ ಜಿಲ್ಲೆಯ ಎಲ್ಲಾ ದೇವಸ್ಥಾನಗಳನ್ನು ಜೂನ್ 8 ರಂದು ತೆರೆಯಲಾಗುವುದು, ಆ ಕಾರಣ ಕೋವಿಡ್ -19 (ಕೊರೊನಾ) ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು ಸೂಚನೆ ನೀಡಿದ್ದಾರೆ.

1) ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಟ್ (ಮುಖಗವಸು) ಧರಿಸುವುದು, ಮಾಸ್ಟ್ ಇಲ್ಲದೇ ಇರುವವರು ದೇವಸ್ಥಾನ ಪ್ರವೇಶಕ್ಕೆ ಅವಕಾಶವಿರುವುದಿಲ್ಲ, ಥರ್ಮಲ್ ಸ್ಥಾನ ನಿಂಗ್ ಪರೀಕ್ಷೆಗೆ ಒಳಪಡಿಸಲಾಗುವುದು ಮತ್ತು ನೀಡಲಾ ಸ್ಯಾನಿಟೈಸರ್ ಬಳಸುವುದು,

2) ದೇವಸ್ಥಾನದ ಎದುರುಗಡೆ ಅಳವಡಿಸಿರುವ ನಲ್ಲಿ Scout/lic act Washi) ಯಲ್ಲಿ ಕೈತೊಳೆದುಕೊಂಡು ದೇವಾಲಯಕ್ಕೆ- ಪ್ರವೇಶಿಸುವುದು.

3) ದೇವಾಲಯದ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ (6 ಅಡಿ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು,

4) ಉಸಿರಾಟದ ತೊಂದರೆ, ಜ್ವರ, ಕೆಮ್ಮು ನೆಗಡಿ ಅಂತಹ ರೋಗ ಲಕ್ಷಣಗಳನ್ನು ಹೊಂದಿರುವವರು ದೇವಾಲಯದ ಪ್ರದೇಶ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

5) ಸ್ಮಾರ್ಟ್ ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು (Aarogya Setu App) ಆಪ್ (Download) ಮಾಡಿಕೊಂಡು ಅಳವಡಿಸುವುದು.

6) ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು ಕಾಯಿ ಮುಂತಾದ ಪೂಜಾ ಸಾಮಗ್ರಿಗಳ ತರ ಬಾರದಾಗಿ ವಿನಂತಿ,

7) ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸೇವೆಗಳಿಗೆ ಅವಕಾಶವಿರುವುದಿಲ್ಲ.

8) 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಕರಿಗೆ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಪ್ರವೇಶ ಮಾಡಬಾರದಾಗಿ ಸೂಚಿಸಿದೆ.

9) ಭಕ್ತಾಧಿಗಳು ಪಾದರಕ್ಷೆಯನ್ನು ತಮ್ಮ ವಾಹನದಲ್ಲಿ ಬಿಟ್ಟು ಬರುವುದು.

10) ದೇವಸ್ಥಾನದ ವಠಾರದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.


Spread the love