Home Mangalorean News Kannada News ಜೂ.16: ಎಸ್ ಐಓ ನಿಂದ ಕೊೈಲ ಎಂಡೋಸಲ್ಫಾನ್ ಪಾಲನಾ ಕೇಂದ್ರದಲ್ಲಿ ಇಫ್ತಾರ್ ಕೂಟ

ಜೂ.16: ಎಸ್ ಐಓ ನಿಂದ ಕೊೈಲ ಎಂಡೋಸಲ್ಫಾನ್ ಪಾಲನಾ ಕೇಂದ್ರದಲ್ಲಿ ಇಫ್ತಾರ್ ಕೂಟ

Spread the love
RedditLinkedinYoutubeEmailFacebook MessengerTelegramWhatsapp

ಜೂ.16: ಎಸ್ ಐಓ ನಿಂದ ಕೊೈಲ ಎಂಡೋಸಲ್ಫಾನ್ ಪಾಲನಾ ಕೇಂದ್ರದಲ್ಲಿ ಇಫ್ತಾರ್ ಕೂಟ
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ನ ‘ಹಲವು ಧರ್ಮಗಳು: ಒಂದು ಭಾರತ’ ವಾರ್ಷಿಕ ಸಹೋದರತಾ ಅಭಿಯಾನದ ಪ್ರಯುಕ್ತ ಉಪ್ಪಿನಂಗಡಿಯ ಕೊೈಲ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರದಲ್ಲಿ ಜೂ.16 ರಂದು ಸಂಜೆ 5ಕ್ಕೆ ಇಫ್ತಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.
ಎಸ್ ಐ ಓ  ಪಾಣೆಮಂಗಳೂರು ಮತ್ತು ಉಪ್ಪಿನಂಗಡಿಯ ಜಂಟಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಡಾ. ನಿರಂಜನ್ ರೈ, ಆತೂರು ಆಯಿಷಾ ಎಜುಕೇಶನಲ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷರಾದ ಅಮೀನ್ ಅಹ್ಸನ್, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಕರುಣಾಕರ್, ಎಂ.ಫ್ರೆಂಡ್ಸ್ ಟ್ರಸ್ಟ್‍ನ ಕಾರ್ಯದರ್ಶಿ ರಶೀದ್ ವಿಟ್ಲ ಹಾಗೂ ಎಸ್ ಐ ಓ ದ.ಕ. ಜಿಲ್ಲಾ ಕಾರ್ಯದರ್ಶಿ ಬಾಸಿತ್ ಉಪ್ಪಿನಂಗಡಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದ.ಕ. ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love
RedditLinkedinYoutubeEmailFacebook MessengerTelegramWhatsapp

Exit mobile version