Home Mangalorean News Kannada News ಜೂ. 30 ರಿಂದ-ಜುಲೈ 5 ರ ವರೆಗೆ ಲೇಡಿಗೋಶನ್ ಅಸ್ಪತ್ರೆಯಲ್ಲಿ ಹೊರ, ಒಳರೋಗಿ ಸೇವೆ ಸ್ಥಗಿತ

ಜೂ. 30 ರಿಂದ-ಜುಲೈ 5 ರ ವರೆಗೆ ಲೇಡಿಗೋಶನ್ ಅಸ್ಪತ್ರೆಯಲ್ಲಿ ಹೊರ, ಒಳರೋಗಿ ಸೇವೆ ಸ್ಥಗಿತ

Spread the love

ಜೂ. 30 ರಿಂದ-ಜುಲೈ 5 ರ ವರೆಗೆ ಲೇಡಿಗೋಶನ್ ಅಸ್ಪತ್ರೆಯಲ್ಲಿ ಹೊರ, ಒಳರೋಗಿ ಸೇವೆ ಸ್ಥಗಿತ

ಮಂಗಳೂರು: ಸರಕಾರಿ ಲೇಡಿಗೋಶನ್ ಆಸ್ಪತ್ರೆಯನ್ನು ಸ್ಯಾನಿಟೈಸೇಶನ್ ಮಾಡುವ ಉದ್ದೇಶದಿಂದ ಜೂನ 30ರಿಂದ ಜುಲೈ 5 ರ ವರೆಗೆ ಹೊರರೋಗಿ ಮತ್ತು ಒಳರೋಗಿ ದಾಖಲಾತಿಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಸರಕಾರಿ ಲೇಡಿಗೋಶನ್ ಆಸ್ಪತ್ರೆ ಹೆಚ್ಚಿನ ವೈದ್ಯರು ಮತ್ತು ಉಳಿದ ಎಲ್ಲಾ ವೃಂದದ ಕೆಲವೊಂದು ಸಿಬ್ಬಂದಿಗಳು ಕ್ವಾರಂಟೈನ್ ನಲ್ಲಿ ಇರುವುದರಿಂದ ಸ್ಯಾನಿಟೈಸೇಶನ್ ಮಾಡಬೇಕಾಗಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಜೂನ 30ರಿಂದ ಜುಲೈ 5 ರ ವರೆಗೆ ಹೊರರೋಗಿ ಮತ್ತು ಒಳರೋಗಿ ದಾಖಲಾತಿಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ರೋಗಿಗಳ ಮುಂದಿನ ಚಿಕಿತ್ಸೆಗಾಗಿ Ab-ArK ಯೋಜನೆಯ ಅಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸುವ ಶಿಫಾರಸ್ಸು ಪತ್ರ ನೀಡಲಾಗುವುದು (ರೆಫರಲ್ ಕಾರ್ಡ್). ಹಾಗೂ ದಿ.06.07.2020 ರಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಈ ಮೂಲಕ ಕೋರಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಡಾ.ಶಕುಂತಲಾ.ಎಂ, Ab-ArK ಯೋಜನೆಯ ನೋಡಲ್ ಆಫೀಸರ್, ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08242424001 ಹೆಲ್ತ್ ಡೆಸ್) ಸಂಪರ್ಕಿಸುವುದು.


Spread the love

Exit mobile version