Home Mangalorean News Kannada News ಜೂ.8ರಿಂದ ಧಾರ್ಮಿಕ ಕೇಂದ್ರಗಳು, ವಾಣಿಜ್ಯ ಸಂಸ್ಥೆಗಳು, ಹೊಟೇಲ್ ಗಳು ಪಾಲಿಸಬೇಕಾದ ಮಾರ್ಗಸೂಚಿಗಳು ಪ್ರಕಟ

ಜೂ.8ರಿಂದ ಧಾರ್ಮಿಕ ಕೇಂದ್ರಗಳು, ವಾಣಿಜ್ಯ ಸಂಸ್ಥೆಗಳು, ಹೊಟೇಲ್ ಗಳು ಪಾಲಿಸಬೇಕಾದ ಮಾರ್ಗಸೂಚಿಗಳು ಪ್ರಕಟ

Spread the love

ಜೂ.8ರಿಂದ ಧಾರ್ಮಿಕ ಕೇಂದ್ರಗಳು, ವಾಣಿಜ್ಯ ಸಂಸ್ಥೆಗಳು, ಹೊಟೇಲ್ ಗಳು ಪಾಲಿಸಬೇಕಾದ ಮಾರ್ಗಸೂಚಿಗಳು ಪ್ರಕಟ

ಹೊಸದಿಲ್ಲಿ: 2 ತಿಂಗಳ ನಂತರ ಸೋಮವಾರ (ಜೂ.8)ರಂದು ತೆರೆಯಲಿರುವ ಧಾರ್ಮಿಕ, ವಾಣಿಜ್ಯ ಸಂಸ್ಥೆಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

2 ಹಂತಗಳಲ್ಲಿ ಲಾಕ್ ಡೌನ್ ಅನ್ ಲಾಕ್ ಆಗಲಿದ್ದು, ಮೊದಲನೆ ಹಂತದಲ್ಲಿ ಧಾರ್ಮಿಕ ಸ್ಥಳಗಳು, ಹೊಟೇಲ್ ಗಳು ಮತ್ತು ರೆಸ್ಟೋರೆಂಟ್ ಗಳು ತೆರೆಯಲು ಅವಕಾಶ ನೀಡಲಾಗಿದೆ. ಈಗಾಗಲೇ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಮಾರ್ಗಸೂಚಿಗಳು

►ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಇರಲೇಬೇಕು.

►ಕೋವಿಡ್ 19ನ ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಬೇಕು

►ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಿಸಲು ಅವಕಾಶ

►ಕೋವಿಡ್ 19 ತಡೆಗಟ್ಟುವ ಕುರಿತು ಮಾಹಿತಿ ನೀಡುವ ಪೋಸ್ಟರ್ ಗಳನ್ನು, ಫಲಕಗಳನ್ನು ಅಳವಡಿಸಬೇಕು.
►ಕೋವಿಡ್ 19 ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಿಯೋ ಮತ್ತು ವಿಡಿಯೋ ಕ್ಲಿಪ್ ಗಳನ್ನು ಆಗಾಗ ಪ್ಲೇ ಮಾಡುತ್ತಿರಬೇಕು.

►ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ತಮ್ಮ ವಾಹನಗಳಲ್ಲಿ ಕಳಚುವುದು ಸೂಕ್ತ

►ಅಗತ್ಯವಿದ್ದರೆ ಪ್ರತಿ ವ್ಯಕ್ತಿ ಅಥವಾ ಕುಟುಂಬದವರು ಅವುಗಳನ್ನು ಪ್ರತ್ಯೇಕ ಸ್ಲಾಟ್ ಗಳಲ್ಲಿ ಇರಿಸಬೇಕು.

►ಪಾರ್ಕಿಂಗ್ ಸ್ಲಾಟ್ ಗಳಲ್ಲಿ ಗುಂಪುಗಳನ್ನು ನಿಯಂತ್ರಿಸಬೇಕು ಮತ್ತು ಆವರಣದ ಹೊರಗೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಬಗ್ಗೆ ವ್ಯವಸ್ಥೆಗಳನ್ನು ಮಾಡಬೇಕು.

►ಆವರಣದಲ್ಲಿರುವ ಅಥವಾ ಹೊರಗಿರುವ ಯಾವುದೇ ಅಂಗಡಿಗಳು, ಸ್ಟಾಲ್ ಗಳು, ಕೆಫೆಟೇರಿಯಾಗಳು ಇತ್ಯಾದಿ ಎಲ್ಲಾ ಸಮಯಗಳಲ್ಲೂ ಸುರಕ್ಷಿತ ಅಂತರಗಳನ್ನು ಪಾಲಿಸಲಾಗುತ್ತಿದೆಯೇ ಎಂದು ನೋಡಿಕೊಳ್ಳಬೇಕು

►ಕ್ಯೂಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತ ಅಂತರಗಳನ್ನು ಪಾಲಿಸುವುದಕ್ಕಾಗಿ ಸೂಕ್ತ ಅಂತರದ ಮಾರ್ಕಿಂಗ್ ಗಳನ್ನು ಮಾಡಬಹುದು

►ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಬೇಕು

►ಪ್ರವೇಶಕ್ಕಾಗಿ ಕ್ಯೂಗಳಲ್ಲಿ ನಿಲ್ಲುವಾಗ ಕನಿಷ್ಠ 6 ಅಡಿ ಸುರಕ್ಷಿತ ಅಂತರವನ್ನು ಪಾಲಿಸಬೇಕು

►ಆವರಣ ಪ್ರವೇಶಿಸುವುದಕ್ಕೆ ಮೊದಲು ಜನರು ಸಾಬೂನು ಮತ್ತು ನೀರು ಬಳಸಿ ತಮ್ಮ ಕೈ ಮತ್ತು ಕಾಲುಗಳನ್ನು ತೊಳೆದುಕೊಳ್ಳಬೇಕು

►ಸುರಕ್ಷಿತ ಅಂತರ ನಿಯಮ ಪಾಲಿಸಿ ಆಸನದ ವ್ಯವಸ್ಥೆಗಳನ್ನು ಮಾಡಬೇಕು

►ಏರ್ ಕಂಡಿಶನಿಂಗ್ ಮತ್ತು ವೆಂಟಿಲೇಶನ್ ಗಾಗಿ ಏರ್ ಕಂಡಿಶನ್ ಗಳಲ್ಲಿ 24-30 ಡಿಗ್ರಿ ಸೆಲ್ಸಿಯಸ್ ಗಳ ಸರಾಸರಿಯಲ್ಲಿ ತಾಪಮಾನವನ್ನು ನಿಗದಿಗೊಳಿಸಬೇಕು ಎನ್ನುವ ಸಿಪಿಡಬ್ಲ್ಯುಡಿ ಮಾರ್ಗಸೂಚಿಗಳನ್ನು ಪಾಲಿಸಬೇಕು.

►ಪ್ರತಿಮೆಗಳು, ಮೂರ್ತಿಗಳು ಮತ್ತು ಪವಿತ್ರ ಗ್ರಂಥಗಳ್ನು ಮುಟ್ಟಬಾರದು

►ಕೊರೋನ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ರೆಕಾರ್ಡ್ ಮಾಡಿದ ಭಕ್ತಿಗೀತೆಗಳು, ಪ್ರಾರ್ಥನೆಗಳನ್ನು ಹಾಡಬೇಕು. ಒಟ್ಟಾಗಿ , ಗುಂಪಾಗಿ ಹಾಡುವುದಕ್ಕೆ ಅವಕಾಶವಿಲ್ಲ

►ಸಾಮಾನ್ಯ ಪ್ರಾರ್ಥನೆಯ ಚಾಪೆಗಳನ್ನು ಬಳಸಲು ಅವಕಾಶವಿಲ್ಲ. ಪ್ರತಿಯೊಬ್ಬರು ಅವರದ್ದೇ ಆದ ಚಾಪೆಗಳನ್ನು ತರಬೇಕು.

►ಪ್ರಸಾದ ವಿತರಣೆ, ಪವಿತ್ರ ನೀರು ಸಿಂಪಡಣೆಗೆ ಅವಕಾಶವಿಲ್ಲ

►ಧಾರ್ಮಿಕ ಸ್ಥಳಗಳಲ್ಲಿ ಕಮ್ಯುನಿಟಿ ಕಿಚನ್ ಗಳು, ಅನ್ನದಾನ ಇತ್ಯಾದಿಗಳ ವೇಳೆ ಆಹಾರ ತಯಾರಿಸುವಾಗ ಮತ್ತು ವಿತರಿಸುವಾಗ ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸಬೇಕು

►ಆವರಣದ ನೆಲವನ್ನು ಹಲವು ಬಾರಿ ಸ್ವಚ್ಛಗೊಳಿಸಬೇಕು

►ಆವರಣದಲ್ಲಿ ಯಾವುದಾದರೂ ಶಂಕಿತ, ದೃಢಪಟ್ಟ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಇತರರಿಗಿಂತ ದೂರವಿರುವ ಕೋಣೆಯೊಂದರಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಇರಿಸಬೇಕು

►ವೈದ್ಯರು ಪರೀಕ್ಷೆ ನಡೆಸುವವರಿಗೆ ಆ ವ್ಯಕ್ತಿಗೆ ಮಾಸ್ಕ್ ಗಳನ್ನು ನೀಡಬೇಕು

►ಸ್ಥಳೀಯ ವೈದ್ಯಕೀಯ ಅಧಿಕಾರಿಗಳಿಗೆ, ರಾಜ್ಯ ಅಥವಾ ಜಿಲ್ಲಾ ಹೆಲ್ಪ್ ಲೈನ್ ಗಳಿಗೆ ತಕ್ಷಣ ಕರೆ ಮಾಡಬೇಕು

ಹೊಟೇಲ್ ಗಳಿಗೆ

►ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರಬೇಕು

►ಯಾವುದೇ ಲಕ್ಷಣಗಳನ್ನು ಹೊಂದಿಲ್ಲದ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾತ್ರ ಅವಕಾಶ

►ಎಲ್ಲಾ ಸಿಬ್ಬಂದಿ ಮತ್ತು ಅತಿಥಿಗಳು ಮಾಸ್ಕ್ ಧರಿಸಬೇಕು

►ಸುರಕ್ಷಿತ ಅಂತರ ನಿಯಮ ಪಾಲನೆಗಾಗಿ ಸಾಕಷ್ಟು ಜನರನ್ನು ನೇಮಿಸಬೇಕು

►ಸಿಬ್ಬಂದಿಗಳು ಗ್ಲೌಸ್ ಧರಿಸಬೇಕು

►ಹಿರಿಯ ಸಿಬ್ಬಂದಿ, ಗರ್ಭಿಣಿ, ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು

►ಅವರು ಸಾರ್ವಜನಿಕವಾಗಿ ನೇರ ಸಂಪರ್ಕದಲ್ಲಿರುವ ಯಾವುದೇ ಕೆಲಸಗಳನ್ನು ಮಾಡಬಾರದು

ವಾರ್ತಾಭಾರತಿ


Spread the love

Exit mobile version