Home Mangalorean News Kannada News ಜೆಡಿಎಸ್‍ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ

ಜೆಡಿಎಸ್‍ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ

Spread the love

ಜೆಡಿಎಸ್‍ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ

ಉಳ್ಳಾಲದಲ್ಲಿ ನಡೆಯುವ ಸ್ಥಳೀಯ ನಗರ ಸಭೆ ಚುನಾವಣೆ ಪ್ರಯುಕ್ತ ಜಿಲ್ಲಾ ವಿವಿಧ ಘಟಕಗಳಾದ ಯುವ ಜನತಾ ದಳ, ಮಹಿಳಾ ಘಟಕ, ಹಿಂದುಳಿದ ಘಟಕ, ಎಸ್ ಸಿ ಎಸ್‍ಟಿ. ಘಟಕಗಳ ವತಿಯಿಂದ ಉಳ್ಳಾಲದ ಕಾರ್ಯಕರ್ತರೊಂದಿಗೆ ಎಲ್ಲಾ ವಾರ್ಡುಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು 24 ನೇ ವಾರ್ಡಿನ ಸುಂದರಿ ಬಾಗ್  ವಾರ್ಡಿನಲ್ಲಿ ಅಭ್ಯರ್ಥಿಯಾದ ಹಂಝ ಪರ ಜಿಲ್ಲಾ ನಾಯಕರಾದ ರಾಂ ಗಣೇಶ್, ಸುಶೀಲ್ ನೊರನ್ಹಾ, ಎಸ್ ರಮೇಶ್, ರತ್ನಾಕರ್ ಸುವರ್ಣ, ಲತೀಫ್ ಒಳಚ್ಚಿಲ್ ರವರ ಮುಂದಾಳತ್ವದಲ್ಲಿ ಮನೆಮನೆಗಳಿಗೆ ಭೇಟಿ ನೀಡಿ, ಚುನಾವಣೆಯ ಬಿರುಸಿನ ಪ್ರಚಾರ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ಸುಶೀಲ್ ನೊರೊನ್ಹರವರು ಮಾನ್ಯ ಮುಖ್ಯ ಮಂತ್ರಿಗಳ ಬಡವರ ಮತ್ತು ದೀನ ದಲಿತರ ಬಗ್ಗೆ ಇರುವ ಕಾಳಜಿ ಹಾಗೂ ಅವರ ಮುಂದಿನ ಯೋಜನೆಗಳನ್ನು ಮತದಾರರಿಗೆ ತಿಳಿಸಿದರು.  ಈ ಚುನಾವಣೆಯಲ್ಲಿ ಅತೀ ಹೆಚ್ಚಿನ ಸದಸ್ಯರು ಚುನಾಯಿತರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶವನ್ನು ನೀಡಬೇಕಾಗಿ ವಿನಂತಿಸಿದರು.  ಈ ಪ್ರಚಾರದಲ್ಲಿ ಸ್ಥಳಿಯ ನಾಯಕರಾದ ಅಜ್ಮಲ್,  ತೋಪಿಕ್, ಶಾಖರ್, ಶಫೀಕ್ ಕೇಮ್, ಹಕೀಂ, ಕಲಾದಾರ್, ಬಾತೀಮ್, ಸಂಶೀರ್, ಇಸ್ಮಾಯಿಲ್, ಸವಾದ್, ಜಿಯಾದ್ ಮುಂತಾದವರು ಪಾಲ್ಗೊಂಡಿದ್ದರು.


Spread the love

Exit mobile version