ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನ ಬೂತ್ ಕಾರ್ಯಕರ್ತರ ಸಭೆ

Spread the love

ಜೆಡಿಎಸ್  ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನ ಬೂತ್ ಕಾರ್ಯಕರ್ತರ ಸಭೆ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನಲ್ಲಿ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವಸಂತ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ಸ್ಥಳೀಯ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯರಾದ ರಮೀಜಾ ಬಾನು ಅವರ ನೇತೃತ್ವದಲ್ಲಿ  ನಡೆಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ವಸಂತ ಪೂಜಾರಿ ಅವರು ಬೂತ್ ಮಟ್ಟದಿಂದ ಪಕ್ಷ ಸಂಘಟಿಸಬೇಕೆಂದು ವರಿಷ್ಠರು ಕರೆ ನೀಡಿದ್ದಾರೆ ಮತ್ತು ಮನೆ ಮನೆಗೆ ಕುಮಾರ ಅಣ್ಣ ಎಂಬ ವಿಷಯದೂಂದಿಗೆ ಮನೆ ಮನೆಗೆ ಜೆಡಿಎಸ್ ಅಧಿಕಾರ ಅವಧಿಯಲ್ಲಿ ನಡೆದ ಯೋಜನೆ ಗಳನ್ನು ತಿಳಿಸ ಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲ ಮುಖಂಡರು ಕಾರ್ಯ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂದಿನ ಬಾರಿ ನಮ್ಮ ಸರ್ಕಾರ ಬರಲು ಶ್ರಮ ವಹಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ *ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಕುಂಞ  ಜಿಲ್ಲೆಯಲ್ಲಿ ಆಗುತ್ತಿರುವ ಕೋಮು ಗಲಭೆ ಹಾಗೂ ಸಚಿವರ ಹೇಳಿಕೆಗಳು ಹಾಗೂ ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತದಿಂದ ಜನರು ಬೇಸತ್ತಿದ್ದು ಮುಂದಿನ ಭಾರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ನಾಯಕ  ಗಣೇಶ್ ಅವರ ನೂರಾರು ಬೆಂಬಲಿಗರು  ಪಕ್ಷಕ್ಕೆ ಸೇರ್ಪಡೆಗೊಂಡರು.

 ಈ ಕಾರ್ಯಕರ್ತರ ಸಭೆಯಲ್ಲಿ  ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್. ಮಹಾನಗರ ಪಾಲಿಕೆ ಸದಸ್ಯರಾದ ಅಜೀಜ್ ಕುದ್ರೋಳಿ.  ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ. ರಾಜ್ಯ ನಾಯಕರುಗಳಾದ ನಾಸೀರ್.  ಗೋಪಾಕೃಷ್ಣ ಅತ್ತಾವರ್. ಫೈಸಲ್. ಶ್ರೀನಾಥ್ ರೈ ಅಬ್ದುಲ್ ಸತ್ತಾರ್. ಸಲೀಂ ಜಾವೇದ್. ಫಾರುಖ್  ಉಪಸ್ಥಿತರಿದ್ದರು

 


Spread the love