ಜೆಡಿಎಸ್ ಮಹಾನಗರ ಪಾಲಿಕೆ ಚುನಾವಣೆ ಸಿದ್ದತಾ ಸಭೆ
ಮಂಗಳೂರು ಮಹಾನಗರ ಪಾಲಿಕೆಯ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಾರ್ಡ್ ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ ಸಭೆಯು ತಾರಿಕು 31.12.2018ರಂದು ಪಕ್ಷದ ಕಚೇರಿಯಲ್ಲಿ ಜರಗಿತು. ಕ್ಷೇತ್ರದ ಅಧ್ಯಕ್ಷರಾದ ವಸಂತ್ ಪೂಜಾರಿಯವರು ಮಾತನಾಡಿ ಈ ಸಭೆಯು ಮುಂದಿನ ಮಹಾನಗರ ಪಾಲಿಕೆಯ ಚುನಾವಣೆಯ ಪೂರ್ವಬಾವಿ ಸಿದ್ದತೆಯ ಸಭೆಯಾಗಿದ್ದು ಇದೀಗ ತನ್ನ ಕ್ಷೇತ್ರದ ಎಲ್ಲಾ ವಾರ್ಡುಗಳಲ್ಲಿ ಹಲವು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದು ಪಕ್ಷದ ನಿಷ್ಟೆ ಹಾಗೂ ಸೇವೆಯನ್ನು ಒಳಗೊಂಡ ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲಾಗುವುದು.
ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿತನದ ಅರ್ಜಿಗಳನ್ನು ಕಚೇರಿಯಿಂದ ಪಡಕೊಳ್ಳತಕ್ಕದ್ದು ಎಂದು ಹೇಳಿದರು ಹಾಗೂ ಸಾಂಕೇತಿಕವಾಗಿ ಬಜಾಲ್ ವಾರ್ಡಿನ ಇಝಾ ಬಜಾಲ್ ಇವರಿಗೆ ಅರ್ಜಿಯನ್ನು ಹಸ್ತಾಂತರಿಸುವ ಮೂಲಕ ಚುನಾವಣೆಗೆ ಚಾಲನೆಯನ್ನು ನೀಡಿದರು. ಕೊರ್ಪೊರೇಟರ್ ಅಜೀಜ್ ಕುದ್ರೋಳಿರವರು ತನ್ನ ಎರಡು ಅವಧಿಯ ಹತ್ತು ವರ್ಷಗಳ ಅನುಭವವನ್ನು ಹಂಚಿಕೊಂಡರು. ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹರವರು ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳಿಗೆ ಕಠಿಣ ಶ್ರಮ ಹಾಗೂ ಚುನಾವಣೆ ಪೂರ್ವ ತಯಾರಿ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷಿ ಸುಮತಿ ಹೆಗ್ಡೆ, ಎನ್.ಪಿ.ಪುಷ್ಪರಾಜನ್, ರಾಜ್ಯ ಮೀನುಗಾರ ಘಟಕದ ಅಧ್ಯಕ್ಷರಾದ ರತ್ನಾಕರ್ ಸುವರ್ಣ, ಲತೀಫ್ ಬೇಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ರಾಜ್ಯಸಂಘಟನ ಕಾರ್ಯದರ್ಶಿ ಗೋಪಾಲ್ ಕ್ರಷ್ಣ ಅತ್ತಾವರ್, ಲತೀಫ್ ವಳಚಿಲ್, ರಮೇಶ್ ಎಸ್, ಮೊಹಮ್ಮದ್ ಬೇಂಗ್ರೆ, ಸದಾಶಿವ ಹೆಗ್ಡೆ, ಶ್ರೀನಾಥ್ ರೈಯ್, ಶಾಲಿನಿ ರೈ, ಕವಿತಾ, ವಿನ್ಸೆಂಟ್ ಡಿಸೋಜ, ರಘು, ಭಾರತಿ, ಪ್ರವೀಣ್, ಆರಿಫ್, ಕನಕದಾಸ್ ಕುಳೂರ್, ಶಿವಕುಮಾರ್, ಅನಿಲ್ ಉಪಸ್ಥಿತರಿದ್ದು ಜಿಲ್ಲಾ ಕಾರ್ಯದರ್ಶಿಯಾದ ರಾಮಗಣೇಶ್ ಸ್ವಾಗತಿಸಿ ಎನ್.ಪಿ.ಪುಷ್ಪರಾಜನ್ ಧನ್ಯವಾದಗೈದರು.