ಜೆಪ್ಪಿನಮೊಗರು ಕಾಂಕ್ರೀಟಿಕರಣ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ- ಶಾಸಕ ಕಾಮತ್
ಜೆಪ್ಪಿನಮೊಗರು ವಾರ್ಡಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯು 75 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಜೆಪ್ಪಿನಮೊಗರು ವಾರ್ಡಿಗೆ ಕುಂಡ್ಸೆಪ್ ಅಧಿಕಾರಿಗಳು, ಪಿಡ್ಲುಡಿ ಇಂಜಿನಿಯರ್ಸ್ ಮತ್ತು ಸ್ಥಳೀಯ ಪಾಲಿಕೆ ಸದಸ್ಯ ಸುರೇಂದ್ರ ಅವರೊಂದಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಮಾತನಾಡಿದ ಶಾಸಕ ಕಾಮತ್ ಅವರು ರಾಷ್ಟ್ರೀಯ ಹೆದ್ದಾರಿಯಿಂದ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬರುವ ರಸ್ತೆ ಒಂದು ಕಿರುಸೇತುವೆಯನ್ನು ಸೇರಿಸಿಕೊಂಡು 400 ಮೀಟರ್ ಉದ್ದವಿದೆ. ಈ ರಸ್ತೆಯಲ್ಲಿ 3-4 ಮ್ಯಾನ್ ಹೋಲ್ ನಿರ್ಮಾಣದ ಅಗತ್ಯವಿದ್ದು ಅಲ್ಲಿ ತಕ್ಷಣ ಮ್ಯಾನ್ ಹೋಲ್ ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಮ್ಯಾನ್ ಹೋಲ್ ಕಾಮಗಾರಿನಡೆಸುವ ಕುಡ್ಸೆಂಪ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ಅದು ಪೂರ್ತಿಗೊಂಡ ತಕ್ಷಣ ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೀಟಿಕರಣ ನಡೆಯಲಿದೆ. ಸ್ಥಳೀಯ ಪಾಲಿಕೆ ಸದಸ್ಯ ಸುರೇಂದ್ರ ಅವರ ನಿರಂತರ ಪ್ರಯತ್ನದಿಂದ ಈ ಭಾಗದಲ್ಲಿ ರಸ್ತೆ ಕಾಂಕ್ರೀಟಿಕರಣ ಆಗಲು ಶ್ರಮಿಸಿದ್ದಾರೆ. 75 ಲಕ್ಷದ ಈ ಕಾಮಗಾರಿ ಈ ಭಾಗದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಸಂಪೂರ್ಣ ಡ್ರೈನೇಜ್ ವ್ಯವಸ್ಥೆ ನಡೆದು ಕಾಂಕ್ರೀಟಿಕರಣ ನಡೆಯುವುದರಿಂದ ಜನರಿಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ದೃಷ್ಟಿಕೋನ ಇಟ್ಟು ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು. ಈಗಾಗಲೇ ಮ್ಯಾನ್ ಹೋಲ್ ಕಾಮಗಾರಿಗಳು ಕೊನೆಯ ಹಂತದಲ್ಲಿರುವುದರಿಂದ ಮ್ಯಾನ್ ಹೋಲ್ ಕಾಮಗಾರಿ ಪೂರ್ಣಗೊಂಡ ಎರಡು ದಿನಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ಹೇಳಿದರು.
ಪಾಲಿಕೆ ಸದಸ್ಯರುಗಳಾದ ಜಿ. ಸುರೇಂದ್ರ, ದಿವಾಕರ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಸ್ಲಂ ಮೋರ್ಚಾ ಕಾರ್ಯದರ್ಶಿ ರಾಮಪ್ರಸಾದ್ ಶೆಟ್ಟಿ, ವಾರ್ಡ್ ಸಮಿತಿ ಅಧ್ಯಕ್ಷೆ ವೀಣಾ ಮಂಗಳ, ಸಮಿತಿ ಸದಸ್ಯೆ ಸುಜಾತ ಕೊಟ್ಟಾರಿ, ಶಕ್ತಿ ಕೇಂದ್ರ ಸದಸ್ಯೆ ಸುಮತಿ, ಬಿಜೆಪಿ ಮುಖಂಡರಾದ ಮೋಹನದಾಸ್ ಅಡ್ಯಂತಾಯ, ವೆಲೆರಿಯನ್ ಮೆಂಡೊನ್ಸಾ, ಶ್ಯಾಮ ಪ್ರಸಾದ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.