Home Mangalorean News Kannada News ಜೆಪ್ಪು ಕಂಪೌಂಡಿನ ಧನಿ ಯಾರು? ಸ್ಥಳೀಯ ನಿವಾಸಿಗಳ ಪ್ರಶ್ನೆ

ಜೆಪ್ಪು ಕಂಪೌಂಡಿನ ಧನಿ ಯಾರು? ಸ್ಥಳೀಯ ನಿವಾಸಿಗಳ ಪ್ರಶ್ನೆ

Spread the love

ಜೆಪ್ಪು ಕಂಪೌಂಡಿನ ಧನಿ ಯಾರು? ಸ್ಥಳೀಯ ನಿವಾಸಿಗಳ ಪ್ರಶ್ನೆ

 ಮಂಗಳೂರು: ಸರಿಸುಮಾರು ಒಂದು ಶತಮಾನದ ಹಿಂದೆ ವಿದೇಶಿ ಜೆಸ್ವಿಟ್ ಮಿಶನರಿಗಳು, ಇಲ್ಲಿಯ ಕೆಳವರ್ಗದ (ಜಾತಿ ಹಾಗೂ ಆರ್ಥಿಕತೆಯಲ್ಲಿ), ನಿವಾಸಿಗಳನ್ನು (ಹೆಚ್ಚಾಗಿ ಹಿಂದು), ಕ್ರೈಸ್ತ ಧರ್ಮಕ್ಕೆ ಮತಾಂತರಿಸಿ, ಜೆಪ್ಪು ಸೆಮಿನರಿ ಹಾಗೂ ವರ್ಕ್‍ಶೊಪ್ ಸುತ್ತಮುತ್ತ ಇರುವ ಸುಮಾರು 40 ಎಕ್ರೆ ಜಾಗದಲ್ಲಿ ಪುನರ್ವಸತಿ ಮಾಡಿದರು. ಈ ವಠಾರಕ್ಕೆ ಜೆಪ್ಪು ಕಂಪೌಂಡ್ ಎಂದು ಹೆಸರು ಬಂತು. ಈ ನಿರಾಶ್ರಿತ, ಬಡ ಜನರಿಗೋಸ್ಕರ ಜೆಪ್ಪು ವರ್ಕ್‍ಶೊಪ್ ಕೂಡಾ ಸ್ಥಾಪಿಸಲಾಯಿತು. ಅದಕ್ಕೆ ಸೌಂಟ್ ಜೋಸೆಫ್ ‘ಅಸಾೈಲಮ್’ ಇಂಡಸ್ಟ್ರಿಯಲ್ ವರ್ಕ್‍ಶೊಪ್ ಎಂದು ಹೆಸರಿಡಲಾಯಿತು.

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅಲ್ಲಿನ ನಿವಾಸಿ ವಲೇರಿಯನ್ ಟೆಕ್ಸೇರಾ 1968ರಲ್ಲಿ ಜೆಸ್ವಿಟರಿಂದ ಬಿಷಪರ ನೇತ್ರತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯವು, ಜೆಪ್ಪು ಕಂಪೌಂಡಿನ ಜನರ ಹಾಗೂ ಅಲ್ಲಿರುವ ಎಲ್ಲಾ ಆಸ್ತಿಪಾಸ್ತಿಗಳ ಆಡಳಿತೆಯ ಜವಾಬ್ದಾರಿಯನ್ನು ವಹಿಸಿಕೊಂಡಿತು. ಕೂಡಲೇ ಧೋರಣೆಗಳು ಬದಲಾದವು. ಜೆಸ್ವಿಟ್ ಮಿಶನರಿಗಳ ಸೇವಾ ಮನೋಭಾವವನ್ನು ತ್ಯಜಿಸಿ, ಕ್ರೈಸ್ತ ಧರ್ಮಪ್ರಾಂತ್ಯವು ವ್ಯಾಪಾರಕ್ಕೆ ಇಳಿಯಿತು  ಎಂದು ಅವರು ದೊಡ್ಡ ದೊಡ್ಡ ಮರಗಳನ್ನು ಕಡಿದು, ಜಾಗಗಳನ್ನು ತಯಾರಿಸಿ, ಹೊರಗಿನವರಿಗೆ ಮಾರಲಾಯಿತು.

ಜನರು ಎಷ್ಟೋ ವರ್ಷಗಳಿಂದ ನಡೆದು ಹೋಗುವ ದಾರಿಯ ಮಧ್ಯೆ, 3 ಕಡೆಗಳಲ್ಲಿ ಗೋಡೆಗಳನ್ನು ನಿರ್ಮಿಸಿ, ಅಲ್ಲಿರುವ 3 ಸಂಸ್ಥೆಗಳು – ಸೆಮಿನರಿ, ವರ್ಕ್‍ಶೊಪ್ ಹಾಗೂ ಸಿಸ್ಟರ್ಸ್ ಒಫ್ ಚ್ಯಾರಿಟಿ – ವಿಸ್ತಾರ ಜಾಗಗಳನ್ನು ತನ್ನದಾಗಿಸಿಕೊಂಡವು.

ಸರಿಸುಮಾರು 60 ಮನೆಗಳ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಅವರನ್ನು ನಿರಾಶ್ರಿತರಾಗಿ ಮಾಡಿ, ಅವರ ಜಾಗದಲ್ಲಿ ಮಂಗಳ ಹೋಟೆಲ್ ಕೊಂಪ್ಲೆಕ್ಸ್, ಶಾಲೊಮ್ ಅಪಾರ್ಟ್‍ಮೆಂಟ್ ಕೊಂಪ್ಲೆಕ್ಸ್, ಮರಿಯ ಜಯಂತಿ ಹೊಲ್ – ಅಂತಹ ವ್ಯಾಪಾರಿ ಸಂಸ್ಥೆಗಳು ನಿರ್ಮಾಣವಾದವು. ಇವುಗಳಿಂದ ಧರ್ಮಪ್ರಾಂತ್ಯಕ್ಕೆ ಕೋಟಿಗಟ್ಟಲೆ ರೂಪಾಯಿಗಳ ಲಾಭವಾಯಿತಾದರೂ, ಒಂದು ಪೈಸೆಯೂ ನೈಜ ಹಕ್ಕುದಾರರಿಗೆ – ಅಲ್ಲಿಯ ಮೂಲ ನಿವಾಸಿಗಳಿಗೆ ಸೆಂದಲಿಲ್ಲ.

ಅಂದಿನಿಂದ ಇಂದಿನವರೆಗೆ, ಕಾನೂನಿನ ಯಾವ ಅಧಿಕೃತ ದಾಖಲೆ ಪತ್ರಗಳು ಇಲ್ಲದಿದ್ದರೂ ಬಿಷಪರ ನೇತೃತ್ವದಲ್ಲಿ ಧರ್ಮಪ್ರಾಂತ್ಯವು, ಕಾನೂನು ಬಾಹಿರವಾಗಿ ಅಧಿಕಾರ ಚಲಾಯಿಸಿ – ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಿದೆ. ಇತರರನ್ನು ಬೆದರಿಸಿ ಒಂದು ನಕಲಿ ‘ಪರ್ಪೆಚುವಲ್ ಲೀಸ್ ಡೀಡ್’ಗೆ ಸಹಿ ಹಾಕಿಸಿ ಅಸಹಾಯಕರನ್ನಾಗಿ ಮಾಡಿದೆ.

ವರ್ಕ್‍ಶೊಪ್ ಹಾಗೂ ಒಂದು ಶಾಲೆಯನ್ನು ಬಂದ್ ಮಾಡಿ ಅವುಗಳ ಆಸ್ತಿ ಹಾಗೂ ಜಾಗಗಳನ್ನು ವ್ಯಾಪಾರಿ ಸಂಸ್ಥೆಗಳಿಗೆ ಮಾರಿ, ಲೀಸ್ ಮಾಡಿ, ಬಾಡಿಗೆಗೆ ಕೊಟ್ಟು ಕೋಟಿಗಟ್ಟಲೆ ಹಣ ಸಂಪಾದಿಸಿದೆ. ಇದರ ಪರಿಣಾಮವಾಗಿ ಮೂಲ ನಿವಾಸಿಗಳು ಹಾಗೂ ಇಲ್ಲಿ ಹಣ ತೆತ್ತು ನೆಲಿಸಿಕೊಂಡ ಇತರರು ಅಸಹಾಯಕ ಬಲಿಪಶುಗಳಗಿದ್ದಾರೆ. ಮೋಸಕ್ಕೆ ಒಳಗಾಗಿದ್ದಾರೆ.

ನಾವು ಆರ್ ಟಿ ಐ ಅರ್ಜಿ ಹಾಕಿ ಪಡೆದುಕೊಂಡ ಧಾರಾಳ ಮಾಹಿತಿಗಳಿಂದ, ಬಿಷಪರಿಗೆ ಹಾಗೂ ಧರ್ಮಪ್ರಾಂತ್ಯಕ್ಕೆ ಇಲ್ಲಿಯ ಆಸ್ತಿ-ಜಾಗಗಳ ಮೇಲೆ ಯಾವ ಕಾನೂನಿನ ಹಕ್ಕುಗಳಿಲ್ಲವೆಂಬುದು ಸಾಬೀತಾಗಿದೆ. ಅದರ ಸಂಗಡ – ಇವತ್ತು, ಬಿಷಪರು ಹಾಗೂ ಕ್ರೈಸ್ತ ಧರ್ಮಪ್ರಾಂತ್ಯವು ನೂರಾರು ಕೋಟಿ ಮೌಲ್ಯದ ಸಾವಿರಾರು ಎಕರೆ ಜಮೀನಿನ ಭೂಮ್ಹಾಲಕರು ಎಂಬ ಸತ್ಯವು ಬಯಲಾಗಿದೆ.

ಇಂದು ಜನರ ಸಮಸ್ಯೆಯು ಸಹಿಸಲಾರದ ಸ್ಥಿತಿಗೆ ಬಂದು ಮುಟ್ಟಿದೆ. ಬಿಷಪರು ಹಾಗೂ ಧರ್ಮಪ್ರಾಂತ್ಯದ ಆಡಳಿತೆಯು, ತನ್ನ ಕಾನೂನುಬಾಹಿರ ಹಗರಣಗಳು ಬಯಲಾಗುವ ಭಯದಿಂದ, ವರ್ಕ್‍ಶೊಪ್ ಮ್ಯಾನೆಜರ್ ಮುಖಾಂತರ, ಕಾರ್ಯಕರ್ತರಾದ ವಲೇರಿಯನ್ ಟೆಕ್ಸೇರಾ ಹಾಗೂ ವಿಕ್ಟರ್ ಪಾಯ್ಸ್‍ರವರಿಗೆ ಒಕ್ಕಲೆಬ್ಬಿಸುವ ನೀಡಿದೆ. ಇವರು ಆರ್ ಟಿ ಐ ಮುಖಾಂತರ ಪಡಕೊಂಡ ಮಾಹಿತಿಗಳ ಆಧಾರದ ಮೇಲೆ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತೆಗೆ ದೂರು ನೀಡಿದಕ್ಕಾಗಿ ಇವರನ್ನು ಗುರಿಪಡಿಸಲಾಗಿದೆ.

ಎಷ್ಟೋ ವರ್ಷಗಳಿಂದ ಧರ್ಮದ ಹೆಸರಿನಲ್ಲಿ, ಧರ್ಮಾಧಿಕಾರಿಗಳಿಂದ ಶೋಷಣೆ, ಮೋಸ, ಅನ್ಯಾಯ, ದಬ್ಬಾಳಿಕೆಗೊಳಗಾದ ಜೆಪ್ಪು ಕಂಪೌಂಡಿನ ಸಮಗ್ರ ಜನರು – ಮೂಲ ನಿವಾಸಿಗಳು ಹಾಗೂ ಇನ್ನಿತರರು – ಒಕ್ಕೊರಲಿನಿಂದ ಹೇಳುವುದೇನೆಂದರೆ –

ನಿವಾಸಿಗಳ ಬೇಡಿಕೆಗಳು

  1. ವಲೇರಿಯನ್ ಟೆಕ್ಸೇರಾ ಹಾಗೂ ವಿಕ್ಟರ್ ಪಾಯ್ಸ್‍ರವರಿಗೆ ಇತ್ತ ‘ಎವಿಕ್ಷನ್ ನೋಟಿಸ್’ – ಕೂಡಲೇ ಹಿಂಪಡೆಯಲಿ.
  2. ಕ್ರೈಸ್ತ ಧರ್ಮಪ್ರಾಂತ್ಯವು ಜೆಪ್ಪು ಕಂಪೌಂಡಿನ ಜನರ ಹಾಗೂ ಆಸ್ತಿಪಾಸ್ತಿಗಳ ಮೇಲೆ ನಡೆಸುವ ಕಾನೂನುಬಾಹಿರ ಅಧಿಕಾರ ಹಾಗೂ ದಬ್ಬಾಳಿಕೆ – ಕೂಡಲೇ ನಿಲ್ಲಲಿ ಹಾಗೂ ಅಲ್ಲಿಯ ಎಲ್ಲಾ ಜನರಿಗೆ (ಮೂಲ ನಿವಾಸಿಗಳು ಹಾಗೂ ಇನ್ನಿತರರಿಗೆ) ಅವರ ಮನೆ-ಆಸ್ತಿಯ ಮೇಲೆ ಕಾನೂನು ಹಕ್ಕು ದೊರಕಲಿ.
  3. ಇಲ್ಲಿನ ಜಾಗಗಳ ಬಗ್ಗೆ ಮಂಗಳೂರು ಜಿಲ್ಲಾಧಿಕಾರಿಯವರ ಬಳಿ ದಾಖಲಾದ ದೂರಿನ ತೀರ್ಪು ಹೊರ ಬರುವ ತನಕ, ರೆವೆನ್ಯೂ ಖಾತೆ ನಂಬ್ರ 56ಕ್ಕೆ ಸಂಬಂಧಪಟ್ಟ ಎಲ್ಲಾ ಜಾಗ ವರ್ಗಾವಣೆ ಹಾಗೂ ವಹಿವಾಟುಗಳಿಗೆ ನಿರ್ಬಂಧ ಹೇರಲಿ.
  4. ಬಿಷಪರು ಹಾಗೂ ಧರ್ಮಪ್ರಾಂತ್ಯವು ಆಸ್ತಿಪಾಸ್ತಿ, ದುಡ್ಡು-ಜಾಗ-ಅಧಿಕಾರದ ಮೋಹವನ್ನು ತ್ಯಜಿಸಿ, ಬಡ ಜನರನ್ನು ಸದೆಬಡೆಯುವ ಹಾಗೂ ಅವರ ರಕ್ತಹೀರುವ ಕ್ರೂರ ಭೂಮಾಲಿಕನಾಗಿ ಮೆರೆಯುವುದನ್ನು ಬಿಟ್ಟು, ನೈಜ ಕ್ರೈಸ್ತ ತತ್ವಗಳನ್ನು ಪಾಲಿಸಿ, ಅಮಾಯಕ ಜನರ ಮೇಲೆ ಪ್ರೀತಿ, ಕರುಣೆ ಹಾಗೂ ಮಾನವೀಯ ದೃಷ್ಟಿಕೋನವನ್ನು ತೋರಲಿ.

ಈ ಮೇಲಿನ ಬೇಡಿಕೆಗಳು ಈಡೇರದಿದ್ದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಅನಿವಾರ್ಯ. ಈ ನಮ್ಮ ಹೋರಾಟದಲ್ಲಿ ಎಲ್ಲಾ ಜಾತಿ-ಧರ್ಮಗಳ ನೀತಿಪ್ರೀಯ ಜನರ ಸಹಕಾರ ನಾವು ಕೋರುತ್ತೇವೆ.

ಸುದ್ದಿಗೋಷ್ಟಿಯಲ್ಲಿ  ವಿಕ್ಟರ್ ಪಾಯ್ಸ್ ವಿಲ್ಸನ್ ಬ್ಯಾಪ್ಟಿಸ್ಟ್ ಹಾಜರಿದ್ದರು.


Spread the love

Exit mobile version