ಜೆಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ

Spread the love

ಜೆಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ

ಮಂಗಳೂರು: ಭಾನುವಾರ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಾರಣ ಜಪ್ಪಿನಮೊಗೆರುವಿನ ಜಪ್ಪು ಪಟ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ದಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ನೀಡಿದ್ದಾರೆ.

ಜೆಪ್ಪು ಪಟ್ನದ ಪೂರ್ವದಲ್ಲಿ ಕೆನಲ್, ಪಶ್ಚಿಮದಿಂದ ರೈಲ್ವೇ ಟ್ರ್ಯಾಕ್-ಉಳ್ಳಾಲದಿಂದ ಮಂಗಳೂರು ಜಂಕ್ಷನ್), ಉತ್ತರದಲ್ಲಿ ಕೆಂಬ್ರಿಡ್ಜ್ ಶಾಲೆ, ದಕ್ಷಿಣದಲ್ಲಿ ಜೆಪ್ಪು ಪಟ್ನ ರೋಡ್ ಪ್ರದೇಶವನ್ನು ಸೀಲ್ ಡೌನ್ ಮಾಡಿ ಆದೇಶ ನೀಡಲಾಗಿದೆ. ಈ ಪ್ರದೇಶದಲ್ಲಿ 48 ಮನೆಗಳಿದ್ದು, 3 ಅಂಗಡಿ ಮುಂಗಟ್ಟುಗಳು, ಶಾಲೆ ಕಟ್ಟಡಗಳಿವೆ. ಈ ಪ್ರದೇಶದಲ್ಲಿ ಒಟ್ಟು 205 ಜನ ಸಂಖ್ಯೆ ಹೊಂದಲಾಗಿದೆ.

ಐದು ಕಿಮಿ ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಪೂರ್ವದಿಂದ ಬಜಾಲ್ ಫೈಸಲ್ ನಗರ್, ಪಶ್ಚಿಮದಿಂದ ಅರಬ್ಬಿ ಸಮುದ್ರ, ಉತ್ತರದಿಂದ ಬಿಕರ್ನಕಟ್ಟೆ, ದಕ್ಷಿಣದಲ್ಲಿ ಉಳ್ಳಾಲ ತನಕ ಬಫರ್ ಝೋನ್ ವ್ಯಾಪ್ತಿಗೆ ಒಳಪಡಲಿದೆ. ಈ ಪ್ರದೇಶದಲ್ಲಿ 32,500 ಮನೆಗಳು, 983 ಅಂಗಡಿಗಳು, ಕಚೇರಿಗಳು ಹೊಂದಿದ್ದು, 1,45,500 ಮಂದಿ ಈ ಪ್ರದೇಶದಲ್ಲಿ ವಾಸವಾಗಿದ್ದಾರೆ.


Spread the love