ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕೊರೋನ ವೈರಸ್ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಕೆ
ಅತೀ ವಂದನೀಯ ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ಸಂತ ಅಂತೋನಿ ಅಶ್ರಮ ವತಿಯಿಂದ ಆಯೋಜಿಸಲಾದ ಹಬ್ಬದ ಸಂದರ್ಭದಲ್ಲಿಕೊರೋನ ವೈರಸ್ ನಿವಾರಣೆಗಾಗಿ ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕೊರೋನ ವೈರಸ್ ಹರಡುವಿಕೆಯಿಂದ ಅನೇಕ ಮಂದಿ ಅಸು ನೀಗಿದ್ದು ಇನ್ನೆಷ್ಟೋ ಮಂದಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಪಂಚದಾದ್ಯಂತ ಜನರು ಕೊರೋನ ವೈರಸ್ ಪದ ಕೇಳಿದ ತಕ್ಷಣ ಹೆದರುತ್ತಾರೆ. ಇಂತಹ ಸನ್ನಿವೇಶದಲ್ಲಿ ಸಂತ ಆಂತೋನಿ ಆಶ್ರಮ ತಮ್ಮ ಪಾಲಕರ ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಈ ಪ್ರಾರ್ಥನಾ ವಿಧಿಯನ್ನು ಆಯೋಜಿಸಿತ್ತು. ಯೇಸು ಸ್ವಾಮಿ ತಮ್ಮ ಸೇವೆಯ ಜೀವನದಲ್ಲಿ ಆನೇಕ ಜನರನ್ನು ಅವರ ಕಾಯಿಲೆಯಿಂದ ಗುಣಪಡಿಸಿದ್ದರು. ಸಂತ ಆಂತೋನಿಯವರು ತಮ್ಮ ಜೀವಿತಾವಧಿಯಲ್ಲಿ ಯೇಸು ಸ್ವಾಮಿಯ ಹೆಸರಲ್ಲಿ ರೋಗದಿಂದ ಬಳಲುತ್ತಿದ್ದ ಜನರನ್ನು ವಾಸಿ ಮಾಡಿದ್ದಾರೆ. ರೋಗಿಗಳನ್ನು ಗುಣಪಡಿಸಿದ ಈ ಪುಣ್ಯ ಪುರುಷರ ಹಬ್ಬದ ದಿನ ಕೊರೋನ ವೈರಸನ್ನು ನಿವಾರಿಸಲು ಈ ಪ್ರಾರ್ಥನಾ ವಿಧಿಯನ್ನು ಆಯೋಜಿಸಲಾಗಿತ್ತು.
ಸಾವಿರಾರು ಭಕ್ತಾಧಿಗಳು, ಧರ್ಮಗುರುಗಳು, ಧರ್ಮ ಭಗಿನಿಯರು ಈ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು.