Home Mangalorean News Kannada News ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ, ತನಿಖೆ ಆಗಲಿ –...

ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ, ತನಿಖೆ ಆಗಲಿ – ಡಾ. ಜಿ ಪರಮೇಶ್ವರ್

Spread the love

ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ, ತನಿಖೆ ಆಗಲಿ – ಡಾ. ಜಿ ಪರಮೇಶ್ವರ್

ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ, ತನಿಖೆ ಆಗಲಿ. ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ನೇಮಿಸಿ ತನಿಖೆ ಆಗುತ್ತದೆ. ಪೊಲೀಸ್ ಇಲಾಖೆ ಕಾನೂನು ರಕ್ಷಣೆ ಮಾಡುವ ಕೆಲಸ ಮಾಡುತ್ತದೆ. ಪ್ರತಿಭಟನೆ ಮಾಡಿದರೆ ತಪ್ಪಿಲ್ಲ, ಆದರೆ ಬೇರೆ ಹಂತಕ್ಕೆ ಹೋಗಬಾರದು. ಪೊಲೀಸರು ಅನುಮತಿ ಕೊಟ್ಟರೆ ಪ್ರತಿಭಟನೆ ಮಾಡಲಿ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಭಾಗದಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನು ಸಂಪರ್ಕಿಸಿದ್ದೆ. ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಎಂದಿದ್ದರು. ಮಕ್ಕಳೆಲ್ಲರೂ ಈಗ ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ಕಲುಷಿತ ವಾತಾವರಣದಿಂದ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಧರ್ಮ ನಂಬಿಕೆಗಳನ್ನು ಅನುಸರಿಸುವಾಗ ಶಾಂತಿಯಿಂದ ಇರಬೇಕು. ಇಡೀ ಸಮುದಾಯಕ್ಕೆ ವಿಷ ಬೀಜ ಬಿತ್ತುವ ಕೆಲಸ ಆಗಬಾರದು. ಜನರು ಶಾಂತಿಯಿಂದ ಬದುಕುವ ಕಡೆಗೆ ನಾವು ಗಮನ ಹರಿಸುತ್ತೇವೆ. ಧರ್ಮ ಹಾಗೂ ಜಾತಿಗಳ ಹೆಸರಿನಲ್ಲಿ ರಾಜಕಾರಣ ಆಗಬಾರದು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತಿಗೆ ನನ್ನ ಸಹಮತ ಇದೆ. ಯಾರಿಗೆ ಅಭಿವೃದ್ಧಿ ಅವಶ್ಯಕತೆ ಇದೆಯೋ ಅವರಿಗೆ ಅನುದಾನ ಕೊಡಲಾಗುತ್ತದೆ. ಎಸ್ಸಿ ಎಸ್ಟಿ ಹಿಂದುಳಿದ ಕಾರಣ ಅವರಿಗೆ ಅನುದಾನ ಕೊಡುತ್ತೇವೆ. ಮುಸ್ಲಿಮರು ಹಿಂದುಳಿದವರಾಗಿರುವ ಕಾರಣ ಸ್ವಲ್ಪ ಹೆಚ್ಚು ಕೊಟ್ಟರೆ ತಪ್ಪೇನು ಎಂದು ಪ್ರಶ್ನಿಸಿದರು.


Spread the love

Exit mobile version