Home Mangalorean News Kannada News ಜೇನು ಕೃಷಿಯಿಂದ ಆದಾಯ ಗಳಿಕೆ ಸಾಧ್ಯ : ಜಿ. ಪಂ. ಅಧ್ಯಕ್ಷ ದಿನಕರ ಬಾಬು

ಜೇನು ಕೃಷಿಯಿಂದ ಆದಾಯ ಗಳಿಕೆ ಸಾಧ್ಯ : ಜಿ. ಪಂ. ಅಧ್ಯಕ್ಷ ದಿನಕರ ಬಾಬು

Spread the love

ಜೇನು ಕೃಷಿಯಿಂದ ಆದಾಯ ಗಳಿಕೆ ಸಾಧ್ಯ : ಜಿ. ಪಂ. ಅಧ್ಯಕ್ಷ ದಿನಕರ ಬಾಬು

ಉಡುಪಿ: ಕೃಷಿಯೊಂದಿಗೆ ಉಪಕಸುಬಾಗಿ ಜೇನುಕೃಷಿಯನ್ನೂ ಕೈಗೊಂಡಲ್ಲಿ ಉತ್ತಮ ಆದಾಯ ಗಳಿಸಲು ಸಾಧ್ಯ ಎಂದು ಜಿ. ಪಂ. ಅಧ್ಯಕ್ಷ ದಿನಕರಬಾಬು ಹೇಳಿದರು.

ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಮಧುವನ ಹಾಗೂ ಜೇನು ಸಾಕಣೆ ಯೋಜನೆಯಡಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಆರಂಭಗೊಂಡ ಎರಡು ದಿನಗಳವಧಿಯ ಜೇನುಕೃಷಿ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕೊರೊನಾದಿಂದಾಗಿ ಜನತೆ ಅದರಲ್ಲೂ ಯುವ ಜನತೆ ಕೃಷಿಯತ್ತ ಆಕರ್ಷಿಸುತ್ತಿದ್ದಾರೆ. ಪ್ರಧಾನಿ ಮೋದಿ ಆಶಯದ ಆತ್ಮನಿರ್ಭರ ಯೋಜನೆಯಡಿ ಸ್ಥಳೀಉ ಉದ್ಯೋಗಗಳ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಡುಪಿ ಜಿ. ಪಂ.ನ ಬಹುತೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಅಭ್ಯಾಗತರಾಗಿ ಜಿ. ಪಂ. ಉಪಾಧ್ಯಕ್ಷ ಶೀಲಾ ಶೆಟ್ಟಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ, ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ರೇಶ್ಮಾ ಉದಯ ಶೆಟ್ಟಿ, ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ, ತಾ. ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಆರ್. ಕೋಟ್ಯಾನ್ ಆಗಮಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ಪ್ರಾಕೃತಿಕವಾಗಿ ಲಭಿಸುವ ಔಷಧೀಯ ಗುಣವುಳ್ಳ ಜೇನು ಉತ್ತಮ ಆಹಾರ. ಜೇನು ಕೃಷಿಯನ್ನು ಉತ್ತೇಜಿಸಬೇಕಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಪ್ರಸ್ತಾವನೆಗೈದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಹೇಮಂತಕುಮಾರ್ ಎಲ್. ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ನಿರ್ದೇಶಕ ನಿಧೀಶ ಕೆ. ಜೆ. ವಂದಿಸಿದರು.

ಸುಮಾರು 100 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯ ವಿವಿಧ ತೋಟಗಾರಿಕೆ ಬೆಳೆಗಳ ಮಾಹಿತಿ ಕೈಪಿಡಿಯನ್ನು ಜಿ. ಪಂ. ಅಧ್ಯಕ್ಷ ದಿನಕರಬಾಬು ಬಿಡುಗಡೆಗೊಳಿಸಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಉಡುಪಿ ಜಿಲ್ಲೆಯ ವಿವಿಧ ತೋಟಗಾರಿಕೆ ಬೆಳೆಗಳ ಮಾಹಿತಿ ಕೈಪಿಡಿಯನ್ನು ಬುಧವಾರ ಜಿ. ಪಂ. ಅಧ್ಯಕ್ಷ ದಿನಕರಬಾಬು ಬಿಡುಗಡೆಗೊಳಿಸಿದರು. ಜಿ. ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ, ಉಡುಪಿ ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ತಾ. ಪಂ. ಸದಸ್ಯೆ ಶಿಲ್ಪಾ ಕೋಟ್ಯಾನ್, ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭುವನೇಶ್ವರಿ ಮೊದಲಾದವರಿದ್ದರು.


Spread the love

Exit mobile version