‘ಜೈಲು ವಾಸ್ತವ್ಯ ಮಾಡಿ ಬಂದಿರುವ ಬಿಜೆಪಿ ನಾಯಕರಿಗೆ ಗ್ರಾಮ ವಾಸ್ತವ್ಯದ ಅರಿವಿಲ್ಲ – ಐವನ್ ಡಿಸೋಜ 

Spread the love

‘ಜೈಲು ವಾಸ್ತವ್ಯ ಮಾಡಿ ಬಂದಿರುವ ಬಿಜೆಪಿ ನಾಯಕರಿಗೆ ಗ್ರಾಮ ವಾಸ್ತವ್ಯದ ಅರಿವಿಲ್ಲ – ಐವನ್ ಡಿಸೋಜ 

ಮೂಲ್ಕಿ: ‘ಜೈಲು ವಾಸ್ತವ್ಯ ಮಾಡಿ ಬಂದಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇರಲಾರದು’ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಟೀಕಿಸಿದರು.

ಮೂಲ್ಕಿ ಬಳಿಯ ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಗ್ರಾಮ ವಾಸ್ತವ್ಯದೊಂದಿಗೆ ಆ ಗ್ರಾಮದ ಕುಂದುಕೊರತೆ, ಅಲ್ಲಿನ ಸಮಸ್ಯೆ, ಬೇಡಿಕೆ, ಪರಿಹಾರ, ಅಧಿಕಾರಿಗಳ ಹಾಗೂ ಸರ್ಕಾರದ ಸ್ಪಂದನೆ ಇದೆಲ್ಲವೂ ಸೇರಿರುತ್ತದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.

‘ನರೇಂದ್ರ ಮೋದಿಯ ಹೆಸರಿನಲ್ಲಿ ಚುನಾವಣೆ ಗೆದ್ದಿರುವ ಬಿಜೆಪಿ ಸಂಸದರಿಗೆ ಗ್ರಾಮದ ಬಗ್ಗೆ ಚಿಂತನೆ ಇದೆಯೇ? ಈ ಬಗ್ಗೆ ಅವರಿಗೆ ಮೊದಲು ವಿಶೇಷ ತರಬೇತಿ ನೀಡಬೇಕು, ಎಲ್ಲವನ್ನು ಸಹ ರಾಜಕೀಯ ದೃಷ್ಟಿಯಿಂದ ನೋಡದೇ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುವ ಮನೋಭಾವನೆಗಳನ್ನು ವಿಧಾನ ಪರಿಷತ್‌ ವಿರೋಧ ಪಕ್ಷದ ಪಕ್ಷದ ನಾಯಕರು ಬೆಳೆಸಿಕೊಳ್ಳಲಿ’ ಎಂದರು.

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ಅವರು , ‘ಓಟಿಗಾಗಿ ಮೋದಿ, ಕೆಲಸಕ್ಕಾಗಿ ನಾವು ಬೇಕಾ ?’ ಎಂಬ ಹೇಳಿಕೆಗಳು ಭಾವನಾತ್ಮಕವಾಗಿ ಹೇಳಿದ್ದಾಗಿದೆ. ನಿಸ್ವಾರ್ಥವಾಗಿ ಜನರ ಸೇವೆಯನ್ನು ಮಾಡುವಾಗ ಇಂತಹ ನೋವು ಬರುವುದು ಸಹಜ, ಅಭಿವೃದ್ಧಿಯ ಪರವಾಗಿ ಕೆಲಸ ಮಾಡುವಾಗ ಜನರೂ ಸಹ ನಮಗೆ ಆಶೀರ್ವಾದ ನೀಡುತ್ತಾರೆ ಎಂದೇ ಈ ಹೇಳಿಕೆಗಳ ಹಿಂದಿರುವ ಮರ್ಮ’ ಎಂದು ಐವನ್ ಡಿಸೋಜ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.


Spread the love
1 Comment
Inline Feedbacks
View all comments
Krishna Kulkarni
5 years ago

ಆರೋಪದಿಂದ ಕೋರ್ಟನಲ್ಲೇ ವಿಮುಕ್ತರಾದಗ ಮತ್ತೆ ಮತ್ತೇ ಅದೇ ವಿಷಯವನ್ನು ಹೇಳುವದು ಎಷ್ಟು ಸರಿ? ಇಂತಹ ಉದ್ಧಟ ತನದ ಮಾತುಗಳಿಂದಲೇ ಇವರು ಜನರಿಂದ ದೂರವಾಗಿದ್ದಾರೆ ಸಾಕಷ್ಟು ಅಧಿಕಾರಿಗಳು ಇದ್ದಾರೆ ಶಾಸಕರು ಇದ್ದಾರೆ ಅವರ ಮುಖಾಂತರ ಜನರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಬರುವದಿಲ್ಲವೇ