ಜೋಕಟ್ಟೆಯಲ್ಲಿ ಅಂತರ್ ರಾಜ್ಯದ ಕಾರ್ಮಿಕರಿಂದ ಪ್ರತಿಭಟನೆ ಸ್ಥಳಕ್ಕೆ ಐವನ್ ಡಿಸೋಜ ಭೇಟಿ, ಧರಣಿ ಹಿಂತೆಗೆತ
ಜೋಕಟ್ಟೆಯ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ದಿಂದ ಆಗಮಿಸಿ ಕೆಲಸ ಮಾಡುತ್ತಿದ್ದ ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಸೇವಾ ಸಿಂಧು ಹಿಂತೆಗೆದುಕೊಳ್ಳಲಾಗಿದೆ ನೋಂದಾವಣೆ ಆಗುತ್ತಿಲ್ಲ ನಮಗೆ ಊರಿಗೆ ಕಳಿಸಿಕೊಡಿ ಎಂದು ಧರಣಿ ನಡೆಸುತ್ತಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಐವನ್ ಡಿಸೋಜರವರು ಅವರೊಂದಿಗೆ ಮಾತನಾಡಿ ಎರಡು ದಿವಸದ ಬಳಿಕ ನೋಂದಾವಣಿ ಕಾರ್ಯ ಕೈಗೊಂಡು ನಂತರ ಅವರನ್ನು ವಿಶೇಷ ರೈಲಿನ ಮೂಲಕ ಊರುಗಳಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಲ್ಲಾ ಕಾರ್ಮಿಕರಿಗೆ ಈ ಬಗ್ಗೆ ತಿಳುವಳಿಕೆ ನೀಡಿ ಮಾನ್ಯ ಶಾಸಕರು ಸಮಾಧಾನಿಸಿ ಸರ್ಕಾರ ಕೈಗೊಳ್ಳುವ ಕ್ರಮದ ಬಗ್ಗೆ ವಿಚಾರಿಸಿ ಕಳಿಸುವ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರು ಬಷೀರ್ ಜೋಕಟ್ಟೆ ಉಪಾಧ್ಯಕ್ಷ ಸಂಸುದ್ದಿ ಯೂತ್ ಕಾಂಗ್ರೆಸ್ ಅಸ್ಗರ್ ಪಂಚಾಯತ್ ಸದಸ್ಯ ಮೋಹಿನಿ ಶರೀಫ್ ಹಾಗೂ ಮುಂತಾದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.