Home Mangalorean News Kannada News ಜ್ಞಾನದಾಹದಿಂದ ವಿದ್ಯಾರ್ಥಿಯ ಔನ್ನತ್ಯ – ಅಪರ ಜಿಲ್ಲಾಧಿಕಾರಿಗಳು

ಜ್ಞಾನದಾಹದಿಂದ ವಿದ್ಯಾರ್ಥಿಯ ಔನ್ನತ್ಯ – ಅಪರ ಜಿಲ್ಲಾಧಿಕಾರಿಗಳು

Spread the love

ಜ್ಞಾನದಾಹದಿಂದ ವಿದ್ಯಾರ್ಥಿಯ ಔನ್ನತ್ಯ – ಅಪರ ಜಿಲ್ಲಾಧಿಕಾರಿಗಳು

ಮಂಗಳೂರು: ವಿದ್ಯಾಕೇಂದ್ರಗಳಲ್ಲಿ ಅಧ್ಯಾಪಕರ ಪುಸ್ತಕ ಪ್ರೀತಿ ಹಾಗೂ ವಿದ್ಯಾರ್ಥಿಗಳ ಜ್ಞಾನದಾಹ ಒಬ್ಬ ವ್ಯಕ್ತಿಯನ್ನು ಅತೀ ಎತ್ತರಕ್ಕೆ ಬೆಳೆಸುವಲ್ಲಿ ಸಹಕಾರಿ ಹಾಗೂ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಲ್ಲಿ ಈ ಕೆಲಸ ಇನ್ನಷ್ಟು ಸುಲಭವೆಂದು  ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ ಕೆ.ಎ.ಎಸ್., ಅವರು ಅಭಿಪ್ರಾಯಪಟ್ಟರು.

ಅವರು ಕಾರ್‍ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಅಭಿವಿನ್ಯಾಸ ಹಾಗೂ ದ್ವಿತೀಯ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದರು.        ಶುಭಾಶಂಸನೆಗೈದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕ      ಪೆÇ್ರ. ಹೆಚ್. ಉದಯಶಂಕರ್ ಮಾತನಾಡಿ ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜಿಗಿಂತ ಉತ್ತಮ ಪ್ರಗತಿ ಹಾಗೂ ಫಲಿತಾಂಶಗಳನ್ನು ನೀಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಸಮಾಜದ ಅಸ್ತಿಯನ್ನಾಗಿ ಮಾಡುತ್ತಿವೆ ಎಂದು ಪ್ರಶಂಸೆಗೈದರಲ್ಲದೆ, ಅದರಲ್ಲೂ ನಗರದ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತ್ತೀಚಿನ ವರ್ಷಗಳಲ್ಲಿ ಕ್ಷಿಪ್ರಪ್ರಗತಿಯನ್ನು ಕಂಡಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಜಿ.ಎಂ ಕಾಲೇಜು ಉಡುಪಿ ವಿಶ್ರಾಂತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳದೆ ಉತ್ತಮ ಗುರಿಯನ್ನು ಇಟ್ಟುಕೊಂಡು, ಗುರುವಿನ ಮಾತುಗಳಿಗೆ ಕಿವಿಗೊಟ್ಟು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿದಲ್ಲಿ ಭವಿಷ್ಯದ ಬದುಕು ಹಸನಾಗುವುದಾಗಿ ತಿಳಿಸಿದರು.  ಆಧುನಿಕ ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡು ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಕರೆನೀಡಿದರು.

ಮಂಗಳೂರಿನ ಎ.ಪಿ.ಡಿ ಪ್ರತಷ್ಠಾನದ  ಸ್ವಚ್ಛ ಭಾರತ ವಿಭಾಗದ ಸಂಯೋಜನಾಧಿಕಾರಿಯಾದ ನವೀನ್ ಡಿಸೋಜ  ಪರಿಸರಪ್ರಜ್ಞೆ ಮೂಡಿಸುವಲ್ಲಿ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎನ್ನುವುದರ ಜೊತೆಗೆ ಪರಿಸರ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸ್ಥಾಪಕ ಅಬ್ದುಲ್ಲಾ ಎ. ರಹಮಾನ್, ಹಾಗೂ ಯೋಜನಾ ವಿಭಾಗದ ನಿರ್ದೇಶಕಿ ನೇಹಾ ಶೆಣೈಯವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಹಳೆ ವಿದ್ಯಾರ್ಥಿಯಾದ  ಸಂದೇಶ್ ಹಾಗೂ ಗೀತೇಶ್ ಮಡ್ಯಾರು ಇವರ ನಿರ್ದೇಶನದ ‘ಮಸ್ಕಿರಿ’’ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ., ವಹಿಸಿದ್ದರು.  ಸಭೆಯಲ್ಲಿ ಶೈಕ್ಷಣಿಕ ಸಲಹೆಗಾರರಾದ ಡಾ. ಶಿವರಾಮ ಪಿ, ಹಿಂದಿ ಸಹಪ್ರಾಧ್ಯಾಪಕರು, ಸ್ನಾತಕೋತ್ತರ ಸಂಯೋಜಕರಾದ ಡಾ. ಪ್ರಕಾಶಚಂದ್ರ ಬಿ, ಕನ್ನಡ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲಕರಾದ  ರವಿಕುಮಾರ ಎಂ.ಪಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ನವೀನ್ ಕೊಣಾಜೆ ನಿರ್ವಹಿಸಿ ವಂದಿಸಿದರು.

ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ: ಕಾರ್ಯಾಗಾರ

ಮಂಗಳೂರು: ತಾಯಿ ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 83 ಖಾಸಗಿ ಆಸ್ಪತ್ರೆ ಹಾಗೂ 8 ವೈದ್ಯಕೀಯ ಮಹಾವಿದ್ಯಾಲಗಳಿಗೆ ಕಾರ್ಯಗಾರವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.  ತರಬೇತಿಗೆ ಸುಮಾರು 120 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ಹಾಗೂ 8 ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.

ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆಯಲ್ಲಿ ಖಾಸಗಿ ಆಸ್ಪತ್ರೆಗಳು ಯವ ರೀತಿ ಸೇವೆಗಳ ಮಾಹಿತಿಯನ್ನು ನೀಡಬೇಕೆಂಬುದರ ಬಗ್ಗೆ  ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಯವರಾದ ಡಾ  ಅಶೋಕ್ ಹೆಚ್ ಸಭೆಯಲ್ಲಿ ತಿಳಿಸಿದರು. ಈಗಾಗಲೇ ಕರ್ನಾಟಕದಲ್ಲಿ ತಾಯಿ ಮರಣ ಪ್ರಮಾಣ 131/1,00,000 ಜೀವಂತ ಜನನಕ್ಕೆ ಇರುವುದಾಗಿ ಹಾಗೂ ಮಕ್ಕಳ ಮರಣ ಪ್ರಮಾಣ 28/1000 ಜೀವಂತ ಜನನಕ್ಕೆ ಇರುವುದಾಗಿ ಅದನ್ನು 2020 ಇಸವಿಗೆ ತಾಯಿ ಮರಣ ಪ್ರಮಣವನ್ನು 100/1,00,000 ಜೀವಂತ ಜನನಕ್ಕೆ ಹಾಗೂ ಮಕ್ಕಳ ಮರಣ ಪ್ರಮಾಣವನ್ನು 20/1000 ಜೀವಂತ ಜನನಕ್ಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರ ಪ್ರಮುಖವಾಗಿದೆ. ಈಗಾಗಲೇ ಕಳೆದ 3 ವರ್ಷದ ವರದಿಯನ್ನು ಪರಿಶೀಲಿಸಿದಾಗ ಹೆರಿಗೆ 70% ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 30% ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಗಾರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ  ಅಶೋಕ್ ಹೆಚ್ ತಿಳಿಸಿದರು.

ಹೆರಿಗೆ ಕೋಣೆಯಲ್ಲಿ ಇರಬೇಕಾದ ಸೌಲಭ್ಯ ಸಲಕರಣೆ ಹಾಗೂ ವಿವಿಧ ಔಷಧಿ ಕಿಟ್‍ಗಳ ಬಗ್ಗೆ, ಶಸ್ತ್ರ ಚಿಕಿತ್ಸೆ ನಡೆಯುವ ಆಪರೇಷನ್ ಥಿಯೇಟರ್  , ತಾಜ್ಯ ವಿಲೇವಾರಿ  ಬಗ್ಗೆ ಹಾಗೂ ಚುಚ್ಚುಮದ್ದು ಬಗ್ಗೆ ವಿಸ್ತಾರವಾಗಿ ಜಿಲ್ಲಾ ಆರ್.ಸಿಹೆಚ್ ಅಧಿಕಾರಿ ಡಾ  ಅಶೋಕ್ ಹೆಚ್ ತಿಳಿಸಿದರು.

ಎಂ.ಟಿ.ಪಿ ಹಾಗೂ ವಿವಧ ನಮೂನೆಗಳ ಬಗ್ಗೆ ಜಿಲ್ಲಾ ಶುಶ್ರೂಷಣಾಧಿಕಾರಿ ಲಿಸ್ಸಿ ಕೆ.ವಿ ಸಭೆಯಲ್ಲಿ ತಿಳಿಸಿದರು ಹಾಗೂ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ  ಬಗ್ಗೆ ಜಿಲ್ಲಾ ಎಂ&ಇ ವ್ಯವಸ್ಥಾಪಕರು ಕುಮಾರಿ ಬೃಂದಾ ಇವರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಅಶ್ರಫ್, ನಗರ ಕಾರ್ಯಕ್ರಮ ವ್ಯವಸ್ಥಾಪಕ ಕುಮಾರಿ ಶುೃತಿ ಕೋಟ್ಯಾನ್, ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಮುಹಮ್ಮದ್ ಯಾಸರ್ ಉಪಸ್ಥಿತರಿದ್ದರು.


Spread the love

Exit mobile version