ಜ 15: ತೆಂಕನಿಡಿಯೂರಿನಲ್ಲಿ ರಾಧ್ಮಾ ರೆಸಿಡೆನ್ಸಿ ಉದ್ಘಾಟನೆ
ಉಡುಪಿ: ತೆಂಕನಿಡಿಯೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ವಾಣಿಜ್ಯ ಮತ್ತು ವಸತಿ ಸಮುಚ್ಚಯ ರಾಧ್ಮಾ ರೆಸಿಡೆನ್ಸಿಯ ಉದ್ಘಾಟನ ಸಮಾರಂಭವು ಜ. 15ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ.
ವಿಧಾನ ಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಅವರು ವಸತಿ ಸಮುಚ್ಛಯವನ್ನು ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ದೀಪ ಬೆಳಗಿಸಲಿದ್ದಾರೆ. ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಕೆ. ರಘುಪತಿ ಭಟ್, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ್ ತೋನ್ಸೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ. ಶಂಭು ಶೆಟ್ಟಿ, ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಮಾಂಡವಿ ಡೆವೆಲಪರ್ ಜೆರಿ ವಿನ್ಸೆಂಟ್, ಕಾರ್ತಿಕ್ ಎಸ್ಟೇಟ್ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ತಾ. ಪಂ. ಸದಸ್ಯರಾದ ಶರತ್ ಕುಮಾರ್, ಧನಂಜಯ್ ಕುಂದರ್, ಕಿರಣ್ ಮಿಲ್ಕ್ ಡೈರಿಯ ಮಾಲಕ ಟಿ. ಗೋಪಾಲಕೃಷ್ಣ ಶೆಟ್ಟಿ, ವಿಜಯ ಬ್ಯಾಂಕ್ ಕೆಳಾರ್ಕಳಬೆಟ್ಟು ಶಾಖಾ ಪ್ರಬಂಧಕ ಗಣೇಶ್ ಮೆಂಡನ್, ಉಡುಪಿ ಎ.ಜಿ. ಆಸೋಸಿಯೇಟ್ಸ್ ಆರ್ಕಿಟೆಕ್ಟರ್ ಯೋಗೀಶ್ ಚಂದ್ರಧರ ಮತ್ತಿತರರು ಉಪಸ್ಥಿತರಿರಲಿದ್ದಾರೆ.ಜ.14ರಂದು ಸಂಜೆ ಸಮುಚ್ಛಯದಲ್ಲಿ ಹೋಮ ಹವನಾದಿಗಳು ನಡೆಯಲಿದೆ.
ಒಂದು ಮತ್ತು ಎರಡು ಬೆಡ್ರೂಂಗಳ, ಒಟ್ಟು 20 ಫ್ಲಾಟ್ಗಳಿದ್ದು ಎಲ್ಲ ಆಧುನಿಕ ಸೌಕರ್ಯ ಹೊಂದಿದೆ. ಶಿಕ್ಷಣ ಸಂಸ್ಥೆ, ಧಾರ್ಮಿಕ ಕೇಂದ್ರ, ಪಂಚಾಯತ್, ಬಸ್ ನಿಲ್ದಾಣ ಅತಿ ಸಮೀಪದಲ್ಲಿದ್ದು ಶೇ. 50 ಫ್ಲ್ಯಾಟ್ಗಳು ಈಗಾಗಲೇ ಮಾರಾಟಗೊಂಡಿವೆ. ಲಿಫ್ಟ್ ವ್ಯವಸ್ಥೆ, ವಿಶಾಲವಾದ ಭದ್ರತಾ ಕಾರ್ ಪಾರ್ಕಿಂಗ್, ಎಸ್ಟಿಪಿ ಡ್ರೈನೇಜ್, ಸಿಸಿಟಿವಿ, ದಿನದ 24 ಗಂಟೆ ತೆರೆದ ಬಾವಿಯ ಶುದ್ದನೀರು, ಪೈಪ್ಲೈನ್ ಮೂಲಕ ಗ್ಯಾಸ್ ಕನೆಕ್ಷನ್, ಜನರೇಟರ್ ಬ್ಯಾಕ್ ಅಫ್, ವಾಚ್ಮೆನ್ ವ್ಯವಸ್ಥೆ, ರಾಷ್ಟ್ರೀಕೃತ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಫ್ ಮೈಸೂರು, ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ಗಳಲ್ಲಿ ಇಲ್ಲಿನ ಸಾಲ ಯೋಜನೆಯ ಸೌಲಭ್ಯಗಳನ್ನು ಮಾಡಿ ಕೊಡಲಾಗುವುದು ಎಂದು ರಾಧ್ಮ ರೆಸಿಡೆನ್ಸಿಯ ಪ್ರವರ್ತಕ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ಬಡಾಮನೆ ತಿಳಿಸಿದ್ದಾರೆ.