ಜ.26-30: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ
ಕಾರ್ಕಳ: ವಿಶ್ವ ಪ್ರಸಿದ್ದ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ-2025 ಜನವರಿ 26ರಿಂದ 30ರ ವರೆಗೆ ಜಗಲಿದೆ. 2025 ರ ವರ್ಷದ ಮಹೋತ್ಸವದ ಸಂದೇಶ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” ಎಂಬುವುದಾಗಿದೆ.
- ಜನವರಿ 26ರ ಬೆಳಿಗ್ಗೆ 10.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಪ್ರಧಾನ ಯಾಜಕರಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ.
- ಜನವರಿ 27ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು, ಉಡುಪಿ ಧರ್ಮಪ್ರಾಂತ್ಯದ ಶೇಷ್ಠ ಧರ್ಮಗುರು ಅ.ವಂ.ಫರ್ಡಿನಾಂಡ್ ಗೋನ್ಸಾಲ್ವಿಸ್ ನೆರವೇರಿಸಲಿದ್ದಾರೆ.
- ಜನವರಿ 28ರಂದು ಸಾಯಂಕಾಲ 5.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ಯನ್ನು ಬೆಳ್ತಂಗಡಿ ಧರ್ಮಾಧ್ಯಕ್ಷ ಪರಮಪೂಜ್ಯ ಲೋರೆನ್ಸ್ ಮುಕ್ಕುಝೀ ನೆರವೇರಿಸಲಿದ್ದಾರೆ.
- ಜನವರಿ 29ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು ಮಂಗಳೂರು ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಸೊಜ್ ನೆರವೇರಿಸಲಿದ್ದಾರೆ.
- ಜನವರಿ 30ರಂದು ಬೆಳಿಗ್ಗೆ 10.00 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು. ಬಾರುಯಿಪುರ್ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಸಾಲ್ವದೊರ್ ಲೋಬೋ ನೆರವೇರಿಸಲಿದ್ದಾರೆ.
- ಸಂತ ಲೋರೆನ್ಸರ ಗೌರವಾರ್ಥ ನವೇನ ಪ್ರಾರ್ಥನೆಯು ಜನವರಿ 17ರಿಂದ ಆರಂಭಗೊಳ್ಳಲಿದೆ. ಬೆಳಿಗ್ಗೆ 9 ಗಂಟಗೆ ಆರಾಧನೆ, 9.30ಕ್ಕೆ ಬಲಿಪೂಜೆ ನವೇನಕ್ಕೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮುಡ್ದಮ್ ಸೂಕ್ತ ಸಮಯದಲ್ಲಿ ಕಳುಹಿಸಬಹುದು.
- ಜನವರಿ 26ರಂದು ರವಿವಾರ ಮಕ್ಕಳಿಗೋಸ್ಕರ ವಿಶೇಷ ಬಲಿಪೂಜೆ ಇರುವುದು. ಆ ದಿನದ ಪ್ರಥಮ ಪೂಜೆ ಬೆಳಿಗ್ಗೆ 7.30ಕ್ಕೆ ಕೊನೆಯ ಪೂಜೆ ರಾತ್ರಿ 8ಗಂಟೆಗೆ ನೆರವೇರಲಿರುವುದು.
- ಜನವರಿ 27ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6.00 ಗಂಟಗೆ ದಿವ್ಯಬಲಿಪೂಜೆ ಇರುವುದು. ಆ ದಿನದಂದು ರೋಗಿಗಳಿಗಾಗಿ ವಿಶೇಷ ಪೂಜೆ ಹಾಗೂ ಆ ದಿನ ಮಾತ್ರ ರೋಗಿಗಳ ವಾಹನಗಳನ್ನು ಇಗರ್ಜಿಯ ವಠಾರಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಬೇರೆ ದಿನಗಳಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
- ಜನವರಿ 28ರಂದು ಹಾಗೂ ಜನವರಿ 29ರಂದು ಪ್ರಥಮ ಪೂಜೆ ಬೆಳಿಗ್ಗೆ 8.00 ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 10.00ಗಂಟೆಗೆ ನೆರವೇರಲಿದೆ.
- ಜನವರಿ 30ರಂದು ಪ್ರಥಮ ಪೂಜೆ ಬೆಳಿಗ್ಗೆ 8.00ಗಂಟೆಗೆ ಹಾಗೂ ಕೊನೆಯ ಪೂಜೆ ರಾತ್ರಿ 8.30ಕ್ಕೆ ನೆರವೇರಲಿದೆ.