ಟಾರ್ಗೆಟ್ ಗ್ರೂಪ್ ಇಲ್ಯಾಸ್ ಹತ್ಯೆ ಪ್ರಕರಣ; ಇಬ್ಬರ ಬಂಧನ
ಮಂಗಳೂರು: ಇತ್ತೀಚೆಗೆ ನಡೆದ ಟಾರ್ಗೆಟ್ ಗ್ರೂಪ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಠಾಣೆ ಹಾಗೂ ಮಂಗಳೂರು ಸಿಸಿಬಿ ಘಟಕದ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ಅಬ್ಬಕ್ಕ ವೃತ್ತದ ನಿವಾಸಿ ಮಹಮ್ಮದ್ ಸಮೀರ್ ಯಾನೆ ರೋಬರ್ಟ್ (27) ಹಾಗೂ ಕಾಸರಗೋಡು ಜಿಲ್ಲೆಯ ಗೆರುಕಟ್ಟೆ ನಿವಾಸಿ ನಮೀರ್ ಹಂಝ (34) ಎಂದು ಗುರುತಿಸಲಾಗಿದೆ.
ಆರೋಪಿ ಸಮೀರ್ ಟಾರ್ಗಟ್ ಗ್ರೂಪ್ ನ ಸುರ್ಮಾ ಇಮ್ರಾನ್ ಎಂಬವನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ಟಾರ್ಗಟ್ ಗ್ರೂಪ್ ನ ಹಂಝ ಎಂಬವನ ಮನೆಯನ್ನು ಹಾನಿ ಮಾಡಿ, ಮನೆ ಮಂದಿಗೆ ಹಲ್ಲೆ ನಡೆಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಮೀರ್ ಹಂಝನ ಮೇಲೆ ಕೋಣಾಜೆ ಠಾಣೆಯಲ್ಲಿ ಒಂದು ಕೊಲೆ ಯತ್ನ , ಸುರತ್ಕಲ್ ಠಾಣೆಯಲ್ಲಿ ಒಂದು ದರೋಡೆ ಪ್ರಕರಣ, ಉತ್ತರ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ:13-01-2018 ರಂದು ಬೆಳಿಗ್ಗೆ 09-05 ಗಂಟೆ ಸುಮಾರಿಗೆ ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಎಂಬವರನ್ನು ಅವರ ಮನೆಯಾದ ಮಂಗಳೂರು ನಗರದ ಜಪ್ಪು ಕುಡ್ಪಾಡಿ ಜುಮ್ಮಾ ಮಸೀದಿಯ ಹತ್ತಿರ ವಿರುವ ಮಿಫ್ತಾ ಅಪಾರ್ಟಮೆಂಟ್ ನ ಫ್ಲಾಟ್ ನಂಬ್ರ 303 ರಲ್ಲಿ ದುಷ್ಕರ್ಮಿಗಳು ಚೂರಿಯಿಂದ ಕೊಲೆ ನಡೆಸಿದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.