ಟಿಪ್ಪು ಬದಲು ಒನಕೆ ಒಬವ್ವ ಜಯಂತಿ ಆಚರಿಸಿ: ಭವಾನಿ ಪ್ರಭು
ಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರಕಾರ ನವೆಂಬರ್ 10 ರಂದು, ಟಿಪ್ಪೂ ಸುಲ್ತಾನನ ಜಯಂತಿಯನ್ನು ಆಚರಿಸಲು ನಿರ್ಧರಿಸಿರುವುದನ್ನು ರಣರಾಗಿಣಿ ಶಾಖೆಯು ತೀವ್ರವಾಗಿ ಖಂಡಿಸುತ್ತದೆ.
ಟಿಪ್ಪು ಮತಾಂಧ, ಅತ್ಯಾಚಾರಿ ಹಾಗೂ ಕ್ರೂರಿ, ಹಾಗೂ ಮಹಿಳಾ ವಿರೋಧಿಯಾಗಿದ್ದ. ದಾಖಲೆಗಳ ಪ್ರಕಾರ ಟಿಪ್ಪುವಿನ ಜನಾನಖಾನೆಯಲ್ಲಿ 333 ಮಹಿಳೆಯರನ್ನು ಇಡಲಾಗಿತ್ತು. ಟಿಪ್ಪುವು ತಾನು ಗೆದ್ದ ಪ್ರದೇಶಗಳ ರಾಣಿಯರಾದ ಮಡಿಕೇರಿಯ ರಾಜನ 2 ತಂಗಿಯಂದಿರು ಮತ್ತು ಮೈಸೂರು ಒಡೆಯರ ರಾಜರಿಗೆ ಸಂಬಂಧಿಸಿದ 3 ಮಹಿಳೆಯರನ್ನೊಳಗೊಂಡಂತೆ ಅನೇಕ ಮಹಿಳೆಯರನ್ನು ಜನಾನಖಾನೆಯಲ್ಲಿಟ್ಟು ಹಿಂಸಿಸುತ್ತಿದ್ದನು. ಅನೇಕ ಸ್ತ್ರೀ-ಪುರುಷರನ್ನು ಕೊಝೀಕೊಡನಲ್ಲಿ ನೇಣು ಹಾಕಲಾಗಿತ್ತು ಮತ್ತು ತಾಯಂದಿರ ಕುತ್ತಿಗೆಗೆ ಅವರ ಮಕ್ಕಳನ್ನು ಕಟ್ಟಿ ನೇಣು ಹಾಕುವಂತಹ ಭಯಾನಕ ಕೃತ್ಯಗಳನ್ನು ಮಾಡುತ್ತಿದ್ದನು. ಟಿಪ್ಪು ತನ್ನ ಆನೆಯ ಕಾಲಿಗೆ ನಗ್ನವಾಗಿಸಿದ ಹಿಂದೂಗಳನ್ನು ಕಟ್ಟಿ ಅವರ ದೇಹಗಳು ತುಂಡಾಗುವವರೆಗೂ ಆನೆಯನ್ನು ಚಲಿಸುತ್ತಿದ್ದ. ಹಿಂದೂ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಮುಸ್ಲಿಮರಿಗೆ ಮದುವೆ ಮಾಡುತ್ತಿದ್ದ ಹಾಗೂ ಹಿಂದೂ ಪುರುಷರನ್ನು ಮುಸ್ಲಿಂ ಮಹಿಳೆಯರೊಂದಿಗೆ ವಿವಾಹ ಮಾಡಿಸುತ್ತಿದ್ದನು. ಅದೇ ರೀತಿ ಚಿತ್ರದುರ್ಗದ ಕೋಟೆಯನ್ನು ಕಪಟತನದಿಂದ ವಶಪಡಿಸಿಕೊಂಡು ಒನಕೆ ಓಬವ್ವರಂತಹ ನೂರಾರು ಮಹಿಳಾ ಮಣಿಗಳನ್ನು ನೀಚತನದಿಂದ ಕೊಂದ ಪಾಪಿ ಟಿಪ್ಪು ಸುಲ್ತಾನ. ಇಂತಹ ಕ್ರೂರಿಯ ಜಯಂತಿಯನ್ನು ಆಚರಿಸುವುದು ಕನ್ನಡ ನಾಡಿನ ಒನಕೆ ಓಬವ್ವ,ಕಿತ್ತೂರು ರಾಣಿಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮುಂತಾದ ರಣರಾಗಿಣಿಯರಿಗೆ ಮಾಡಿದ ಅವಮಾನವಾಗಿದೆ.
ಇಂದು ಇದೇ ಟಿಪ್ಪುವಿನ ವಂಶಜರು ಅವನ ಆಡಳಿತವನ್ನು ಪುನಃ ಕರ್ನಾಟಕ, ಕೇರಳದಲ್ಲಿ ಇಸ್ಲಾಮಿಕ್ ಹೆಸರಿನಲ್ಲಿ ರಾಜ್ಯ ತರಲು ಪ್ರಯತ್ನ ಮಾಡುತ್ತಿದ್ದಾರೆಂದು ಮೊನ್ನೆ ಬೆಂಗಳೂರಿನಲ್ಲಿ ರುದ್ರೇಶ ಹತ್ಯೆ ರೂವಾರಿಗಳು ಪೋಲಿಸ್ ವಿಚಾರಣೆಯ ವೇಳೆ ಹೇಳಿದ್ದಾರೆ. ಅದಕ್ಕಾಗಿ ಕರ್ನಾಟಕ ಮತ್ತು ಕೇರಳ ಸೇರಿದಂತೆ ಸಾವಿರಾರು ಕಾಲೇಜು ಯುವತಿಯರು, ಸಮಾಜದ ಮಹಿಳೆಯರನ್ನು ಲವ್ ಜಿಹಾದ್, ರೋಮಿಯೋ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಅಪಹರಿಸಿ, ಅವರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿ, ತದನಂತರ ಅವರನ್ನು ಭಯೋತ್ಪದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದನ್ನು ಬಹಳಷ್ಟು ವರ್ಷದ ಹಿಂದೆಯೇ ಸ್ವತಃ ಕೇರಳ ಉಚ್ಚ ನ್ಯಾಯಾಲಯ, ಕೇರಳ ಪೋಲಿಸ್ ಮಹಾನಿರ್ದೇಶಕರು, ಕೇರಳ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯದ ತನಿಖಾ ಸಂಸ್ಥೆಗಳು ದೃಢಪಡಿಸಿದ್ದರು. ಹೀಗಿರುವಾಗ ಇಂತಹ ಪಾಶವಿ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಕ್ರೂರಿ ಟಿಪ್ಪುಸುಲ್ತಾನನ ಜಯಂತಿಯನ್ನು ಆಚರಿಸುವುದು ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಎಷ್ಟರ ಮಟ್ಟಿಗೆ ಸರಿ? ನಿರಂತರ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಯುವರಾಜ ಮಾನ್ಯ ರಾಹುಲ ಗಾಂಧಿಯವರ ಮಹಿಳಾ ಸಬಲೀಕರಣದ ಆದರ್ಶ ಇದೇನಾ? ಇದು ಅಹಿಂಸಾವಾದಿ ಗಾಂಧೀಜಿಯವರ ಕಾಂಗ್ರೆಸ್ಗೆ ಭೂಷಣವೇ? ಕ್ರೂರಿ, ರಕ್ತಸಿಕ್ತ ಇತಿಹಾಸದ ಟಿಪ್ಪು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆಯಾದರೂ ಏನು? ಯಾವ ಮಾನದಂಡದ ಆಧಾರದ ಮೇಲೆ ಅವನ ಈ ಜಯಂತಿಯನ್ನು ಆಚರಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಟಿಪ್ಪುವಿನ ಆಡಳಿತದಲ್ಲಿ ಯಾವ ಮಹಿಳೆಯು ಸುರಕ್ಷಿತ ಇರಲಿಲ್ಲ. ನಿರಂತರ ಅತ್ಯಾಚಾರ, ಹಿಂಸೆ, ಹತ್ಯೆ ನಡೆಯುತ್ತಿತ್ತು. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯು ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುವುದು ಮಾತ್ರವಲ್ಲ, ಮಹಿಳೆಯರ ಸುರಕ್ಷತೆಗೆ ಆದರ್ಶ, ಮಹಿಳೆಯರಲ್ಲಿ ಕ್ಷಾತ್ರತೇಜ ನಿರ್ಮಿಸಿ ಅವರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸುವ ವೀರ ವನಿತೆ ಒನಕೆ ಓಬವ್ವಳ ಜಯಂತಿಯನ್ನು ಆಚರಿಸಬೇಕೆಂದು ಆಗ್ರಹಿಸಿದೆ.