ಟಿ.ನಾರಾಯಣಸ್ವಾಮಿ ಪರಿಷತ್ ಸದಸ್ಯತ್ವ ರದ್ದತಿಗೆ ರಾಜ್ಯಪಾಲರಿಗೆ ಮನವಿ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಟಿ.ನಾರಾಯಣಸ್ವಾಮಿ ಸರಕಾರದಿಂದ ಪಡೆದುಕೊಂಡ ನಿವೇಶನವನ್ನು ದುರುಪಯೋಗಪಡಿಸಿಕೊಂಡಿರುವುದು ಮತ್ತು ಕರ್ನಾಟಕ ಗೃಹ ಮಂಡಳಿಗೆ ತಪ್ಪು ಮಾಹಿತಿ ಒದಗಿಸಿ ಕಾನೂನುಬಾಹಿರವಾಗಿ ಸಿ.ಎ. ಸೈಟ್ ಪಡೆದ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರಾಗಿರುವ ಮಂಜುನಾಥ ಭಂಡಾರಿ ಮತ್ತು ವಸಂತ್ ಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಅಕ್ರಮವಾಗಿ ಸೈಟ್ ಪಡೆದಿರುವ ದಾಖಲೆಗಳನ್ನು ರಾಜ್ಯಪಾಲರ ಗಮನಕ್ಕೆ ತಂದು ಟಿ.ನಾರಾಯಣಸ್ವಾಮಿ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಲಾಯಿತು.
ಶಾಸಕರುಗಳಾದ ಪುಟ್ಟಣ್ಣ, ನಾರಾಯಣಸ್ವಾಮಿ, ದಿನೇಶ್ ಗೂಳಿಗೌಡ , ಹಾಗು ಇನ್ನಿತರ ಶಾಸಕರುಗಳು ಈ ವೇಳೆ ಉಪಸ್ಥಿತರಿದ್ದರು.