Home Mangalorean News Kannada News ‘ಟೀಂ ಬಿ ಹ್ಯೂಮನ್’ ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ

‘ಟೀಂ ಬಿ ಹ್ಯೂಮನ್’ ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ

Spread the love

‘ಟೀಂ ಬಿ ಹ್ಯೂಮನ್’ ನಿಂದ 600 ಕುಟುಂಬಗಳಿಗೆ ರೇಶನ್ ಕಿಟ್ ವಿತರಣೆ

ಕೋವಿಡ್ 19 ಲಾಕ್‍ಡೌನ್‍ನಿಂದಾಗಿ ಕಂಗಾಲಾದ ವಲಸೆ ಕಾರ್ಮಿಕರ ಹೊಟ್ಟೆ ತಣಿಸುವ ಕಾರ್ಯವನ್ನು ಮೊದಲಿಗೆ ಕೈಗೆತ್ತಿಕೊಂಡು ಜನಮನ್ನಣೆ ಗಳಿಸಿರುವ ಮಂಗಳೂರಿನ ‘ಟೀಂ ಬಿ ಹ್ಯೂಮನ್’ ಸಮಾಜ ಸೇವಾ ಸಂಸ್ಥೆಯು ಇದೀಗ ಎಲ್ಲ ಜಾತಿ, ಧರ್ಮಗಳ ದಿನಕೂಲಿ ಕಾರ್ಮಿಕರು ಮತ್ತು ಬಡವರ ಮನೆಬಾಗಿಲಿಗೆ ರೇಶನ್ ಕಿಟ್ ತಲಪಿಸುವ ಯೋಜನೆಯನ್ನು ಕೈಗೊತ್ತಿಕೊಂಡಿದೆ.

ಟೀಂ ಬಿ ಹ್ಯೂಮನ್ ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ರವರ ನೇತ್ರತ್ವದಲ್ಲಿ, ಸದಸ್ಯರಾದ ಅಲ್ತಾಫ್, ನವಾಝ್, ಶಮೀಮ್, ಅಶ್ರಫ್ ಐನಾ ಗ್ರೂಪ್, ಬಾಷಾ, ಪ್ರದೀಪ್‍ರವರ ತಂಡ ದ.ಕ. ಜಿಲ್ಲೆಯ ಸುಮಾರು ಆರು ನೂರು ಆಯ್ದ ಕುಟುಂಬಗಳ ಮನೆ ಬಾಗಿಲಿಗೆ ಮೊದಲ ಹಂತದ ರೇಶನ್ ಕಿಟ್ ತಲಪಿಸಿದೆ.

ಕಾವೂರು, ಬಜ್ಪೆ, ಕಿನ್ನಿಗೋಳಿ, ಪಕ್ಷಿಕೆರೆ ಮತ್ತು ಬೈಕಂಪಾಡಿ ಪರಿಸರದ 63 ಕುಟುಂಬಗಳಿಗೆ ಕಿಟ್ ತಲುಪಿಸಲಾಗಿದ್ದು, ಬಜ್ಪೆಯ ಇಮ್ತಿಯಾಝ್ ಗೋಲ್ಡನ್ ಮತ್ತು ಪಾಟ್ರಿಸಿಯಾ ಡಿ’ಸೋಜ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಶಕ್ತಿನಗರ, ಕುಲಶೇಖರ, ಪದವು, ವಾಮಂಜೂರು, ಅಡ್ಡೂರು, ಪುಂಚಮೆ, ಬಡಕಬೈಲು, ಕರಿಯಂಗಳ ಮತ್ತು ಕಲ್ಲಾಯಿ ಪರಿಸರದಲ್ಲಿ 118 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್‍ನ ಹಕೀಮ್ ಕಲ್ಲಾಯಿ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ನವಾಝ್ ಮತ್ತು ಬಡಕಬೈಲು ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಬಶೀರ್ ತಂಡದಲ್ಲಿದ್ದು ಸಹಕರಿಸಿದ್ದಾರೆ.

ದೇರಳಕಟ್ಟೆ, ಅಳೇಕಲ, ಪನೇಲ್, ಮುಡಿಪು, ಬೋಳಿಯಾರು ಮತ್ತು ಕುತ್ತಾರು ಪದವು ಪರಿಸರದಲ್ಲಿ 105 ಮನೆಗಳಿಗೆ ಕಿಟ್ ವಿತರಿಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಸಿದ್ದೀಕ್ ದೇರಳಕಟ್ಟೆ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಬಿ.ಸಿ.ರೋಡ್, ಗೂಡಿನಬಳಿ, ಮೆಲ್ಕಾರ್, ಲೊರೆಟ್ಟೊ ಪದವು ಮತ್ತು ಬರೈಕಾಡು ಪರಿಸರದಲ್ಲಿ 125 ಕುಟುಂಬಗಳಿಗೆ ಕಿಟ್ ತಲಪಿಸಲಾಗಿದ್ದು, ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಮತ್ತು ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯ ಖತೀಬ್ ಸಿರಾಜ್ ಫೈಝಿ ತಂಡದಲ್ಲಿದ್ದು ಸಹಕರಿಸಿದ್ದಾರೆ.

ಕಂಕನಾಡಿ, ಸೂಟರ್ ಪೇಟೆ, ಜೆಪ್ಪು ಮಜಿಲಾ, ಬಲ್ಮಠ, ಕದ್ರಿ, ಪಡೀಲ್ ಮತ್ತು ಉಜ್ಜೋಡಿ ಪರಿಸರದಲ್ಲಿ 32 ಹಾಗೂ ಅಳಕೆ, ಸುಲ್ತಾನ್ ಬತ್ತೇರಿ, ಉರ್ವ, ಬಂಗ್ರ ಕೂಳೂರು ಮತ್ತು ಕಾವೂರು ಪರಿಸರದಲ್ಲಿ 85 ಕುಟುಂಬಗಳಿಗೆ ಕಿಟ್ ನೀಡಲಾಗಿದೆ.

ಬಂದರ್, ಅತ್ತಾವರ, ಪಾಂಡೇಶ್ವರ, ಬೋಳಾರ ಮತ್ತು ತನ್ನೀರುಬಾವಿ ಪರಿಸರದಲ್ಲಿ 68 ಕುಟುಂಬಗಳಿಗೆ ಕಿಟ್ ನೀಡಲಾಗಿದ್ದು, ಹಿದಾಯ ಫೌಂಡೇಶನ್‍ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಅಝಾದ್ ಮತ್ತು ಝಿಯಾಉದ್ದೀನ್ ಸಹಕರಿಸಿದ್ದಾರೆ.

ಎರಡನೇ ಹಂತದಲ್ಲಿ ಸುಮಾರು 900 ರೇಶನ್ ಕಿಟ್ ಗಳು ಹಾಗೂ ಮೂರನೇ ಹಂತದಲ್ಲಿ 1000 ರಮಝಾನ್ ಕಿಟ್ ಗಳನ್ನು ನೀಡುವ ಯೋಜನೆಯಿದ್ದು, ದೇಣಿಗೆದಾರರು ಮತ್ತು ಪ್ರಾಯೋಜಕರ ಪ್ರೋತ್ಸಾಹಿಸವನ್ನು ಸಂಸ್ಥೆ ನಿರೀಕ್ಷಿಸುತ್ತಿದೆ ಎಂದು ಟೀಂ ಬಿ ಹ್ಯೂಮನ್ ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version