Home Mangalorean News Kannada News ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ

ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ

Spread the love

ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದು ಮಾತ್ರ ಕೇಂದ್ರ ಸರಕಾರದ ಕೆಲಸ, ಆ ರಸ್ತೆಗೆ ಬೇಕಾದ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರುವುದು ಟೋಲ್ ಕೇಂದ್ರಗಳಿಗೆ ರಕ್ಷಣೆ ಕೊಡುವುದು ಎಂಜಿನಿಯರಿಂಗ್ ಸಂಬಂಧಿತ ಕೆಲಸಗಳನ್ನು ನಿರ್ವಹಿಸುವುದು ರಾಜ್ಯ ಸರಕಾರದ ಕೆಲಸ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಕೋಟದಲ್ಲಿ ಶನಿವಾರ ಜಿಲ್ಲೆಯ ಟೋಲ್ ಸಮಸ್ಯೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಬೆಂಗಳೂರಿನಲ್ಲಿ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಟೋಲ್ ವಿಚಾರವಾಗಿ ರಾಜ್ಯದ ಲೋಕೊಪಯೋಗಿ ಸಚಿವರು ಉಡಾಫೆಯಾಗಿ ವರ್ತಿಸಿದ್ದಾರೆ ಎನ್ನುವ ಮಾಹಿತಿ ಇದೆ. ರಾಜ್ಯ ಸರಕಾರದಿಂದ ನಮಗೆ ಯಾವುದೇ ರೀತಿಯ ಸಹಕಾರ ಲಭಿಸುತ್ತಿಲ್ಲ ಈ ಕುರಿತು ಜಿಲ್ಲಾಧಿಕಾರಿಗಳಲ್ಲಿ ಸಹ ಮಾತನಾಡಲಾಗುವುದು. ಮುಂದಿನ ಹೋರಾಟದಲ್ಲಿ ನಾನು ಸಕ್ರೀಯವಾಗಿ ಭಾಗವಹಿಸುತ್ತೇನೆ ಅಲ್ಲದೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ದೇಶದಲ್ಲಿ ಎಲ್ಲಿ ಕೂಡ ಟೋಲ್ ಗಳಲ್ಲಿ ಉಚಿತವಾಗಿ ಸಂಚರಿಸುವ ವ್ಯವಸ್ಥೆ ಇಲ್ಲ ಕಾನೂನು ಪ್ರಕಾರ ಪಾಸ್ ಪಡೆಯಬೇಕೆಂದು ಅಧಿಕಾರಿಗಳು ತನಗೆ ಮಾಹಿತಿ ನೀಡಿದ್ದಾರೆ. ಇಂದು ನಿತಿನ್ ಗಡ್ಕರಿ ಅವರು ಕರ್ನಾಟಕಕ್ಕೆ ಬಂದಿದ್ದು ಇನ್ನೊಮ್ಮೆ ಅವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಮುಂದೆ ಟೋಲ್ ವಿರುದ್ದ ಹೋರಾಟಕ್ಕೆ ಸಿದ್ದತೆ ನಡೆಸಿದ್ದೇವೆ ಎಲ್ಲಾ ಶಾಸಕರೊಂದಿಗೆ ತಾನೂ ಕೂಡ ಇದ್ದು ಹೋರಾಟ ಮುಂದುವರೆಸುತ್ತೇವೆ ಎಂದರು.

ತಾನು ಎಂದಿಗೂ ಸುಳ್ಳು ಹೇಳಿ ಹೋರಾಟದಿಂದ ಒಡಿ ಹೋಗುವ ಜಾಯಮಾನ ನನ್ನದಲ್ಲ. ಕಾನೂನಿನಂತೆ ದೇಶದಲ್ಲಿ ಎಲ್ಲಿಯೂ ಕೂಡ ಟೋಲ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದರು.


Spread the love

Exit mobile version