ಡಾ|ಬಿ.ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡನೀಯ – ರಮೇಶ್ ಕಾಂಚನ್
- ಘನತೆಯ ಬದುಕಿಗೆ ದಾರಿದೀಪ ತೋರಿದವರು ಸಂವಿಧಾನ ಶಿಲ್ಪಿ ಅಂಬೇಡ್ಕರ್
ಉಡುಪಿ: ಇದೀಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಡಾ|ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಹೇಳುವುದು ಫ್ಯಾಷನ್ ಆಗಿದೆ ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದರೆ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಅವರ ಧಾರ್ಷ್ಟ್ರದ ಹೇಳಿಕೆಯನ್ನು ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಅಸಮಾನತೆ, ದ್ವೇಷ ಹರಡುವ ಬಿಜೆಪಿಗರ ಮನೋಸ್ಥಿತಿಯನ್ನು ಸೂಚಿಸುತ್ತದೆ. ಹಾಗೆಯೇ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಗೃಹಸಚಿವ ಅಮಿತ್ ಶಾ ರವರ ಈ ಕೆಟ್ಟ ನಿಲುವಿಗೆ ಅಂಬೇಡ್ಕರ್ ರವರಿಂದ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಾಂತರ ಜನತೆ ಅವರಿಗೆ ಛೀಮಾರಿ ಹಾಕಲಿದ್ದಾರೆ.
ಹಾಗೆಯೇ ನಮಗೆಲ್ಲ ಘನತೆ,ಸಮಾನತೆ, ಸಹಬಾಳ್ವೆಯ ಜೀವನ ನಡೆಸಲು. ಅವಕಾಶ ಕಲ್ಪಿಸಿದ ಮಾನವತಾ ವಾದಿ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ನಾವೆಲ್ಲ ಪ್ರತಿನಿತ್ಯ ಸ್ಮರಿಸುವ ಮೂಲಕ ಗೌರವಿಸಬೇಕಾಗಿದೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.