ಡಾ. ಎಸ್. ನಾರಾಯಣ ಶೆಟ್ಟಿ ಶಿಮಂತೂರು ಅವರ ಛಂದಸ್ಸಿನ ಸಾಧನೆ ಅನನ್ಯವಾದುದು – ಕೆ. ಚಂದ್ರಶೇಖರ ಶೆಟ್ಟಿ

Spread the love

ಡಾ. ಎಸ್. ನಾರಾಯಣ ಶೆಟ್ಟಿ ಶಿಮಂತೂರು ಅವರ ಛಂದಸ್ಸಿನ ಸಾಧನೆ ಅನನ್ಯವಾದುದು – ಕೆ. ಚಂದ್ರಶೇಖರ ಶೆಟ್ಟಿ

ಡಾ. ಎಸ್ ನಾರಾಯಣ ಶೆಟ್ಟಿ ಶಿಮಂತೂರು ಅವರು ಛಂದಸ್ಸಿನ ಮೂಲಕ ಅನನ್ಯ ಸಾಧನೆ ಮಾಡಿದವರು. ಅವರ ಯಕ್ಷಗಾನ ಛಂದೋಂಬುಧಿ ಶಾಸ್ತ್ರಗ್ರಂಥಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ ಲಭಿಸಿದೆ. ಅವರ ಆದರ್ಶ ಅನುಸರಣೀಯ ಎಂದು ಸಂಸ್ಕಾರ ಭಾರತಿಯ ರಾಜ್ಯ ಉಪಾಧ್ಯಕ್ಷರಾಗಿರುವ ಕೆ. ಚಂದ್ರಶೇಖರ ಶೆಟ್ಟಿ ಅವರು ನುಡಿ ನಮನ ಸಲ್ಲಿಸಿದರು.

ಡಾ. ಎಸ್ ನಾರಾಯಣ ಶೆಟ್ಟಿ ಆದರ್ಶ ಗುರುಗಳು. ಶಿಷ್ಯರಲ್ಲಿ ಯಾವುದೇ ವಿತ್ತಾಪೇಕ್ಷೆ ಪಡೆಯದೆ ವಿದ್ಯಾದಾನ ಮಾಡಿದವರು. ಹಳ್ಳಿ ಮದ್ದಿನ ಅನುಭವ ಇದ್ದು ಜನ ಸೇವೆ ಮಾಡಿದರು. ಎಳತ್ತೂರು ಗುತ್ತಿನ ಕಣ್ಮಣಿಯವರು. ಅವರು ಬಿಟ್ಟು ಹೋದ ಅವರ ಶಾಸ್ತ್ರದ ವಿದ್ವತ್ ಅತ್ಯಮೂಲ್ಯ ಸಂಪತ್ತು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್‍ಸಾರ್ ಅಭಿಪ್ರಾಯ ಪಟ್ಟರು.

ತುಳು ಸಾಹಿತ್ಯ ಅಕಾಡೆಮಿಯ ಸಿರಿಚಾವಡಿಯಲ್ಲಿ ನಡೆದ ಡಾ. ಎಸ್. ನಾರಾಯಣ ಶೆಟ್ಟಿ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಸಂಸ್ಮರಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ , ಕುಳಾಯಿ ಮಾಧವ ಭಂಡಾರಿ ಹಾಗೂ ಕನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶಶಿಧರ ಶೆಟ್ಟಿ ನಿಟ್ಟೆ ಅವರು ಕೂಡಾ ನುಡಿನಮನ ಸಲ್ಲಿಸಿದರು. ಡಾ. ದಿನಕರ ಎಸ್.ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು.

ಚಲನಚಿತ್ರ ನಿರ್ದೇಶಕ ಶ್ರೀ ಮಹೇಂದ್ರ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಲೀಲಾಕ್ಷ ಕರ್ಕೇರ, ಶ್ರೀನಾಗೇಶ್ ಕುಲಾಲ್, ಶ್ರೀ ಚೇತಕ್ ಪೂಜಾರಿ, ಶ್ರೀ ಕಡಬ ದಿನೇಶ್ ರೈ, ಶ್ರೀಮತಿ ಮಲ್ಲಿಕಾ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು. ಹಾಗೂ ಇತರ ಮಹನೀಯರು ಸಂಸ್ಮರಣ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ ಅರ್ಪಿಸಿದರು.


Spread the love