Home Mangalorean News Kannada News ಡಾ. ಚೂಂತಾರು ಅವರಿಗೆ ವಿಜ್ಞಾನ ಅಕಾಡೆಮಿ ಪ್ರಶಸ್ತಿ  

ಡಾ. ಚೂಂತಾರು ಅವರಿಗೆ ವಿಜ್ಞಾನ ಅಕಾಡೆಮಿ ಪ್ರಶಸ್ತಿ  

Spread the love

ಡಾ. ಚೂಂತಾರು ಅವರಿಗೆ ವಿಜ್ಞಾನ ಅಕಾಡೆಮಿ ಪ್ರಶಸ್ತಿ  

ಮಂಗಳೂರು : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2018-19 ನೇ ಸಾಲಿನ ಶೇಷ್ಠ ಪುಸ್ತಕ ಪ್ರಶಸ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ ಅರ್ಜಿ ಆಹ್ವಾನಿಸಿತ್ತು ಅದರಂತೆ ಆಗಸ್ಟ್ 26 ರಂದು ಆಯ್ಕೆ ಮಾಡಿರುವ ಪ್ರಶಸ್ತಿ ವಿಜೇತ ಲೇಖಕರ ವಿವರ ಇಂತಿವೆ.

ಶ್ರೇಷ್ಠ ಪುಸ್ತಕ – ವಿಜ್ಞಾನ : ಪುಸ್ತಕ ಅನುರಣನ – ವಿಜ್ಞಾನ ಪ್ರಬಂಧಗಳು ಲೇಖಕರು ಡಾ.ಟಿ.ಎಸ್. ಚನ್ನೇಶ್, ಶ್ರೇಷ್ಠ ಪುಸ್ತಕ: ಕೃಷಿ, ಪುಸ್ತಕ: ಉಸಿರಾಡುವ ಜೀವವಸ್ತು, ಲೇಖಕರು: ತ್ರಿವೇಣ ಸಿ.

ಶ್ರೇಷ್ಠ ಪುಸ್ತಕ – ತಂತ್ರಜ್ಞಾನ: ಪುಸ್ತಕ: ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ – ಹೊಸ ತಂತ್ರಜ್ಷಾನ ಹೊಸ ಅವಕಾಶಗಳು, ಲೇಖಕರು: ಡಾ. ಉದಯ ಶಂಕರ ಪುರಾಣಿಕ, ಪುಸ್ತಕ: ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ, ಲೇಖಕರು: ಪ್ರೊ. ಮಹದೇವಯ್ಯ,

ಶ್ರೇಷ್ಠ ಪುಸ್ತಕ: ವೈದಕೀಯ: 1) ಪುಸ್ತಕ: ಸಂಜೀವಿನಿ ಭಾಗ 2- ಆರೋಗ್ಯ ಮಾರ್ಗದರ್ಶಿ, ಲೇಖಕರು: ಡಾ. ಮುರಲೀಮೋಹನ್ ಚೂಂತಾರು, 2) ಪುಸ್ತಕ: ವೈದ್ಯ-ವಿಜ್ಞಾನ ಲೇಖಕರು: ಡಾ. ರಣಜಿತ ಬೀರಣ್ಣ ನಾಯಕ, ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಕಟಣೆ ತಿಳಿಸಿದೆ.


Spread the love

Exit mobile version