ಡಾ| ಬಿ.ಆರ್ ಶೆಟ್ಟಿ ಲಂಚಕೋರರಾದರೆ ದುಬೈಗೆ ಮೋದಿಯವರ ಭೇಟಿ ಎಷ್ಟು ಸರಿ: ಬ್ಲಾಕ್ ಕಾಂಗ್ರೆಸ್

Spread the love

ಡಾ| ಬಿ.ಆರ್ ಶೆಟ್ಟಿ ಲಂಚಕೋರರಾದರೆ ದುಬೈಗೆ ಮೋದಿಯವರ ಭೇಟಿ ಎಷ್ಟು ಸರಿ: ಬ್ಲಾಕ್ ಕಾಂಗ್ರೆಸ್

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ  ತುರ್ತು ಸಭೆಯು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಸತೀಶ್ ಅಮೀನ್ ಪಡುಕರೆ  ಅಧ್ಯಕ್ಷತೆಯಲ್ಲಿ ಜರುಗಿ ಮಾಜಿ ಶಾಸಕರು ರಫುಪತಿ ಭಟ್‍ರವರ ಹೇಳಿಕೆಯನ್ನು ಪರಾಮರ್ಶಿಸಿ ಖಂಡಿಸಿತು.

ಉಡುಪಿಯಲ್ಲಿ ಪ್ರಸ್ತುತ ಇರುವ 60 ಹಾಸಿಗೆಯ ಹೆಂಗಸರ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು 200 ಹಾಸಿಗೆಯ ಆಸ್ಪತ್ರೆಯನ್ನಾಗಿಸಿ  ಅಭಿವೃದ್ಧಿ ಪಡಿಸಲು ಸರಕಾರದ ಆರೋಗ್ಯ ಇಲಾಖೆ ಹಾಗೂ ಅನಿವಾಸಿ ಭಾರತೀಯ ಡಾ| ಬಿ.ಆರ್. ಶೆಟ್ಟಿ ನಡುವೆ ಒಡಂಬಡಿಕೆಯಾಗಿದೆ. ಈ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳು ಉಚಿತವಾಗಿರುತ್ತದೆ. ನೂತನವಾಗಿ ಕಟ್ಟುವ  400 ಹಾಸಿಗೆಯ  ಸೂಪರ್ ಸ್ಪೆಷಾಲಿಟಿ  ಆಸ್ಪತೆಯಲ್ಲಿ  ವೈದ್ಯಕೀಯ ಸೇವೆಗೆ ಶುಲ್ಕ ವಿಧಿಸಲಾಗುವುದು. 200 ಹಾಸಿಗೆಯ ಉಚಿತ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಉಳ್ಳವರಿಗೆ  ಸೂಪರ್  ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.  200 ಹಾಸಿಗೆಯ ಉಚಿತ  ಸರಕಾರಿ ಆಸ್ಪತ್ರೆಗೆ 150 ಕೋಟಿ ರೂಪಾಯಿ ಹಾಗೂ 400 ಹಾಸಿಗೆಯ  ಸೂಪರ್ ಸ್ಪೆಷಾಲಿಟಿ  ಆಸ್ಪತೆಯ ನಿರ್ಮಾಣ ವೆಚ್ಚ ರೂ.350.00 ಕೋಟಿಯನ್ನು ವ್ಯಯಿಸಲಿದ್ದಾರೆ. ಸೂಪರ್ ಸ್ಪೆಷಾಲಿಟಿ  ಆಸ್ಪತ್ರೆಯ ಆದಾಯದಲ್ಲಿ  ಉಚಿತ ಆಸ್ಪತ್ರೆಯ ಖರ್ಚನ್ನು ಸರಿದೂಗಿಸಲಾಗುವುದು ಎಂದು  ಡಾ| ಬಿ.ಆರ್ ಶೆಟ್ಟಿಯವರು ಸ್ಪಷ್ಟಪಡಿಸಿರುತ್ತಾರೆ. ಈ ಬಗ್ಗೆ ಕದ್ದು ಮುಚ್ಚಿ ವ್ಯವಹಾರ ನಡೆಸುವ ಅಥವಾ ಲಂಚ ಸ್ವೀಕರಿಸುವ ಅವಶ್ಯಕತೆ ಉಡುಪಿಯ ಕೊಡುಗೈ ದಾನಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರಿಗೆ  ಇಲ್ಲ.

ರಘುಪತಿ ಭಟ್ ರವರು ಶಾಸಕರಾಗಿದ್ದಾಗ  ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಪರಭಾರೆ ಮಾಡಲು ಸಂಚು ಹೂಡಿ ದುಬೈ ಉದ್ಯಮಿ ಯೋರ್ವರಿಂದ ರೂ.1.00 ಕೋಟಿ ಮುಂಗಡ ಪಡೆದಿದ್ದು ಡೀಲ್ ಮುಂದಕ್ಕೆ ಹೋಗದೆ ಮುಂಗಡ ಹಿಂದಿರುಗಿಸದಿದ್ದಾಗ ರಘುಪತಿ ಭಟ್‍ರವರ ಬ್ಲೂ ಫಿಲಂನ್ನು  ಬಹಿರಂಗಗೊಳಿಸಿದ್ದು ಅಲ್ಲದೆ ಬಿ.ಜೆ.ಪಿ ಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡದಿದ್ದದ್ದು ಎಲ್ಲರಿಗೂ ತಿಳಿದ ವಿಷಯ ಎಂದು ಸಮಿತಿ ಅಭಿಪ್ರಾಯಪಟ್ಟಿತು. ಡಾ| ಬಿ.ಆರ್ ಶೆಟ್ಟಿ ರವರು ಲಂಚಕೋರರಾದರೆ ಇತ್ತೀಚೆಗೆ ಅವರ ಕೋರಿಕೆಯ ಮೇರೆಗೆ ದುಬೈಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು ಎಷ್ಟು ಸಮಂಜಸ ? ಎಂದು ಸಮಿತಿ ಟೀಕಿಸಿದೆ.

ಸಭೆಯಲ್ಲಿ ಪ್ರಖ್ಯಾತ್ ಶೆಟ್ಟಿ, ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಶಶಿರಾಜ್ ಕುಂದರ್,  ಆರ್.ಕೆ ರಮೇಶ್ ಪೂಜಾರಿ , ಜನಾರ್ಧನ ಭಂಡಾರ್ ಕರ್ , ಸುಕೇಶ್ ಕುಂದರ್ , ವಿಜಯ ಪೂಜಾರಿ, ಹಾರ್ಮಿನ್ಸ್ ನೊರೊನ್ಹ , ವಿಜಯ ಮಂಚಿ ಮೊದಲಾದವರು ಉಪಸ್ಥಿತರಿದ್ದರು.


Spread the love