ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆ

Spread the love

ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆ

ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕಿ, ಸಂಪಾದಕಿ, ಸಾಹಿತಿ, ಸಂಘಟಕಿ ಡಾ.ಮಾಲತಿ ಶೆಟ್ಟಿ ಮಾಣೂರುರವರಿಗೆ ಬೆಂಗಳೂರು ‘ಶ್ರೀ ಸರ್ವೆ ಜನಾಃ ಆರ್ಟ್ಸ್‌ ಮತ್ತು ಕಲ್ಚರಲ್ ಟ್ರಸ್ಟ್ (ರಿ). 7ನೇ ವಾರ್ಷಿಕೋತ್ಸವದ ಪ್ರಯುಕ್ತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ ‘ರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪ್ರಶಸ್ತಿ’ ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಯಾಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗ ಮಂದಿರದಲ್ಲಿ ಮಾರ್ಚ್ 24, 2024 ರಂದು ನಡೆಯಲಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಲಕ್ಷಿತಾ ಗಂಗಾವತಿ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಡಾ.ಮಾಲತಿ ಶೆಟ್ಟಿ ಮಾಣೂರುರವರು 18 ವರುಷದಿಂದ ಸಾಹಿತ್ಯ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಕಳೆದ 11 ವರುಷದಿಂದ ಸಾಹಿತ್ಯ ಪರ ಪತ್ರಿಕೆಯನ್ನು ನಡೆಸುತ್ತಿದ್ದಾರೆ. 9 ಕೃತಿಗಳನ್ನು ಸಾಹಿತ್ಯಲೋಕಕ್ಕೆ ನೀಡಿದ್ದಾರೆ. ಇತರ ಹಿರಿಯ ಕಿರಿಯ ಸಾಹಿತಿಗಳ 38 ಕೃತಿಗಳನ್ನು ಅಮೃತ ಪ್ರಕಾಶ ಪತ್ರಿಕೆ ಸರಿಣಿ ಕೃತಿ ಬಿಡುಗಡೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಮಂಗಳೂರಿನ ಅತ್ತಾವರದಲ್ಲಿ ಪತಿ ಸತ್ಯ ಪ್ರಕಾಶಶೆಟ್ಟಿ ಜೊತೆ ವಾಸವಾಗಿದ್ದಾರೆ. ಹಲವಾರು ರಾಜ್ಯ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.


Spread the love