ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ
ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯು ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಿರಿಯ ಕಲಾ ವಿಮರ್ಶಕ ಎ ಈಶ್ವರಯ್ಯ ಅವರ ಸಂಸ್ಮರಣಾ ಪ್ರಶಸ್ತಿಯನ್ನು ಡಾ. ವಿದ್ಯಾಭೂಷಣ ಅವರಿಗೆ ನೀಡಿ ಗೌರವಿಸಿತು.
ಪ್ರಶಸ್ತಿಯನ್ನು ನೀಡುವ ಸಂದರ್ಭ ಶ್ರೀ ವಿಶ್ವೇಶತೀರ್ಥ ಶ್ರೀಗಳು ವಿದ್ಯಾಭೂಷಣರು ತನ್ನ ಸಂಗೀತದ ಮೂಲಕ ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು. ಕ್ಯಾ ಗಣೇಶ್ ಕಾರ್ಣಿಕ್ ಅಭಿನಂದನಾ ಭಾಷಣ ನೀಡಿದರು.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರು ಕೆ ಶಿವಶಂಕರ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಈಶ್ವರಯ್ಯ ಅವರ ಸುಪುತ್ರ ಶೈಲೇಂದ್ರ ಉಪಸ್ಥತರಿದ್ದರು. ಪ್ರಶಸ್ತಿ ಸ್ವೀಕರಿಸಿದ ವಿದ್ಯಾಭೂಷಣರು ಸಂಗೀತ ಕ್ಷೇತ್ರಕ್ಕೆ ಈಶ್ವರಯ್ಯನವರ ಕೊಡುಗೆಯನ್ನು ಸ್ಮರಿಸಿಕೊಂಡರು.
ಕುಮಾರಸ್ವಾಮಿ ಸ್ವಾಗಿತಿಸಿದರು. ನಿತ್ಯಾನಂದ ರಾವ್ ಪ್ರಾಸ್ತಾವಿಕ ಹಾಗೂ ಧನ್ಯವಾದ ನೀಡಿದರು. ವಿ ಅರವಿಂದ ಹೆಬ್ಬಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಬಳಿಕ ವಿದ್ಯಾಭೂಷಣ ಅವರು ಬರೆದ ‘ನೆನಪೇ ಸಂಗೀತ’ ಪುಸ್ತಕದ ಬಗ್ಗೆ ಲಕ್ಷ್ಮೀಶ ತೋಳ್ಪಾಡಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಪ್ರಾರ್ಥನಾ ಸಾಯಿ ನರಸಿಂಹನ್ ಇವರಿಂದ ಸಂಗೀತ ಕಛೇರಿ ನಡೆಯಿತು. ಇವರಿಗೆ ಸುಮಂತ್ ಮಂಜುನಾಥ್ ವಯಲಿನ್ನಲ್ಲಿ, ಸಜಿನ್ ಲಾಲ್ ಮೃದಂಗದಲ್ಲಿ ಹಾಗೂ ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ನಲ್ಲಿ ಸಹಕರಿಸಿದರು.