ಡಿಕೆಶಿ ಆಸ್ತಿ  ಬಗ್ಗೆ ವಿಚಾರಣೆ ಮಾಡಿದ ಇಡಿಯವರಿಗೆ ಶೋಭಾ ಸಂಪತ್ತು ಕಾಣುತ್ತಿಲ್ಲ – ಶಕುಂತಳಾ ಶೆಟ್ಟಿ

Spread the love

ಡಿಕೆಶಿ ಆಸ್ತಿ  ಬಗ್ಗೆ ವಿಚಾರಣೆ ಮಾಡಿದ ಇಡಿಯವರಿಗೆ ಶೋಭಾ ಸಂಪತ್ತು ಕಾಣುತ್ತಿಲ್ಲ – ಶಕುಂತಳಾ ಶೆಟ್ಟಿ

ಉಡುಪಿ: ಶೋಭಾ ಕರಂದ್ಲಾಜೆ ಜೊತೆ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರ ಜೊತೆ ತಿರುಗಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರ ಬಳಿಯಿರುವ ಸಂಪತ್ತನ್ನು ಜಾರಿ ನಿರ್ದೇಶನಾಲಯದವರು ತನಿಖೆ ಮಾಡುತ್ತಿಲ್ಲವೇ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಶ್ನಿಸಿದ್ದಾರೆ.

ಅವರು ಸೋಮವಾರ ಕಾಪುವಿನಲ್ಲಿ ಕೆಂದ್ರದ ಜನವಿರೋಧಿ ನೀತಿ ಹಾಗೂ ಕಾರ್ಮಿಕ ವಿರೋಧಿ ನೀತಿಯ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉತ್ತರ ಮತ್ತು ದಕ್ಷಿಣ ವಲಯಗಳ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರಕಾರ ವಿರೋಧ ಪಕ್ಷಗಳ ಮುಖಂಡರ ವಿರುದ್ದ ದ್ವೇಷದ ರಾಜಕಾರಣ ಮಾತು್ತಿದ್ದು ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯಗಳ ಮೂಲಕ ಬಂಧಿಲಾಗದೆ. ಅದರೆ ಬಿಜೆಪಿ ಜನಾರ್ದನ ರೆಡ್ಡಿಯ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿದಾಗ ಅವರನ್ನು ಯಾವುದೇ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ತನಿಖೆ ನಡೆಸಿಲ್ಲ. ಕೇಂದ್ರ ಸರಕಾರ ಶಿವಕುಮಾರ್ ವಿಚಾರಣೆ ನಡೆಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಇಷ್ಟೋಂದು ಮೌಲ್ಯದ ಆಸ್ತಿಗಳು ಹೇಗೆ ಬಂದವು ಎಂಬುದರ ಕುರಿತು ಯಾಕೆ ಮೌನವಾಗಿದೆ ಎಂದರು. ಕೇಂದ್ರ ಸರಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದ್ದು ಅದರ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳ ನಾಯಕರ ವಿರುದ್ದ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದು ಆರೋಪಿಸದರು.


ಪುಲ್ವಾಮಾದ ಘಟನೆಯನ್ನು ಮುಂದಿರಿಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ ಹೊರತು ಯಾವುದೇ ಯುದ್ದ ಮಾಡಿ ಗೆದ್ದದ್ದಲ್ಲ. ಸೈನಿಕರ ಸಾವನ್ನೇ ರಾಜಕೀಯ ದಾಳವಾಗಿರಿಕೊಂಡು ಬಿಜೆಪಿ ಹೊಲಸು ರಾಜಕೀಯ ಮಾಡುತ್ತಿದೆ. ಮಹಾತ್ಮಾ ಗಾಂಧಿ ಜನಿಸಿದ ಗುಜರಾತ್ ರಾಜ್ಯದ ಪವಿತ್ರವಾಗಿತ್ತು ಆದರೆ ನೀರವ್ ಮೋದಿಯಂತ ವಂಚಕರಿಗೆ ಬಿಜೆಪಿ ಸರಕಾರ ಬೆಂಬಲಿಸಿ ಇಂದು ಅದನ್ನು ಕಳ್ಳರ ರಾಜ್ಯವನ್ನಾಗಿಸಿ ಇಡೀ ದೇಶವನ್ನೇ ಲೂಟಿ ಹೊಡೆದು ದೇಶವನ್ನು ಬಿಟ್ಟು ಒಡಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ದೇಶದಲ್ಲಿ ಆರ್ಥಿಕತೆಗೆ ಬುನಾದಿ ಹಾಡಿದ ಕರಾವಳಿಯ ಬ್ಯಾಂಕುಗಳನ್ನು ನಷ್ಟದಲ್ಲಿದ್ದ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದರೊಂದಿಗೆ ಕರಾವಳಿಗರ ಅಸ್ತಿತ್ವವನ್ನೇ ಇಲ್ಲದಂತೆ ಮೋದಿ ಸರಕಾರ ಮಾಡಿದೆ ಎಂದರು.
ಪ್ರತಿಭಟನೆಗೂ ಮುನ್ನ ಕಾಪು ವಿದ್ಯಾನಿಕೇತನ್ ಶಾಲೆಯ ಬಳಿಯಿರುವ “ಸಾಗರ್ ರತ್ನ” ಹೋಟೆಲ್ ವಠಾರದಿಂದ ಜಾಥಾ ಹೊರಟು, ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿತು. ಪ್ರತಿಭಟನೆಯ ಬಳಿಕ ರಾಜ್ಯಪಾಲರಿಗೆ ಕಾಪು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

“ಪ್ರತಿಭಟನೆಯ ಸಾರಥ್ಯ ವಹಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಕೇಂದ್ರ ಸರ್ಕಾರ ಜಾರಿಮಾಡಿದ ಮೋಟಾರು ವಾಹನ ಕಾಯ್ದೆಯಿಂದ ಜನರನ್ನು ಹಗಲು ದರೋಡೆ ಮಾಡುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಕಂಡು-ಕೇಳರಿಯದಂತಹ ಭೀಕರ ಮಳೆಯಿಂದಾದ ಪ್ರವಾಹಕ್ಕೆ ತುತ್ತಾಗಿ ನಿರ್ವಸಿತರಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸದಿರುವ ಮತ್ತು ಈವರೆಗೆ ಒಂದು ಬಿಡಿಗಾಸು ಪರಿಹಾರವನ್ನ ಘೋಷಿಸದೇ ಭಂಡತನ ಪ್ರದರ್ಶಿಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ. ಜೆ.ಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋದಧಿಸುತ್ತಿದ್ದೇವೆ.

ಉಡುಪಿ ಜಿಲ್ಲೆಯ ಮರಳು ಸಮಸ್ಯೆಯನ್ನು ಪರಿಹರಿಸಲು ಯಾವುದೇ ರೀತಿಯಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರಿಸದೆ ಜನವಿರೋಧಿ ಧೋರಣೆಯನ್ನನುಸರಿಸುತ್ತಿದೆ. ಜನಸಾಮಾನ್ಯರ ಕಷ್ಟವನ್ನು ಕಂಡು,ಕೇಳಿ ಜಾಣ ಕುರುಡುತನವನ್ನುಕಿವುಡುತನವನ್ನುಪ್ರದರ್ಶಿಸುತ್ತಿದೆ. ಪ್ರಜ್ಞಾವಂತ ನಾಗರಿಕರೆಲ್ಲರೂ ಒಂದಾಗಿ ಪ್ರತಿಭಟಿಸುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ರಾಜ್ಯದ ಯಾವುದೇ ಸಮಸ್ಯೆ ಗೆ ಸ್ಪಂದಿಸದ ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ಗತಿದೆ. ಕೇಂದ್ರ ಗ್ರಹ ಸಚಿವ ಅಮಿತ್ ಶಾ ಜೋಕರ್ ನಂತೆ ವರ್ತಿಸುವ ಮೂಲಕ ಎಲ್ಲರನ್ನೂ ಕಡೆಗಣಿಸುತ್ತಿದ್ದಾರೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿ, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೋ, ಸರಳಾ ಕಾಂಚನ್ ರಮೇಶ್ ಕಾಂಚನ್, ಸುನೀಲ್ ಬಂಗೇರಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love